ಬೆಂಗಳೂರು: ಸಚಿವ ಆರ್. ಅಶೋಕ್ (R.Ashoka) ಮತ್ತು ಸಚಿವ ವಿ. ಸೋಮಣ್ಣ (V.Somanna) ನಡುವಿನ ಗೊಂದಲದಿಂದ ಇಂದು ಆಯೋಜಿಸಿದ್ದ ಬಿಜೆಪಿ (BJP) ವಿಜಯಸಂಕಲ್ಪ ರಥಯಾತ್ರೆ ಮೊಟಕುಗೊಂಡ ಪ್ರಸಂಗ ನಾಗರಭಾವಿಯಲ್ಲಿ ನಡೆದಿದೆ.
ಬೆಳಗ್ಗೆ ಗೋವಿಂದರಾಜನಗರದ ಟೋಲ್‍ಗೇಟ್ ನಿಂದ ನಾಯಂಡನಹಳ್ಳಿವರೆಗೂ (Nayandanahalli) ವಿಜಯ ಸಂಕಲ್ಪ ರಥಯಾತ್ರೆ ನಿಗದಿಯಾಗಿತ್ತು. ಯಾತ್ರೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಭೂಪೇಂದ್ರ ಯಾದವ್ (Bhupender Yadav), ನಾಗರಭಾವಿ (Nagarabhavi) ವೃತ್ತದವರೆಗೂ ಇದ್ದು ಬಳಿಕ ಹೊರಟರು. ಇವರ ಹಿಂದೆಯೇ ಅಶೋಕ್ ಸಹ ಇಳಿದು ನಡೆದಿದ್ದಾರೆ. ನಾಯಂಡಹಳ್ಳಿವರೆಗೂ ರಥಯಾತ್ರೆಯಲ್ಲಿರುವಂತೆ ಸೋಮಣ್ಣ ಕೇಳಿಕೊಂಡ್ರೂ ಅಶೋಕ್ ಒಪ್ಪದೇ ಹೊರ ಹೋಗಿದ್ದಾರೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕ್ರೆಡಿಟ್ ನಮ್ಮ ಸರ್ಕಾರಕ್ಕೇ ಸಲ್ಲಬೇಕು: ಪ್ರತಾಪ್ ಸಿಂಹಗೆ ಸಿದ್ದು ಟಾಂಗ್
Advertisement
ಇದರಿಂದ ಕೋಪಗೊಂಡ ಸೋಮಣ್ಣ ನಾಗರಭಾವಿಯಲ್ಲೇ ರಥಯಾತ್ರೆ ಮೊಟಕುಗೊಳಿಸಿದ್ದಾರೆ. ತಮ್ಮ ಕ್ಷೇತ್ರದಲ್ಲೇ ರಥಯಾತ್ರೆ ನಡೆಯುತ್ತಿದ್ದರೂ ಸೋಮಣ್ಣ ಯಾತ್ರೆ ಬಗ್ಗೆ ಚಿಂತಿಸದೆ ಹೊರಟಿದ್ದಾರೆ. ಬೆಳಗ್ಗೆ ತಾನೇ ಸೋಮಣ್ಣರನ್ನು ಹೊಗಳಿದ್ದ ಅಶೋಕ್, ಸೋಮಣ್ಣ ಕ್ಷೇತ್ರದಲ್ಲಿ ನಡೆದ ರಥಯಾತ್ರೆಯ ಬಗ್ಗೆ ನಿರಾಸಕ್ತಿ ತೋರಿದ್ದಾರೆ. ಇದನ್ನೂ ಓದಿ: ಮಂಡ್ಯ ‘ಕೈ’ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಕಾರಿಗೆ ಮೊಟ್ಟೆ ಎಸೆದ ಕಾರ್ಯಕರ್ತರು