ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿ (BJP) ಸರ್ಕಾರವಿದ್ದರೇ ಹೆಚ್ಚು ಮಳೆ ಬರುತ್ತದೆ. ಇದರಿಂದಾಗಿ ತಮಿಳುನಾಡಿನಿಂದ ಕಾವೇರಿ ಕಾಟ ಕೂಡ ತಪ್ಪಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ (R Ashok) ಹೇಳಿದರು.
ಕೂಡ್ಲಿಗಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವಿದ್ದರೇ ಬರಗಾಲವೇ ಬರುವುದಿಲ್ಲ. ಅಷ್ಟೇ ಅಲ್ಲದೇ ಅತಿ ಹೆಚ್ಚು ಮಳೆ ಬರುವುದರಿಂದಾಗಿ ತಮಿಳುನಾಡು (Tamilu Nadu) ಬೇಡ ಹೇಳುವಷ್ಟು ನೀರು ಬಿಟ್ಟಿದ್ದೇವೆ ಎಂದರು.
Advertisement
Advertisement
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಕಂದಾಯ ದಾಖಲೆ ಮನೆ ಬಾಗಿಲಿಗೆ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ. ವಿಜಯನಗರ ಜಿಲ್ಲೆ ಮಾಡಲು ಮೊದಲು ಕಂದಾಯ ಇಲಾಖೆ ಶಿಫಾರಸು ಮಾಡಿದ್ದೆವು ಎಂದ ಅವರು, ಭೂಕಬಳಿಕೆ ಕಾನೂನು ಬದಲಾವಣೆ ಮಾಡಿದ್ದೇವೆ. ರೈತರ ಮೇಲೆ ಕೇಸ್ ಹಾಕುವುದಿಲ್ಲ ಎಂದು ಭರವಸೆ ನೀಡಿದರು.
Advertisement
ಭ್ರಷ್ಟಾಚಾರ ಮತ್ತು 40% ಕಮಿಷನ್ ಬಗ್ಗೆ ನಾವು ಮಾತನಾಡಿದರೆ ಲಿಂಗಾಯತ ವಿರೋಧಿ ಅಂತ ಹೇಳ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ (Siddaramaiah) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಸವರಾಜ ಬೊಮ್ಮಾಯಿಯವರು (Basavaraj Bommai) ಜೈಲಿಗೆ ಹೋಗಿ ಬಂದಿಲ್ಲ. ದೆಹಲಿಯಿಂದ ರಾಜ್ಯದವರೆಗೂ ಇರುವ ಕಾಂಗ್ರೆಸ್ (Congress) ನಾಯಕರು ಜಾಮೀನಿನ ಮೇಲೆ ಇದ್ದಾರೆ. ಯಾರ್ಯಾರು ಕಮಿಷನ್ ತಿಂದಿದ್ದಾರೋ ಅವರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ತಿರುಗೇಟು ನೀಡಿದರು.
Advertisement
ಕಾಂಗ್ರೆಸ್‍ನವರಿಂದ ನಾವು ಪಾಠ ಕಲಿಯಬೇಕಿಲ್ಲ. ಕಾಂಗ್ರಸ್‍ನವರು ಪ್ರಚಾರಕ್ಕಾಗಿ ಪೋಸ್ಟರ್ ಅಂಟಿಸಿದ್ದಾರೆ. ಇದಕ್ಕೆಲ್ಲಾ ಕೇರ್ ಮಾಡಲ್ಲ, ಸೊಪ್ಪು ಹಾಕಲ್ಲ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಇತರರು ಜೈಲಿಗೆ ಹೋಗಿ ಬಂದಿದ್ದಾರೆ. ವಿಧಾನ ಸೌಧದಲ್ಲಿ ಇವರ ತಾಕತ್ತು ತೋರಿಸಬೇಕಿತ್ತು. ದಾಖಲೆ ಇದ್ದರೆ ಚರ್ಚೆ ಮಾಡಬೇಕಿತ್ತು. ವಿಧಾನಸಭೆಯಲ್ಲಿ ಚೆರ್ಚೆ ಮಾಡಿದರೆ ಅವರ ಬಣ್ಣ ಬಯಲಾಗುತ್ತದೆ. ಅವರ ಬಣ್ಣ ಬಯಲಾಗುತ್ತೆ ಎನ್ನುವ ಕಾರಣಕ್ಕೆ ಅವರು ಚೆರ್ಚೆ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಕಾರಿನ ಮೇಲೆ KILL U ಬರಹ- ಕಡೂರಿನ RSS ಕಾರ್ಯಕರ್ತನಿಗೆ ಕೊಲೆ ಬೆದರಿಕೆ
70 ವರ್ಷಗಳ ಕಾಲ ಭ್ರಷ್ಟಾಚಾರ ಮಾಡಿರೋದು ಕಾಂಗ್ರೆಸ್‍ನವರು. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಏನು ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಮೂಲೆ ಗುಂಪಾಗಿರುವ ಪಾರ್ಟಿ ಅದು. ಇದರಿಂದಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಮೋದಿಯವರಿಂದ್ಲೇ ಧಾರವಾಡ IIT ಕ್ಯಾಂಪಸ್ ಉದ್ಘಾಟನೆ – ಜೋಶಿ