ಬೆಂಗಳೂರು: “ನಾನೂ ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದೆ. ನನ್ನ ಜೊತೆ ಸುರೇಶ್ ಕುಮಾರ್‌ರನ್ನೂ ಬಂಧಿಸಲಾಗಿತ್ತು. ಒಂದು ತಿಂಗಳು ಜೈಲಿನಲ್ಲಿಟ್ಟು ಚಿತ್ರಹಿಂಸೆ ಕೊಟ್ಟಿದ್ದರು. ಮಲಗೋಕೆ ಸಿಮೆಂಟ್ ಕಟ್ಟೆ ಕೆಳಗೆ ನನಗೆ ಜಾಗ ಸಿಕ್ಕಿತ್ತು, ಸರಿಯಾಗಿ ಊಟವೂ ಕೊಡ್ತಿರಲಿಲ್ಲ ನಮಗೆ, ಇಷ್ಟು ಕಿರುಕುಳ ಕೊಟ್ಟ ಕಾಂಗ್ರೆಸ್ ಇವತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಸಂವಿಧಾನಕ್ಕೆ ಅಪಚಾರ ಮಾಡಿದ ಕಾಂಗ್ರೆಸ್ ನಮ್ಮ ಮೇಲೆ ಆರೋಪ ಮಾಡ್ತಿದೆ” 1975ರ ತುರ್ತು ಪರಿಸ್ಥಿತಿಯ (1975 Emergency) ಕರಾಳತೆ ನೆನೆದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka) ಆಡಿದ ಆಕ್ರೋಶದ ನುಡಿಗಳಿವು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ (BJP) ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿರುವ ಹಳೇ ಸೆಂಟ್ರಲ್ ಜೈಲಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಜೈಲಿನ ಬ್ಯಾರಕ್‌ನೊಳಗೆ ನಿಂತು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ಹೊರಹಾಕಿದರು. ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಪರಿಷತ್ ಸದಸ್ಯರಾದ ರವಿಕುಮಾರ್, ಚಲವಾದಿ ನಾರಾಯಣ ಸ್ವಾಮಿ, ಕಾರ್ಯಕರ್ತರು ಪ್ರತಿಭಟನೆಯಲ್ಲಿ (BJP Protest) ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಂವಿಧಾನವನ್ನ ಮೂಲೆಗೆ ತಳ್ಳಿ ಸರ್ವಾಧಿಕಾರಿ ಪ್ರವೃತ್ತಿ ತೋರಿದವರು ಇಂದಿರಾಗಾಂಧಿ. ತುರ್ತುಪರಿಸ್ಥಿತಿ ಹೇರಿ ನ್ಯಾಯಾಂಗ, ಪತ್ರಿಕಾಂಗವನ್ನ ಹತ್ತಿಕ್ಕಿದ್ದರು. ಘಟಾನುಘಟಿ ನಾಯಕರನ್ನು ಜೈಲಿಗೆ ಹಾಕಲಾಯಿತು ಎಂದು ಆಕ್ರೋಶ ಹೊರಹಾಕಿದರು.
ನಾನೂ ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದೆ. ನನ್ನ ಜೊತೆ ಸುರೇಶ್ ಕುಮಾರ್‌ರನ್ನೂ ಬಂಧಿಸಲಾಗಿತ್ತು. ಒಂದು ತಿಂಗಳು ಜೈಲಿನಲ್ಲಿಟ್ಟು ಚಿತ್ರಹಿಂಸೆ ಕೊಟ್ಟಿದ್ದರು. ಮಲಗೋಕ್ಕೆ ಸಿಮೆಂಟ್ ಕಟ್ಟೆ ಕೆಳಗೆ ನನಗೆ ಜಾಗ ಸಿಕ್ಕಿತ್ತು, ಸರಿಯಾಗಿ ಊಟವೂ ಕೊಡ್ತಿರಲಿಲ್ಲ ನಮಗೆ, ಇಷ್ಟು ಕಿರುಕುಳ ಕೊಟ್ಟ ಕಾಂಗ್ರೆಸ್ ಇವತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಸಂವಿಧನಾಕ್ಕೆ ಅಪಚಾರ ಮಾಡಿದ ಕಾಂಗ್ರೆಸ್ ನಮ್ಮ ಮೇಲೆ ಆರೋಪ ಮಾಡ್ತಿದೆ ಎಂದು ಕರಾಳ ದಿನವನ್ನು ನೆನೆದರು. ಇದನ್ನೂ ಓದಿ: ದರ್ಶನ್ ಪ್ರಕರಣ: ಕಾನೂನಿಗಿಂತ ಯಾರು ದೊಡ್ಡವರಿಲ್ಲ, ನ್ಯಾಯ ಸಿಗಬೇಕು- ವಿನೋದ್ ಪ್ರಭಾಕರ್
ಯಾವ ಮುಖ ಇಟ್ಕೊಂಡು ಕಾಂಗ್ರೆಸ್‌ನವರು ಮತ ಕೇಳ್ತಾರೆ? ಅಂಬೇಡ್ಕರ್, ಸಂವಿಧಾನ, ದೇಶದ ಜನಕ್ಕೆ ಮೋಸ ಮಾಡಿದ ಕಾಂಗ್ರೆಸ್ ಈ ದೇಶದ ಜನರ ಕ್ಷಮೆ ಕೇಳಬೇಕು. ಮಾನಮರ್ಯಾದೆ ಇದ್ದರೇ ರಾಹುಲ್ ಗಾಂದಿ ಇದರ ಬಗ್ಗೆ ಮಾತಾಡಬೇಕು. ತುರ್ತುಪರಿಸ್ಥಿತಿ ಹೇರಿದ್ದು ತಪ್ಪಾ, ಸರಿನಾ ಅಂತ ಹೇಳಲಿ? ಎಂದು ಪ್ರಶ್ನಿಸಿದರು.
ಇದೇ ವೇಳೆ ಸಂವಿಧಾನ ಬದಲಾವಣೆ ಹೇಳಿಕೆ ವಿಚಾರ ಕುರಿತು ಮಾತನಾಡಿ, ಬಿಜೆಪಿಯಿಂದ ಸಂವಿಧಾನ ಮಾಡುವ ಪ್ರಶ್ನೆಯೇ ಇಲ್ಲ. ಸಂವಿಧಾನ ನಮಗೆ ಭಗವದ್ಗೀತೆ ಅಂತ ಮೋದಿಯೇ ಹೇಳಿದ್ದಾರೆ. ಸಂವಿಧಾನಕ್ಕೆ ಅಪಚಾರ ಎಸಗಿದ ಪಾಪಿಗಳು ಕಾಂಗ್ರೆಸ್‌ನವರು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ರೈತರ ಬೃಹತ್ ಪ್ರತಿಭಟನೆ – ಮೈಮೇಲೆ ಸಗಣಿ ಬಳಿದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ