ಹಾಸನ: ಹಲವು ದಶಕಗಳಿಂದ ರಾಜಕೀಯ ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್ ದೇಶದಲ್ಲಿನ ಭ್ರಷ್ಟಾಚಾರದ ಪಿತಾಮಹವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40% ಕಮಿಷನ್ ಆರೋಪವನ್ನು ಮಾಡುವ ಮೂಲಕ ಕಾಂಗ್ರೆಸ್‍ನವರು ಬಿಜೆಪಿ ಮೇಲೆ ಗೂಬೆ ಕೂರಿಸಿದ್ದಾರೆ. ಆದರೆ ಸತತ 60 ವರ್ಷಗಳ ಕಾಲ ಇಡೀ ದೇಶ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಇದನ್ನೆಲ್ಲಾ ನೋಡಿ ಭೂತದ ಬಾಯಲ್ಲಿ ಭಗವದ್ಗೀತೆ ಮಾತನಾಡಿದ ಹಾಗೆ ಅನಿಸುತ್ತದೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಕಾಂಗ್ರೆಸ್‍ನಿಂದ ಪಾಠ ಕಲಿಯುವ ಅವಶ್ಯಕತೆ ಬಿಜೆಪಿಗಿಲ್ಲ. ನಿನ್ನೆ ನಡೆದ ಗುತ್ತಿಗೆದಾರರ ಸಭೆಯಲ್ಲಿ ಯಾರು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಟೆಂಡರ್ ಪರಿಶೀಲನೆ ಮಾಡಲು ಮುಖ್ಯಮಂತ್ರಿಗಳು ಹೊಸ ಸಮಿತಿ ರಚನೆ ಮಾಡಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಅಣ್ಣ-ತಮ್ಮಂದಿರ ಹಾಗೆ. ಇಂದು ಸಹ ಹೆಚ್.ಡಿ. ದೇವೇಗೌಡರು ಕಾಂಗ್ರೆಸ್ ಪರ ಒಲವನ್ನು ತೋರುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರೇವಣ್ಣ ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ, ಹಾಸನ ಕ್ಷೇತ್ರದವರೆಗೂ ಬರೋದು ಬೇಡ: ಆರ್.ಅಶೋಕ್
Advertisement
ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರುವ ವಿಚಾರವಾಗಿ ಮಾತನಾಡಿದ ಅವರು, ಒಬ್ಬರ ಹೆಸರು ಬೇಡ. ಬಹಳ ಜನ ಈ ತಿಂಗಳಳೊಳಗೆ ಬಿಜೆಪಿಗೆ ಸೆರ್ಪಡೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಿ ಹಗರಣಗಳ ಬುಡ ಅಗೆದಾಗ, ಅದರ ಬೇರುಗಳು ಕೆಪಿಸಿಸಿ ಕಚೇರಿಯನ್ನು ತಲುಪುತ್ತಿದೆ: ಬಿಜೆಪಿ
Advertisement
ಯುಪಿ ಮಾದರಿ ರಣತಂತ್ರ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ರೀತಿಯಲ್ಲೇ ನಾವು ಕರ್ನಾಟಕದಲ್ಲಿ ಜಯಗಳಿಸುತ್ತೇವೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ ನೀಲನಕ್ಷೆ ನೀಡಿದೆ. ಉತ್ತರಪ್ರದೇಶ ಚುನಾವಣೆಯ ಮಾದರಿಯಲ್ಲಿ ರಣತಂತ್ರ ಮಾಡುವ ಮೂಲಕ ನಾವು ಕರ್ನಾಟಕದಲ್ಲಿ ಜಯಭೇರಿ ಭಾರಿಸುತ್ತೆವೆ ಎಂದು ಭರವಸೆ ವ್ಯಕ್ತಪಡಿಸಿದರು.