ತುಮಕೂರು: ಟಿಪ್ಪು ಏನು ಕನ್ನಡದವರಾ? ಪರ್ಷಿಯನ್ ಹಾಗೂ ಉರ್ದು ಭಾಷೆಯನ್ನು ಹೆಚ್ಚು ಪ್ರಚಾರ ಮಾಡಿದ್ದವರು. ಕನ್ನಡವನ್ನು ಟಿಪ್ಪು ಎಂದೂ ಒಪ್ಪಿಕೊಂಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
Advertisement
ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಹಿನ್ನೆಲೆ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಆರ್. ಅಶೋಕ್ ಅವರು, ರಾತ್ರಿ ಬಿ.ಜಿ.ಎಸ್.ಆಶ್ರಮದಲ್ಲಿ ತಂಗಿದ್ದರು. ನಂತರ ಬೆಳಗ್ಗೆ ಎದ್ದು ಗ್ರಾಮದಲ್ಲಿ ವಾಕಿಂಗ್ ಮಾಡುತ್ತಾ ಗ್ರಾಮಸ್ಥರ ಅಹವಾಲು ಆಲಿಸಿದರು. ಇದೇ ವೇಳೆ ಅಶೋಕ್ ಅವರಿಗೆ ತುರುವೇಕೆರೆ ಶಾಸಕ ಮಸಾಲಾ ಜಯರಾಮ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸಾಥ್ ನೀಡಿದರು. ಇದನ್ನೂ ಓದಿ: ರಾಜ್ಯಕ್ಕೆ ಮೋದಿ: ಕಾರ್ಯಕ್ರಮಗಳಲ್ಲಿ ಬದಲಾವಣೆ – ಪಟ್ಟಿ ಹೀಗಿದೆ..
Advertisement
Advertisement
ನಂತರ ಪಠ್ಯ ಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಗೋಕಾಕ್ ಚಳವಳಿ ಮಾದರಿ ಹೋರಾಟ ಮಾಡಲು ವಿರೋಧ ಪಕ್ಷಗಳು ನಿರ್ಧರಿಸಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಸರ್ಕಾರದ ನೆಗೆಟಿವ್ ಹುಡುಕುವುದೇ ಕೆಲಸ. ಬೇರೆ ಏನು ಕೆಲಸವಿರುವುದಿಲ್ಲ. ಒಳ್ಳೆಯದನ್ನು ಅವರು ಯಾವತ್ತೂ ಹೇಳಲ್ಲ. ಹಿಂದೆ ಕಾಗೇರಿಯವರು ಶಿಕ್ಷಣ ಸಚಿವರಾಗಿದ್ದಾಗ ಕುವೆಂಪು ಅವರ ಕುರಿತು ಎಂಟು ಪ್ಯಾರಗಳಲ್ಲಿ ವಿಚಾರ ತಿಳಿಸಿದ್ದರು. ಸಿದ್ದರಾಮಯ್ಯನವರ ಕಾಲದಲ್ಲಿ ಅದನ್ನು ಏಳು ಪ್ಯಾರಾಗೆ ಇಳಿಸಿದ್ದರು. ಆಗ ಸಿದ್ದರಾಮಯ್ಯ ಕಾಲದಲ್ಲಿ ಕುವೆಂಪು ಪಠ್ಯಕ್ಕೆ ಕತ್ತರಿ ಹಾಕಿದಾಗ ಯಾರು ಮಾತನಾಡಲಿಲ್ಲ. ಸಿದ್ದರಾಮಯ್ಯ ವಿರುದ್ಧ ಯಾರು ಹೋರಾಟ ಮಾಡಿಲ್ಲ. ಆದರೆ ಶಿಕ್ಷಣ ಸಚಿವ ನಾಗೇಶ್ ಕುವೆಂಪು ಅವರ ಬಗ್ಗೆ ಹತ್ತು ಪ್ಯಾರದಲ್ಲಿ ಹೇಳಿದ್ದಾರೆ. ಸಿದ್ದರಾಮಯ್ಯರ ಕಾಲದಲ್ಲಿ ಕೆಂಪೇಗೌಡರ ಬಗ್ಗೆ ಒಂದು ಅಧ್ಯಾಯ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
ಬೆಂಗಳೂರು, ಮೈಸೂರು ಅಂದ ತಕ್ಷಣ ಟಿಪ್ಪು ಹೆಸರನ್ನು ತೋರಿಸುತ್ತಿದ್ದರು. ಟಿಪ್ಪು ಏನು ಕನ್ನಡದವರಾ? ಅವರು ಪರ್ಷಿಯನ್ ಹಾಗೂ ಉರ್ದು ಭಾಷೆಯನ್ನು ಹೆಚ್ಚು ಪ್ರಚಾರ ಮಾಡಿದ್ದರು. ಕನ್ನಡವನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ಅಂತಹವರನ್ನು ಸಿದ್ದರಾಮಯ್ಯ ಅವರ ಕಾಲದಲ್ಲಿ ವೈಭವೀಕರಿಸಿದ್ದರು. ಶಿಕ್ಷಣ ಸಚಿವ ನಾಗೇಶ್ ಮೊದಲ ಬಾರಿ ಪಠ್ಯದಲ್ಲಿ ಕೆಂಪೇಗೌಡರ ಕುರಿತು ವಿಚಾರ ಅಳವಡಿಸಿದ್ದಾರೆ. ಇವರಿಗೆ ಇದೆಲ್ಲ ಕಾಣುತ್ತಿಲ್ಲ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿನೇ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸೈಕಲ್‌ನಿಂದ ಬಿದ್ದ ವಿಶ್ವದ ದೊಡ್ಡಣ್ಣ
ಇದೇ ವೇಳೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಠ್ಯ ಪುಸ್ತಕ ಹರಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ನಡೆಸಿದಂತವರು, ಮಂತ್ರಿಯಾಗಿ ಕೆಲಸ ಮಾಡಿದವರು. ಪುಸ್ತಕ ಹರಿದರೆ ದೊಡ್ಡ ನ್ಯೂಸ್ ಆಗುತ್ತದೆ ಎಂದು ಹರಿದಿದ್ದಾರೆ. ಅವರಿಗೆ ನ್ಯೂಸ್ ಆಗಬೇಕು ಅಷ್ಟೇ. ಪಠ್ಯಪುಸ್ತಕವನ್ನು ಯಾರು ಸರಿಯಾಗಿ ಓದಿದ್ದಾರೆ. ಯಾರು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೋ ಅವರು ಈ ರೀತಿ ಮಾಡುವುದಿಲ್ಲ. ಯಾರೋ ಕೊಟ್ಟ ಪುಸ್ತಕ ಓದಿ ಮಾತನಾಡುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಎರಡು ಸರ್ಕಾರದ ಅವಧಿಯ ಪುಸ್ತಕ ಓದಿ ಸತ್ಯ ಅರಿತು ಪ್ರತಿಕ್ರಿಯೆ ಕೊಡಲಿ ಎಂದು ಹರಿಹಾಯ್ದಿದ್ದಾರೆ.