ಬೆಂಗಳೂರು: ಸದಾನಂದಗೌಡ ಹಿರಿಯ ನಾಯಕರು ಅವರು ಇಷ್ಟು ಬೇಗ ನಿವೃತ್ತಿ ಆಗಬಾರದಿತ್ತು ಅಂತ ಮಾಜಿ ಡಿಸಿಎಂ, ಶಾಸಕ ಅಶೋಕ್ (R. Ashoka) ತಿಳಿಸಿದ್ದಾರೆ. ಸದಾನಂದಗೌಡ (DV SadanandaGowda) ಚುನಾವಣೆ ರಾಜಕೀಯ ನಿವೃತ್ತಿ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸದಾನಂದಗೌಡರು ಹಿರಿಯ ನಾಯಕರು ಅವರು ಇಷ್ಟು ಬೇಗ ನಿವೃತ್ತಿ ಆಗಬಾರದಿತ್ತು. 6-7 ತಿಂಗಳಿಂದ ಅವರು ನಿವೃತ್ತಿ ಬಗ್ಗೆ ಮಾತಾಡುತ್ತಿದ್ದರು. ಈಗ ನಿರ್ಧಾರ ಮಾಡಿದ್ದಾರೆ. ಅದು ಅವರ ವಯಕ್ತಿಕ ನಿರ್ಧಾರ. ಹೈಕಮಾಂಡ್ ಸೇರಿ ಅವರಿಗೆ ಯಾರು ಒತ್ತಡ ಹಾಕಿಲ್ಲ. ಅವರ ಸ್ವಂತ ನಿರ್ಧಾರ ಮಾಡಿದ್ದಾರೆ. ಅಂತ ತಿಳಿಸಿದರು.
ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಕ್ಕೆ (Bengaluru MP Constituency) ಯಾರಿಗೆ ಟಿಕೆಟ್ ಕೊಟ್ರೆ ಕೆಲಸ ಮಾಡ್ತೀನಿ.ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹೇಳಿದ್ದೇ ಫೈನಲ್ ಯಾರಿಗೆ ಟಿಕೆಟ್ ಕೊಟ್ರು ನಾನು ನಾನು ಸ್ವಾಗತ ಮಾಡ್ತೀನಿ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲಿಸ್ತಾರೆ ವಿಜಯೇಂದ್ರ: ನೂತನ ಅಧ್ಯಕ್ಷರಿಗೆ HDK, ರೇಣುಕಾಚಾರ್ಯ ವಿಶ್
ಪಕ್ಷದ ವಿರುದ್ದ ಅಸಮಾಧಾನಗೊಂಡಿರೋ ಸೋಮಶೇಖರ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸೋಮಶೇಖರ್ ಪಕ್ಷ ಬಿಟ್ಟು ಹೋಗಿಲ್ಲ ಅವರ ಜೊತೆ ನಾನೇ ಮಾತಾಡಿದ್ದೇನೆ. ಈಶ್ವರಪ್ಪ ಹೇಳಿದ್ದಕ್ಕೆ ನಾನು ಹಾಗೆ ಹೇಳಿದೆ ಅಂತ ಸೋಮಶೇಖರ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಸೋಮಶೇಖರ್ ಹೋಗೊಲ್ಲ ಅಂತ ಸ್ಪಷ್ಟಪಡಿಸಿದರು.
ಬಿಜೆಪಿಯಿಂದ ಅನೇಕ ಶಾಸಕರು ಕಾಂಗ್ರೆಸ್ ಗೆ ಬರ್ತಾರೆ ಎಂಬ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ಕಾಂಗ್ರೆಸ್ ನಲ್ಲಿ ದೊಡ್ಡ ಗೊಂದಲ ಇದೆ. ಗೊಂದಲ ಇರೋದಕ್ಕೆ ಡಿಕೆ ಶಿವಕುಮಾರ್ ಬೆಳಗಾವಿಗೆ ಹೋಗಿ ಸಭೆ ಮಾಡಿದ್ದು. ಅಧಿಕಾರಕ್ಕಾಗಿ ಸಿಎಂ, ಡಿಸಿಎಂ ಕಿತ್ತಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನೂರಾರು ಗೊಂದಲ ಇದೆ. ಅದನ್ನ ಮುಚ್ಚಿ ಹಾಕಿಕೊಳ್ಳಲು ಆಪರೇಷನ್ ಕಮಲ ಅಂತ ಹೇಳ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಮಾಡ್ತಿಲ್ಲ. ಮಾಡೋದು ಇಲ್ಲ.ಕಾಂಗ್ರೆಸ್ ಬಳಿ ಆಪರೇಷನ್ ಕಮಲದ ಬಗ್ಗೆ ದಾಖಲಾತಿ ಇದ್ದರೆ ಬಿಡುಗಡೆ ಮಾಡಲಿ ಅಂತ ಸವಾಲ್ ಹಾಕಿದ್ರು.
ಲೋಕಸಭೆ ಚುನಾವಣೆ ಆದ ಬಳಿಕ ರಾಜ್ಯದಲ್ಲಿ ದೊಡ್ಗ ಬದಲಾವಣೆ ಆಗುತ್ತೆ. ಕಾಂಗ್ರೆಸ್ ಶಾಸಕರು ಲೋಕಸಭೆ ಫಲಿತಾಂಶಕ್ಕಾಗಿ ಕಾಯ್ತಿದ್ದಾರೆ. ಫಲಿತಾಂಶ ಬಂದ ಮೇಲೆ ದೊಡ್ಡ ಬದಲಾವಣೆ ರಾಜ್ಯದಲ್ಲಿ ಆಗುತ್ತೆ ಅಂತ ಭವಿಷ್ಯ ನುಡಿದರು.
ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ದ ಸಿಎಂ, ಸಚಿವರ ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ಮಾಡೋದು ಬಿಟ್ಟು ಬರ ಪರಿಹಾರ ಕೊಡಲಿ. ಬಿಜೆಪಿ ಸರ್ಕಾರ ಇದ್ದಾಗ ಕೇಂದ್ರಕ್ಕೆ ಕಾಯದೇ ಬರ ಪರಿಹಾರ ಕೊಟ್ಟಿತ್ತು. ಎರಡು ಪಟ್ಟು ಪರಿಹಾರ ಹೆಚ್ಚಳ ಮಾಡಿದ್ವಿ.ಇವರು ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ಮೇಲೆ ನೊಣ ಬಿದ್ದಿದೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ. ಅದಕ್ಕೆ ಹಣ ಇಲ್ಲ. ಹೀಗಾಗಿ ಕೇಂದ್ರದ ಮೇಲೆ ಬೊಟ್ಟು ಮಾಡ್ತಿದ್ದಾರೆ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: PSI Scam: ಪಿಎಸ್‌ಐ ಮರುಪರೀಕ್ಷೆಗೆ ಹೈಕೋರ್ಟ್ ಆದೇಶ – ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಜಾ
ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನದ ಆಯ್ಕೆ ಆದಷ್ಟು ಬೇಗ ಆಗಲಿದೆ. ಜೆಡಿಎಸ್ ಮೈತ್ರಿ ಮತ್ತು ಪಂಚರಾಜ್ಯ ಚುನಾವಣೆ ಬ್ಯುಸಿಯಿಂದ ಸ್ವಲ್ಪ ತಡ ಆಗಿದೆ.ಆದಷ್ಟು ಬೇಗ ಕೇಂದ್ರದ ನಾಯಕರು ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿದ್ದಾರೆ ಅಂತ ಸ್ಪಷ್ಟಪಡಿಸಿದರು.