– ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಅನ್ನೋದು ಸುಳ್ಳು ಎಂದ ವಿಪಕ್ಷ ನಾಯಕ
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. ಅವ್ರನ್ನ ಅತಂತ್ರ ಮಾಡಲು ಯಾರು ಕುತಂತ್ರ ಮಾಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಗೇಟ್ ಪಾಸ್ ನೀಡೋದು ಪಕ್ಕಾ ಅಂತ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬಿಸಿ ಸಲಹಾ ಮಂಡಳಿಗೆ ಸಿಎಂ ಅಧ್ಯಕ್ಷರಾದ ವಿಚಾರಕ್ಕೆ ಪ್ರತಿಕ್ರಿಯಿಸಿದ್ರು. ಎರಡೂವರೆ ವರ್ಷದ ಅಗ್ರಿಮೆಂಟ್ ಬಗ್ಗೆ ಕಳೆದ 2 ವರ್ಷಗಳಿಂದಲೂ ಚರ್ಚೆ ಇದೆ. ಡಿಕೆಶಿ ಸಹ ಅಗ್ರಿಮೆಂಟ್‌ಗೆ ಒಪ್ಕೊಂಡಿದ್ದಾರೆ. ನಾನು 6 ತಿಂಗಳಿಂದ ಬದಲಾವಣೆ ಗ್ಯಾರಂಟಿ ಅಂತ ಹೇಳ್ತಿದ್ದೇನೆ. ಸಿದ್ದರಾಮಯ್ಯರನ್ನ ಅತಂತ್ರ ಮಾಡಲು ಕುತಂತ್ರ ಮಾಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯಗೆ ಗೇಟ್‌ಪಾಸ್ ನೀಡೋದು ಪಕ್ಕಾ ಅಂತ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಎಐಸಿಸಿ ಒಬಿಸಿ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಸಿಎಂ ನೇಮಕ – ಪೇಪರ್ ಓದಿ ವಿಚಾರ ಗೊತ್ತಾಯ್ತು ಎಂದ ಸಿದ್ದರಾಮಯ್ಯ!
ಶಾಸಕರೇ ಸಿಎಂ ಬದಲಾವಣೆ ಬಗ್ಗೆ ಮಾತಾಡ್ತಿದ್ದಾರೆ. ರಾಜಣ್ಣ ಕ್ರಾಂತಿ ಆಗುತ್ತೆ ಅಂದಿದ್ದಾರೆ. ಕ್ರಾಂತಿ ಆಗೋದು ಗ್ಯಾರಂಟಿ, ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. 2 ವರ್ಷದಿಂದ ಸರ್ಕಾರ ಟೇಕ್ ಆಫ್ ಆಗಿಲ್ಲ. ಕಾಗೆ ಕೂರೋದಿಕ್ಕೂ ಕೊಂಬೆ ಬೀಳೋದಕ್ಕೂ ಸರಿಯಾಗಿದೆ. ಈಗ ಸಿದ್ದರಾಮಯ್ಯ ಎಐಸಿಸಿ (AICC) ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗೋದು ಗ್ಯಾರಂಟಿ ಆಗಿದೆ. ಸಿದ್ದರಾಮಯ್ಯ ದೆಹಲಿಗೆ ಹೋದರೆ ಇಲ್ಲಿಗೆ ಯಾರು ಬರ್ತಾರೆ? ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬರ್ತಾರೋ? ಪರಮೇಶ್ವರ್ ಬರ್ತಾರೋ? ಡಿಕೆಶಿ ಬರ್ತಾರೊ? ಖರ್ಗೆಯವರಿಗೆ ಒಂದ್ಸಲ ಸಿಎಂ ಆಗೋ ಆಸೆ ಇದೆ. ಅವರೇ ಬರ್ತಾರಾ ನೋಡಬೇಕು. ಖರ್ಗೆ ಪ್ರತೀ ಸಲ ಸಿಎಂ ಹುದ್ದೆ ಹತ್ತಿರ ಬರ್ತಾರೆ, ಕೊನೇ ಕ್ಷಣಕ್ಕೆ ಕೊಕ್ ಆಗ್ತಾರೆ. ಈಗ ಖರ್ಗೆ ಅವರೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ಈಗ ಖರ್ಗೆ ಬಂದರೂ ಬರಬಹುದು. ಡಿಕೆಶಿ ಈಗಾಗಲೇ ಸಿಎಂ ಪೋಸ್ಟ್ ಮೇಲೆ ಟವೆಲ್ ಹಾಕಿ ಕೂತಿದ್ದಾರೆ. ಇನ್ನೂ ಎರಡೂವರೆ ವರ್ಷ ಈ ಸರ್ಕಾರದಲ್ಲಿ ಅತಂತ್ರತೆ ಗ್ಯಾರಂಟಿ ಅಂತ ಲೇವಡಿ ಮಾಡಿದ್ದಾರೆ.
ರಾಯರೆಡ್ಡಿಗೆ ಪ್ರಶಸ್ತಿ ಕೊಡ್ತೀವಿ
ಮುಂದುವರಿದು ನಮ್ಮ ಸರ್ಕಾರ ಬಂದ ಮೇಲೆ ರಾಯರೆಡ್ಡಿಗೆ ಪ್ರಶಸ್ತಿ ಕೊಡ್ತೇವೆ. ಸರ್ಕಾರದ ಬಗ್ಗೆ ರಾಯರೆಡ್ಡಿ ಸತ್ಯ ಹೇಳಿದ್ದಾರೆ. ಹಾಗಾಗಿ ಅವರಿಗೆ ʻಸತ್ಯವಾನ್ ರಾಯರೆಡ್ಡಿʼ ಪ್ರಶಸ್ತಿ ಕೊಡ್ತೇವೆ ಅಂತ ಅಶೋಕ್ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರಿಯುವ ವಿಶ್ವಾಸವಿದೆ: ವಿಜಯೇಂದ್ರ
ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ
ಇದೇ ವೇಳೆ ಹಾಸನದಲ್ಲಿ ಸರಣಿ ಹೃದಯಾಘಾತ ಹಾಗೂ ಕಾಫಿ ಬೆಳೆಗಾರರ ಸಮಸ್ಯೆ ವಿಚಾರ ಕುರಿತು ಮಾತನಾಡಿ, ನಾಳೆ ಹಾಸನ ಭೇಟಿ ಕೊಡ್ತೇನೆ. ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿ ಪಡೀತೇನೆ. ಸಿಎಂ ಹೃದಯಾಘಾತ ಬಗ್ಗೆ ಲಸಿಕೆ ಕಾರಣ ಅಂತ ಸುಳ್ಳು ಹೇಳಿದ್ದಾರೆ. ಸಕಲೇಶಪುರ ಹೋಗಿ ಕಾಫಿ ಬೆಳೆಗಾರರ ಭೇಟಿ ಮಾಡ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾಬ್ ಚಾಲಕರನ್ನೇ ಟಾರ್ಗೆಟ್ ಮಾಡಿ ಹತ್ಯೆ – 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಹಂತಕ ಅರೆಸ್ಟ್