ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಸಲು ನಾವು ಸಿದ್ಧರಾಗಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
Advertisement
ಈ ಕುರಿತಂತೆ ವಿಧಾನಸೌಧದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಬಿಬಿಎಂಪಿ ಚುನಾವಣೆ ಮೀಸಲಾತಿ ಒಂದು ವಾರದಲ್ಲಿ ಮಾಡಬೇಕು. ನಾವು ಸಿದ್ಧರಿದ್ದೇವೆ. ಸುಪ್ರೀಂ ಆದೇಶದಂತೆ ನಡೆದುಕೊಳ್ಳುತ್ತೇವೆ. ನಮ್ಮ ಸರ್ಕಾರ ಹಾಗೂ ಪಕ್ಷ ಚುನಾವಣೆಗೆ ಸಿದ್ಧವಾಗಿದೆ. ಚುನಾವಣೆ ನಡೆಸಲು ಯಾವುದೇ ಭೀತಿ ಇಲ್ಲ. ಈಗಾಗಲೇ ಬೂತ್ ಹಾಗೂ ವಾರ್ಡ್ ಮಟ್ಟದಲ್ಲಿ ಸಭೆಗಳನ್ನು ಮಾಡಿದ್ದೇವೆ. ಕಾರ್ಯಕರ್ತರು, ಮುಖಂಡರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಸಂಬಂಧ ನಾವೆಲ್ಲಾ ಸೇರಿ ಹಲವು ಸಭೆ ಮಾಡಿದ್ದೇವೆ. ಚುನಾವಣೆ ದಿನಾಂಕ ಎಲೆಕ್ಷನ್ ಕಮಿಷನ್ ನಿಗದಿ ಮಾಡಲಿದೆ. ಉಳಿದ ಕೆಲಸಗಳು ಸರ್ಕಾರದ ಜವಾಬ್ದಾರಿ. ಸುಪ್ರೀಂ ಕೋರ್ಟ್ ಆದೇಶ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ. ವಾರ್ಡ್ ವಿಂಗಡಣೆ ಸಂಬಂಧಿಸಿದಂತೆ ಅಬ್ಜೆಕ್ಷನ್ ಮಾಡುವವರು ಮಾಡಬಹುದು ಎಂದು ಹೇಳಿದರು. ಇದನ್ನೂ ಓದಿ: ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ
Advertisement
Advertisement
ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಪ್ರವೀಣ್ ನಂತಹ ಯುವಮುಖಂಡನ ಹತ್ಯೆ ಅತ್ಯಂತ ಖಂಡನೀಯ. ಕಿಡಿಗೇಡಿಗಳಿಗೆ ಯಾವುದೇ ಮುಲಾಜು ನೀಡದೇ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಟೆರರಿಸ್ಟ್‌ಗಳು, ಯುವಕರನ್ನು ಹತ್ಯೆ ಮಾಡುವವರು, ಸಮಾಜದ ಕಂಟಕರಿಗೆ ಯುಪಿ ಮಾಡಲ್‍ಗಿಂತ ಕಠಿಣ ಮಾಡಲ್ ತಂದು ಕ್ರಮ ಕೈಗೊಳ್ಳುವುದು ಅನಿವಾರ್ಯ. ಯಾವ ರೀತಿಯಲ್ಲಿಯೂ ಕರುಣೆ ತೋರದೆ ಇಂತವರನ್ನು ಶಿಕ್ಷಿಸಲೇಬೇಕು ಎಂದರು. ಇದನ್ನೂ ಓದಿ: ತರಗತಿಯನ್ನೇ ಮಸಾಜ್ ಪಾರ್ಲರ್ ಮಾಡಿಕೊಂಡ ಶಿಕ್ಷಕಿ – ವಿದ್ಯಾರ್ಥಿಗೆ ಮಸಾಜ್ ಮಾಡುವಂತೆ ಒತ್ತಾಯ