– ಯಾವ ಮುಖ ಇಟ್ಕೊಂಡು ರಾಜ್ಯಪಾಲರಿಂದ ಸರ್ಕಾರದ ಸಾಧನೆ ಹೇಳಿಸಿಕೊಳ್ತೀರಿ; ವಾಗ್ದಾಳಿ
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.
Advertisement
ವಿಧಾನಸಭೆ ಬಜೆಟ್ ಅಧಿವೇಶನದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವ ದಮನ ಮಾಡುತ್ತಿದೆ. ಅಂಬೇಡ್ಕರ್ ಸಂವಿಧಾನವನ್ನು ಹೆಚ್ಚು ತಿದ್ದುಪಡಿ ಮಾಡಿದ್ದೇ ಕಾಂಗ್ರೆಸ್. ಈಗ ಸರ್ಕಾರ, ರಾಜ್ಯಪಾಲರ ಹಲವು ಅಧಿಕಾರ ಮೊಟಕು ಮಾಡುತ್ತಿದೆ. ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ – ಟ್ರಂಪ್ ಜೊತೆ ವಾಗ್ವಾದದ ಬಳಿಕ ಝಲೆನ್ಸ್ಕಿ ವಿಡಿಯೋ ರಿಲೀಸ್
Advertisement
Advertisement
ಹಲವು ಮಸೂದೆಗಳ ವಿಚಾರದಲ್ಲಿ ರಾಜ್ಯಪಾಲರು ಕೇಳಿರುವುದಕ್ಕೆ ಸ್ಪಷ್ಟನೆ ಕೊಡದೇ ಬೊಬ್ಬೆ ಹಾಕುತ್ತಿದ್ದಾರೆ. ಗ್ಯಾರಂಟಿಗಳಿಂದ ಕಾಂಗ್ರೆಸ್ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ. ಯಾವ ರಾಜ್ಯಪಾಲರಿಗೆ ಅವಹೇಳನ ಮಾಡಿದ್ರೋ ಅದೇ ರಾಜ್ಯಪಾಲರಿಂದ ಇವತ್ತು ಸರ್ಕಾರವನ್ನು ಹೊಗಳಿಸಿಕೊಳ್ಳುತ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು. ಯಾವ ಮುಖ ಇಟ್ಕೊಂಡು ರಾಜ್ಯಪಾಲರಿಂದ ಸರ್ಕಾರದ ಸಾಧನೆ ಹೇಳಿಸಿಕೊಳ್ತೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್ ಕೇಸ್ – ಸತೀಶ್ ಜಾರಕಿಹೊಳಿ ಆಪ್ತೆ ಅರೆಸ್ಟ್
Advertisement
ರಾಜ್ಯಪಾಲರು ಸರಿ ಇಲ್ಲ ಅಂತ ಇವರೇ ಹೇಳಿ ಅವರಿಂದಲೇ ಹೊಗಳಿಸಿಕೊಳ್ಳುವುದು ನಾಚಿಕೆಯ ಸಂಗತಿ. ಈ ವಿಚಾರ ಇಟ್ಟುಕೊಂಡು ನಾವು ಇವತ್ತು ಶಾಸಕರ ಭವನದಿಂದ ವಿಧಾನಸೌಧವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ಶವ ಸೂಟ್‌ಕೇಸ್‌ನಲ್ಲಿ ಪತ್ತೆ – ಓರ್ವ ಶಂಕಿತ ಅರೆಸ್ಟ್
ನಾವು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಲ್ಲ. ಅವರ ಭಾಷಣವನ್ನು ಸಮಾಧಾನವಾಗಿ ಕೇಳುತ್ತೇವೆ. ನಾಳೆಯಿಂದ ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಲಾರ | ಇನ್ನೋವಾ ಕಾರಿಗೆ ಬೈಕ್ ಡಿಕ್ಕಿ – ನಾಲ್ವರು ಸ್ಥಳದಲ್ಲೇ ಸಾವು