ಬೆಂಗಳೂರು: ಕಾಂಗ್ರೆಸ್‍ನ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ ಕೂರಿಸಿದ್ದಾರೆ ಎಂದು ಸಚಿವ ಆರ್. ಅಶೋಕ್ (R Ashok) ಲೇವಡಿ ಮಾಡಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಬಸ್ ಯಾತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‍ನವರ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ (Mallikarjun Kharge) ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ ಕೂರಿಸಿದ್ದಾರೆ. ಆದರೆ ಆ ಡ್ರೈವರ್ ಬ್ಯಾಕ್‍ಸೀಟ್‍ನಲ್ಲಿ ಸೋನಿಯಾ ಗಾಂಧಿ (Sonia Gandhi) ಇದ್ದಾರೆ. ಬಸ್‍ನ ಸ್ಟೇರಿಂಗ್, ಸೀಟು ಎಲ್ಲವೂ ಸೋನಿಯಾ ಗಾಂಧಿ ಕೈಯಲ್ಲಿ ಇರಲಿದೆ. ಖರ್ಗೆ ರಿಮೋಟ್ ಕಂಟ್ರೋಲ್ ಅಧ್ಯಕ್ಷ ಅಷ್ಟೇ ಎಂದು ಟೀಕಿಸಿದರು.
Advertisement
Advertisement
ಕಾಂಗ್ರೆಸ್ ಅವರು ಬಸ್, ರೈಲು, ಏನಾದರೂ ಬಿಡಲು ಕರ್ನಾಟಕದ (Karnataka) ಜನ ಇವರನ್ನು ನಂಬುವುದಿಲ್ಲ. ಕಾಂಗ್ರೆಸ್‍ಗೆ ಇದು ಕೊನೆಯ ಚುನಾವಣೆ. ಕಾಂಗ್ರೆಸ್‍ನ ಶವ ಪೆಟ್ಟಿಗೆಯ ಕೊನೆ ಮೊಳೆ ಕರ್ನಾಟಕದ ರಾಜ್ಯದ ಜನ ಹೊಡೆಯುತ್ತಾರೆ ಎಂದರು.
Advertisement
ಎಸ್‍ಸಿ, ಎಸ್‍ಟಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ (BJP) ನಾಟಕವಾಡ್ತಿದೆ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮತ್ತು ಅವರ ತಂಡವೇ ನಾಟಕ ಕಂಪನಿ. ಭಾರತ್ ಜೋಡೋ ಪಾದಯಾತ್ರೆ ಮಾಡಿ ನಾಟಕ ಕಂಪನಿ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಓಡೋದು, ಡಿಪ್ಸ್ ಹೊಡೆಯೋದು ಮಾಡಿ ಇದೊಂದು ನಾಟಕ ಕಂಪನಿ ಅಂತಾ ಸಾಬೀತು ಮಾಡಿದೆ ಎಂದು ಕುಟುಕಿದರು.
Advertisement
ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿ ನೇಮಕ ಮಾಡಿದ್ದು ಸಿದ್ದರಾಮಯ್ಯ ಅಲ್ಲ. ಕುಮಾರಸ್ವಾಮಿಯಾಗಿದ್ದಾರೆ. ಕುಮಾರಸ್ವಾಮಿಗೂ ಸಿದ್ದರಾಮಯ್ಯಗೂ ಎಣ್ಣೆ ಸಿಗೇಕಾಯಿ. ಸಿದ್ದರಾಮಯ್ಯ ಮಾತು ಕೇಳಿ ಕುಮಾರಸ್ವಾಮಿ ಕಮಿಟಿ ನೇಮಕ ಮಾಡಿಲ್ಲ. ಸಿದ್ದಾರಾಮಯ್ಯಗೂ ಕಮಿಟಿಗೂ ಸಂಬಂಧ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಸಿರುಗಟ್ಟಿಸಿ ವೃದ್ಧೆ ಕೊಲೆ- ಅತ್ಯಾಚಾರದ ಆರೋಪ ಮಾಡಿದ ಗ್ರಾಮಸ್ಥರು
ಕಾಂಗ್ರೆಸ್ 60 ವರ್ಷ ಆಳಿದ್ದರೂ SC-ST ಸಮುದಾಯಕ್ಕೆ ಏನು ಮಾಡಿದ್ರು? ಆದರೆ ಧೈರ್ಯ ಮಾಡಿ, ಚಾಣಕ್ಯ ನಡೆಯಿಂದ ನಮ್ಮ ಸಿಎಂ ಜೇನು ಗೂಡಿಗೆ ಕಲ್ಲು ಹೊಡೆದು ಮೀಸಲಾತಿ ಕೊಡಲಾಗಿದೆ. ಬಿಜೆಪಿ ಯಾವತ್ತು ರಿಯಲ್ ಶೋ ಮಾಡೋ ಪಕ್ಷ. ಕಾಂಗ್ರೆಸ್‍ನದ್ದು ನಾಟಕ ಕಂಪನಿಯಾಗಿದೆ. ನುಡಿದಂತೆ ನಡೆದ ಸರ್ಕಾರ ಬಿಜೆಪಿ ಸರ್ಕಾರ. ಸುಳ್ಳು ನಾಟಕ ಕಂಪನಿ ಕಾಂಗ್ರೆಸ್ ಎಂದರು. ಇದನ್ನೂ ಓದಿ: ಸೂರ್ಯಗ್ರಹಣದ ಎಫೆಕ್ಟ್ – ಬಸ್‍ಗಳು, ಹೋಟೆಲ್‍ಗಳು ಖಾಲಿ, ಖಾಲಿ