ಬೆಂಗಳೂರು: ಸ್ವಾಮೀಜಿಗಳಿಗೆ ಯಾರಾದ್ರೂ ಒತ್ತಡ ಹಾಕೋದಕ್ಕೆ ಆಗುತ್ತಾ? ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಅವರಿಗೆ ಜ್ಞಾನ ಕಡಿಮೆ ಅನಿಸುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ (R Ashok) ವ್ಯಂಗ್ಯವಾಡಿದರು.
ಮೀಸಲಾತಿ ವಿಚಾರವಾಗಿ ಸ್ವಾಮೀಜಿಗಳಿಗೆ ಕರೆ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ವ್ಯವಹಾರಿಕ ಜ್ಞಾನ ಇಲ್ಲ ಅನ್ಸುತ್ತೆ. ಈ ರೀತಿ ಹೇಳಿಕೆ ನೀಡುವುದು ಸ್ವಾಮೀಜಿಗಳಿಗೆ ಅವಮಾನ ಮಾಡಿದಂತೆ. ಕಾಂಗ್ರೆಸ್‍ನವರಿಗೆ (Congress) ಮುಸ್ಲಿಂ ಬಗ್ಗೆ ಅತಿ ಪ್ರೀತಿ ಇದೆ. ಸಂವಿಧಾನ ತಿದ್ದುಪಡೆ ಮಾಡುವವರು ಅವರು. ಆದರೆ ಯಾರದ್ದೋ ಕಿತ್ತು ಯಾರಿಗೋ ಕೊಟ್ರು ಅಂಥ ಕೇಳೋದಿಕ್ಕೆ ನೀವ್ಯಾರು? ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಮಾಡಲಿಲ್ಲ. ನಮ್ಮ ಸರ್ಕಾರ ಮಾಡಿದ್ದನ್ನು ಸಹಿಸಿಕೊಳ್ಳುವುದಕ್ಕೆ ಆಗ್ತಾ ಇಲ್ಲ ಎಂದು ಕಿಡಿಕಾರಿದರು.
ಒಳ ಮೀಸಲಾತಿನೂ ನಾವು ಕೊಟ್ಟಿದ್ದೇವೆ. ಎಲ್ಲಾ ಕಡೆ ಶಾಂತಿಯುತವಾಗಿ ಒಪ್ಪಿಕೊಂಡಿದ್ದಾರೆ. ಥಕ ಥಕ ಅಂತ ಕುಣೋತಾ ಇರೋದು ಕಾಂಗ್ರೆಸ್ ಅವರು ಮಾತ್ರ. ಹಸಿ ಮೆಣಸಿನಕಾಯಿ ಹೊಟ್ಟೆಯಲ್ಲಿ ಹಾಕಿದಂಗೆ ಆಗಿದೆ. ತಾಕತ್ ಧಮ್ ಇದ್ರೆ ವಾಪಸ್ ತೆಗೀಲಿ ನೋಡೋಣ. ಹೆಚ್ಚು ಬೇಕು ಅಂದಿದ್ದಾರೆ ಅದನ್ನು ನೋಡೋಣ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಿಟಿ ರವಿ ವಿರುದ್ಧ ಡಿಕೆಶಿ ಮಾನನಷ್ಟ ಕೇಸ್?
ಕಾಡಿ ಬೇಡೋದು ಸಿದ್ದರಾಮಯ್ಯ, ಡಿಕೆ ಮಾತ್ರ. ಕಾಂಗ್ರೆಸ್‍ನವರು ಈ ರಾಜ್ಯದಲ್ಲಿ ಭಿಕ್ಷುಕರು ಇದ್ದ ಹಾಗೆ. ಎಲ್ಲೂ ಕಾಂಗ್ರೆಸ್ ಇಲ್ಲ, ಭಿಕ್ಷುಕರು ಇದ್ದಂಗ ಅಷ್ಟೆ ಅವರು. ಸುರ್ಜೇವಾಲಾ ಅವರು ಕರ್ನಾಟಕ ಜನರಿಗೆ, ಸಿಎಂ ಸ್ಥಾನಕ್ಕೆ ಅವಮಾನ ಮಾಡಿರೋದು. ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ಮಾಡ್ತಿವೆ: ಬೊಮ್ಮಾಯಿ