– ಕಳ್ಳೆತ್ತು, ಕುಂಟೆತ್ತು, ಜೋಡೆತ್ತುಗಳಿಂದ ಯುದ್ಧ
ಮಂಗಳೂರು: ಓರ್ವ ಹೆಣ್ಣಿನ ವಿರುದ್ಧ ಕಾರವ ಸೇನೆ ಒಂದಾಗಿ ಯುದ್ಧ ಮಾಡುತ್ತಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ಮೈತ್ರಿ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನ ಬೆಳಗ್ಗೆ ಕಳ್ಳೆತ್ತು, ಕುಂಟೆತ್ತು ಮತ್ತು ಜೋಡೆತ್ತುಗಳಿಂದ ಯುದ್ಧ ನಡೆಯುತ್ತದೆ ಎಂಬ ಸುದ್ದಿ ಇರುತ್ತದೆ. ಕರ್ನಾಟಕದ ಚುನಾವಣೆ ಹೈವೋಲ್ಟೇಜ್ ರೀತಿ ನಡೆಯುತ್ತಿದೆ. ಅದು ಓರ್ವ ಹೆಣ್ಣು ಅದರಲ್ಲೂ ಅಂಬರೀಶ್ ಅವರ ಪತ್ನಿ ಸುಮಲತಾ ಒಂಟಿಯಾಗಿದ್ದಾರೆ. ಅವರ ವಿರುದ್ಧ ಈ ಕೌರವ ತಂಡ ಯುದ್ಧ ಮಾಡುತ್ತಿದೆ ಎಂದರು.
Advertisement
Advertisement
ಮಾಜಿ ಪ್ರಧಾನಿ, ಮುಖ್ಯಮಂತ್ರಿ ಮತ್ತು ಮೂವರು ಮಂತ್ರಿಗಳು, ಎಂಟು ಜನ ಶಾಸಕರು ಇಷ್ಟು ಜನ ಓರ್ವ ಹೆಣ್ಣು ಮಗಳ ಮೇಲೆ ಯುದ್ಧ ಸಾರಿದೆ. ನನ್ನ ಪ್ರಕಾರ ಕೊನೆಗೆ ಸತ್ಯಮೇವ ಜಯತೆ ಎಂಬಂತೆ ಸುಮಲತಾ ಅವರು ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ.
Advertisement
ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರೂ ಮೋದಿ ಜಪ ಮಾಡುತ್ತಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲೂ ಮೋದಿಗೆ ಜೈಕಾರ ಹೇಳಿದ್ದಾರೆ. ಹೀಗಾಗಿ ಮೋದಿ ಹೆಸರು ಸರ್ವವ್ಯಾಪಿ ಆಗಿರುವುದು ಕಂಡುಬಂದಿದೆ. ಮಂಡ್ಯದಲ್ಲಿ ಸೋಲುವ ಭೀತಿ ಮೈತ್ರಿ ಪಕ್ಷಗಳಲ್ಲಿದೆ. ಜಿಟಿ ದೇವೇಗೌಡ ಮಂಡ್ಯ ಸೋಲನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಮೈತ್ರಿ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಬಗೆದಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ.
Advertisement
ಕುಮಾರಸ್ವಾಮಿಗೆ ಮಾತಿನಲ್ಲಿ ಹಿಡಿತವಿಲ್ಲದಾಗಿದ್ದು, ಸೋಲಿನ ಭಯ ತುಂಬಾನೇ ಕಾಡುತ್ತಿದೆ. ದುಡ್ಡು ಚೆಲ್ಲಿ ಚುನಾವಣೆ ಗೆಲ್ಲುವ ತಂತ್ರವನ್ನು ಸರ್ಕಾರ ರೂಪಿಸುತ್ತಿದೆ. ದೇವೇಗೌಡರು 15 ವರ್ಷಗಳಿಂದ ಕೊನೆ ಚುನಾವಣೆ ಅನ್ನುತ್ತಲೇ ಇದ್ದಾರೆ. ಈ ಬಾರಿಯೂ ಕಾಂಗ್ರೆಸ್ಸಿನವರ ಬಯಕೆಯಂತೆ ಕೊನೆ ಚುನಾವಣೆ ಅನ್ನುತ್ತಿದ್ದಾರೆ. ಈ ಬಾರಿ ಮೋದಿ ಸುಂಟರ ಗಾಳಿಯಿಂದಾಗಿ ಬಿಜೆಪಿ 22 ಸೀಟು ಗೆಲ್ಲಲಿದೆ ಎಂದಿದ್ದಾರೆ.