ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅತ್ಯುತ್ತಮ ಜನಸ್ನೇಹಿ ಬಜೆಟ್ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
Advertisement
ಬಜೆಟ್ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲ ಜಾತಿ, ಜನಾಂಗದವರಿಗೂ ಅನುಕೂಲ ಮಾಡಿಕೊಟ್ಟಿದ್ದಾರೆ. ಮುಖ್ಯಮಂತ್ರಿಯವರು ಅತ್ಯುತ್ತಮ ಜನಸ್ನೇಹಿ ಬಜೆಟ್ ನೀಡಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕುಡಿಯುವ ನೀರು, ಶಿಕ್ಷಣ ಎಲ್ಲದಕ್ಕೂ ಅನುದಾನ ನೀಡಲಾಗಿದೆ ಎಂದಿದ್ದಾರೆ.
Advertisement
Advertisement
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ
* ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ – ಪಹಣಿ, ಅಟ್ಲಾಸ್ ಮತ್ತು ಜಾತಿ ಹಾಗೂ ಆದಾಯ ಪ್ರಮಾಣಪತ್ರ ವಿತರಣೆ
Advertisement
*ಆಸಿಡ್ ದಾಳಿಗೊಳಗಾದ ಮಹಿಳೆಯರ ಮಾಸಿಕ ಪಿಂಚಣಿ 3000 ದಿಂದ 10,000 ಹೆಚ್ಚಳ
*ಮನಸ್ವಿನಿ ಮತ್ತು ಮೈತ್ರಿ ಯೋಜನೆಯಡಿಯಲ್ಲಿ ಅವಿವಾಹಿತ, ವಿಚ್ಚೇದಿತ ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತರ ಪಿಂಚಣಿ 600 ರಿಂದ 800 ಹೆಚ್ಚಳ (1.32 ಲಕ್ಷ ಫಲಾನುಭವಿಗಳು)
* ಗ್ರಾಮಸಹಾಯಕರ ಮಾಸಿಕ ಗೌರವಧನ ರೂ 1,000 ಹೆಚ್ಚಳ ಇದನ್ನೂ ಓದಿ: ಪುಟಿನ್ ನಮ್ಮ ಚಿಕ್ಕಪ್ಪ, ಯುದ್ಧ ನಡೆಯಲ್ಲ – ಸರ್ಕಾರದ ಸೂಚನೆಯನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು
* ಉಪನೋಂದಣಾಧಿಕಾರಿ ಕಚೇರಿ ಮೂಲಸೌಕರ್ಯ ಮತ್ತು ಐಟಿ ಉಪಕರಣಗಳನ್ನು 406 ಕೋಟಿ ವೆಚ್ಚದಲ್ಲಿ ಉನ್ನತೀಕರಣ
* ರಾಜ್ಯಾದ್ಯಂತ ಡ್ರೊನ್ ಆಧಾರಿತ ಸರ್ವೇ ಗಾಗಿ 287 ಕೋಟಿ, 3 ವರ್ಷಗಳಲ್ಲಿ ವಿದ್ಯನ್ಮಾನ ಪಹಣಿ ಮತ್ತು ನಕ್ಷೆ ಇದನ್ನೂ ಓದಿ: ಬಿಸಿಯೂಟ ತಯಾರಕರಿಗೆ 1,000 ರೂ. ಗೌರವಧನ ಹೆಚ್ಚಳ
* ಬಿಬಿಎಂಪಿ ಮತ್ತು ರಾಜ್ಯದ ಎಲ್ಲ ಮಹಾನಗರಪಾಲಿಕೆಗಳಲ್ಲಿ ಕಂದಾಯ ದಾಖಲೆಗಳ ಸ್ಕಾನಿಂಗ್ ಗಾಗಿ 15 ಕೋಟಿ