ಮಂಡ್ಯ: ಜಿಲ್ಲೆಯ ಮೈಶುಗರ್ ಕಾರ್ಖಾನೆಯನ್ನು ಸರ್ಕಾರದ ಒಡೆತನದಲ್ಲೇ ಪುನರಾಂಭ ಮಾಡಬೇಕೆಂದು ಆಗ್ರಹಿಸಿ ರೈತ ಸಂಘಟನೆಯ ಪದಾಧಿಕಾರಿಗಳು ಸಚಿವ ಆರ್.ಅಶೋಕ್ ಅವರ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಜರುಗಿದೆ.
Advertisement
ಇಂದು ಕೊರೊನಾದಿಂದ ಸಾವನ್ನಪ್ಪಿ ಅನಾಥವಾಗಿ ಇದ್ದ ಅಸ್ತಿಗಳಿಗೆ ಪಿಂಡಪ್ರಧಾನ ಮಾಡುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗೋಸಾಯ್ ಘಾಟ್‍ಗೆ ಅಶೋಕ್ ಬಂದಿದ್ದರು. ಪಿಂಡಪ್ರಧಾನ ಮಾಡಿದ ಬಳಿಕ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಬಂದು ಹೊರಡುವ ವೇಳೆ ರೈತ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಲ್ಪೆ ಬಂದರಿನಲ್ಲಿ ಸಿಕ್ತು ಹೆಲಿಕಾಪ್ಟರ್ ಫಿಶ್- ಭಾರೀ ಗಾತ್ರದ ಮೀನು ನೋಡಿ ಜನ ಶಾಕ್
Advertisement
Advertisement
ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡದೇ, ಸರ್ಕಾರದ ಮಾಲೀಕತ್ವದಲ್ಲೇ ಪುನರಾಂಭ ಮಾಡಬೇಕು. ಇಲ್ಲವಾದಲ್ಲಿ ರೈತರಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ ಎಂದು ಅಶೋಕ್ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಇದಲ್ಲದೇ ಕೇಂದ್ರ ರೈತ ಮಸೂದೆಯನ್ನು ವಾಪಸ್ಸು ಪಡೆಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಶೋಕ್ ಅವರ ಕಾರಿನ ಮುಂಭಾಗ ಇದ್ದ ರಾಷ್ಟ್ರ ಧ್ಜಜವಿದ್ದ ಕಡ್ಡಿಯನ್ನು ಮುರಿಯಲು ಸಹ ಯತ್ನಸಿದರು. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‍ನವರು ದೇಶ ಭಕ್ತರಾ?: ರಾಮಲಿಂಗಾರೆಡ್ಡಿ
Advertisement
ನಂತರ ಕಾರಿನಿಂದ ಕೆಳಗೆ ಇಳಿದ ಅಶೋಕ್ ರೈತರ ಮನವಿ ಸ್ವೀಕರಿಸಿದರು. ಬಳಿಕ ನಿಮ್ಮ ಬೇಡಿಕೆ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದ ಸಚಿವ ನಾನು ಅಲ್ಲ. ಅದಕ್ಕೆ ಸಕ್ಕರೆ ಸಚಿವರು ಇದ್ದಾರೆ, ಅವರ ಗಮನಕ್ಕೆ ನಾನು ತರುತ್ತೇನೆ. ಕಳೆದ ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ಈ ಕುರಿತು ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಅವರು ಕರೆಯದೆ ಇದ್ದರು ನಾನೇ ಭೇಟಿ ನೀಡಿ ಅವರ ಮನವಿಯನ್ನು ಸ್ವೀಕಾರ ಮಾಡಿದ್ದೆ. ಇಂದು ಯಾಕೆ ಈ ರೀತಿ ಮಾಡಿದರು ಎಂದು ಗೋತ್ತಿಲ್ಲ ಎಂದರು.