ಯಾದಗಿರಿ: ಸಚಿವ ಅಶ್ವತ್ಥ ನಾರಾಯಣ ಹಾಗೂ ನನ್ನ ನಡುವೆ ಯಾವ ವೈಮನಸ್ಸು ಸಹ ಇಲ್ಲ. ಅದೆಲ್ಲ ಸುಳ್ಳು ಈಗಾಗಲೇ ಅಶ್ವಥನಾರಾಯಣ ಸಹ ಅದನ್ನು ಹೇಳಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಯಾದಗಿರಿಯ ದೇವತ್ಕಲ್ ಗ್ರಾಮದಲ್ಲಿ ಮಾತನಾಡಿದ ಅವರು, ಸಚಿವ ಅಶ್ವತ್ಥ ನಾರಾಯಣ ಹಾಗೂ ನನ್ನ ನಡುವೆ ಯಾವ ವೈಮನಸ್ಸು ಸಹ ಇಲ್ಲ. ಅದೆಲ್ಲ ಸುಳ್ಳು ಈಗಾಗಲೇ ಅಶ್ವತ್ಥ ನಾರಾಯಣ ಸಹ ಅದನ್ನು ಹೇಳಿದ್ದಾರೆ. ಅದು ನನಗೆ ಸಂಬಂಧಪಟ್ಟ ವಿಚಾರ ಸಹ ಅಲ್ಲ. ಯಾಕಂದರೆ ಯಾವುದೇ ಟ್ರಾನ್ಸ್‌ಫರ್ ಮಾಡಲು ನನಗೆ ಅಧಿಕಾರ ಇಲ್ಲ, ಅದು ಮೇನಲ್ಲಿ ಮಾತ್ರ ಅವಕಾಶ. ಯಡಿಯೂರಪ್ಪ, ಅಶ್ವತ್ಥ ನಾರಾಯಣ ಒಬ್ಬರಿಗೆ ಸೂಚಿಸಿದ್ದಾರೆ. ಅದನ್ನು ಮುಖ್ಯಮಂತ್ರಿಗಳು ತಿರ್ಮಾನ ಮಾಡುತ್ತಾರೆ. ಅಶ್ವಥನಾರಾಯಣ ನಾನು ಇಬ್ಬರು ಅಣ್ಣ-ತಮ್ಮದಿರಂತೆ. ನಮ್ಮ ನಡುವೆ ಯಾವ ವ್ಯತ್ಯಾಸ ಹಿಂದೆನು ಇಲ್ಲ ಮುಂದೆನು ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಪೊಲೀಸ್‍ಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
Advertisement
ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವದು ಒಳ್ಳೆಯದು. ಭಗವದ್ಗೀತೆ ಇವತ್ತಿಂದು ಅಲ್ಲ, ಅದಕ್ಕೆ 500 ವರ್ಷಗಳು ಇತಿಹಾಸವಿದೆ. ಭಾರತದಲ್ಲಿ ಇದನ್ನು ಜಾರಿ ಮಾಡದೇ ಏನ ಪಾಕಿಸ್ತಾನ, ಅರಬ್ ದೇಶಗಳಲ್ಲಿ ಜಾರಿಗೆ ತರಲು ಸಾಧ್ಯನಾ? ಆಯಾ ದೇಶದಲ್ಲಿ ಆಯಾ ಧರ್ಮಕ್ಕೆ ಸಂಬಂಧಪಟ್ಟಂತೆ ಪಠ್ಯದಲ್ಲಿ ಅಳವಡಿಸಲಾಗಿದೆ. ಮುಂದಿನ ವರ್ಷದ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬಂದ್ರೆ ಬಹಳ ಒಳ್ಳೆಯದಾಗುತ್ತದೆ. ಇದು ಒಂದು ಸನಾತನ ಧರ್ಮ ಇಲ್ಲಿ ಬ್ರಿಟಿಷರು, ಬಾಬರ್ ಬಂದು ಹೋಗಿದ್ದಾರೆ. ಅದು ನಮ್ಮ ಸಂಸ್ಕೃತಿ ಅಲ್ಲ ಎಂದಿದ್ದಾರೆ.
Advertisement
ಸರ್ಕಾರ ಶಿಕ್ಷಣಕ್ಕಾಗಿ ಬಹಳಷ್ಟು ಹಣ ಖರ್ಚು ಮಾಡುತ್ತದೆ. ಮದರಸಾಗಳಲ್ಲಿ ಸಹ ವಿಜ್ಞಾನ, ಗಣಿತ ಕಲಿಬೇಕು. ಆ ವಿದ್ಯಾರ್ಥಿ ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಿಯಬೇಕು. ಆ ಮಕ್ಕಳು ಸಹ ಅಂತರರಾಷ್ಟ್ರೀಯ ರಾಷ್ಟ್ರಮಟ್ಟದಲ್ಲಿ ಉದ್ಯೋಗ ಸಿಗಬೇಕು. ಮದರಸಾದಿಂದ ಬೆಂಗಳೂರಲ್ಲಿ ಮಾತ್ರ ಅಲ್ಲ ದೇಶದ ಯಾವ ಕಡೆ ಹೋದರು ಬೆಲೆ ಸಿಗಬೇಕು. ಹೀಗಾಗಿ ಅದರ ಚಿಂತನಯಷ್ಟೇ ಈಗ ಸರ್ಕಾರ ಮಾಡುತ್ತಿದೆ. ಇದನ್ನು ಜನರ ಮುಂದೆ ಇಟ್ಟು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೋಳ್ಳಲಾಗುವುದು ಎಂದಿದ್ದಾರೆ.