ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಯಾವುದೇ ಕಾರಣಕ್ಕೂ ಮುರಿಯೋದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿ ನಾಯಕರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy ) ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ಮೈತ್ರಿ ಮುರಿದು ಬೀಳುವುದಿಲ್ಲ. ಒಂದು ಸೀಟಿನ ವಿಚಾರದಲ್ಲಿ ಗೊಂದಲ ಇದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿ ಆಗುತ್ತದೆ. ಬಿಜೆಪಿ-ಜೆಡಿಎಸ್‍ನವರು ಹಾಲು-ಜೇನಿನ ರೀತಿ ಕೆಲಸ ಮಾಡುತ್ತೇವೆ. ಸಣ್ಣಪುಟ್ಟ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಎಚ್‍ಡಿಡಿ ಅಳಿಯನ ಸ್ಪರ್ಧೆ JDSನ ಫಸ್ಟ್ ಸೂಸೈಡ್ ಅಟೆಂಪ್ಟ್- ಡಿಕೆಶಿ ವ್ಯಂಗ್ಯ
- Advertisement
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಜೆಡಿಎಸ್ 3 ಸೀಟು ಕೇಳಿದ್ದರು, ಈಗ ಎರಡು ಸೀಟ್ ಹಂಚಿಕೆ ಆಗಿದೆ. ಇನ್ನೊಂದು ಸೀಟು ಬಗ್ಗೆ ಚರ್ಚೆ ಆಗುತ್ತಿದೆ. ಶಿವಮೊಗ್ಗ ಸಭೆಯಲ್ಲಿ ಮಂಜುನಾಥ್ ಭಾಗಿಯಾಗಿದ್ದರು. ಗೆಲ್ಲುವ ದೃಷ್ಟಿಯಿಂದ ಮಂಜುನಾಥ್ (Dr.C.N Manjunath) ಅವರ ಬಗ್ಗೆ ಸ್ಟಾಟರ್ಜಿ ಮಾಡಿದ್ದೇವೆ. ದೆಹಲಿಗೆ ಹೋಗ್ತಾ ಇದ್ದೀನಿ. ಕೇಂದ್ರದ ನಾಯಕರಿಗೆ ಇಲ್ಲಿ ನಡೆದ ಮಾಹಿತಿ ಕೊಡುತ್ತೇನೆ. ಜನ ಸಾಮಾನ್ಯರು ಮಂಜುನಾಥ್ ಅವರನ್ನು ಜೆಡಿಎಸ್ ಲೆಕ್ಕದಲ್ಲಿ ಮಾತಾಡ್ತಿದ್ದಾರೆ. ನಮ್ಮ ಗುರಿ ಕಾಂಗ್ರೆಸ್ ಸೋಲು ಮಾತ್ರ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದರು.
- Advertisement
3 ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀವಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ನಮ್ಮ ಹೈಕಮಾಂಡ್ ನಾಯಕರು ಕುಮಾರಸ್ವಾಮಿ ಜೊತೆ ಮಾತಾಡ್ತಾರೆ. ಎಷ್ಟು ಸೀಟು ಜೆಡಿಎಸ್‍ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಇಂದೇ ಬಹುತೇಕ ಅಂತಿಮ ಆಗುತ್ತದೆ. ಬಿಜೆಪಿ-ಜೆಡಿಎಸ್ ಸ್ಥಳೀಯವಾಗಿ ಹೊಂದಾಣಿಕೆ ಆಗಿದೆ. ಸೀಟು ಹಂಚಿಕೆ ಆದ ಮೇಲೆ ಎಲ್ಲಾ ಕಡೆ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಓಡಾಡುತ್ತೇವೆ. ಒಟ್ಟಾಗಿ ಸಮಾವೇಶ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜಕೀಯವಾಗಿ ಡಿಕೆಶಿ ನನಗೆ ವಿಷ ಹಾಕಿದ್ದಾರೆ: ಹೆಚ್‍ಡಿಕೆ ಕಿಡಿ