LatestMain PostNational

ಕುತುಬ್ ಮಿನಾರ್ ನಿರ್ಮಿಸಿದ್ದು ಕುತುಬ್ ಅಲ್-ದಿನ್ ಐಬಕ್ ಅಲ್ಲ

ನವದೆಹಲಿ: 5ನೇ ಶತಮಾನದಲ್ಲಿ ರಾಜಾ ವಿಕ್ರಮಾದಿತ್ಯ ಸೂರ್ಯನ ಬದಲಾಗುವ ಸ್ಥಾನವನ್ನು ವೀಕ್ಷಿಸಲು ಕುತುಬ್ ಮಿನಾರ್ ಅನ್ನು ನಿರ್ಮಿಸಿದ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತೀಯ ಸ್ಮಾರಕಗಳ ಬಗೆಗಿನ ಗೊಂದಲದ ಬಿಸಿ ಹೆಚ್ಚುತ್ತಿದ್ದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣೆ(ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಇದೀಗ ಐತಿಹಾಸಿಕ ಸ್ಮಾರಕ ಕುತುಬ್ ಮಿನಾರ್ ರಾಜ ವಿಕ್ರಮಾದಿತ್ಯನಿಂದ ನಿರ್ಮಿಸಲಾಗಿದೆ ಹಾಗೂ ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ಕುತುಬ್ ಅಲ್-ದಿನ್ ಐಬಕ್ ನಿರ್ಮಿಸಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ

ಕುತುಬ್ ಮಿನಾರ್‌ನ ಗೋಪುರ 25 ಇಂಚಿನಷ್ಟು ವಾಲಿದೆ. ಇದು ಸೂರ್ಯನನ್ನು ವೀಕ್ಷಿಸಲು ಮಾಡಲ್ಪಟ್ಟಿದೆ. ಜೂನ್ 21 ರಂದು, ಅಯನ ಸಂಕ್ರಾಂತಿಯ ನಡುವೆ, ಆ ಪ್ರದೇಶದ ಮೇಲೆ ಕನಿಷ್ಠ ಅರ್ಧ ಗಂಟೆ ನೆರಳು ಬೀಳುವುದಿಲ್ಲ. ಇದು ವಿಜ್ಞಾನ ಹಾಗೂ ಪುರಾತತ್ವ ಶಾಸ್ತ್ರದ ಸತ್ಯ ಎಂದಿದ್ದಾರೆ. ಇದನ್ನೂ ಓದಿ: ಪುರುಷರು ಮೊದಲಿಗಿಂತಲೂ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ: ಆರೋಗ್ಯ ಸಮೀಕ್ಷಾ ವರದಿ

ಕುತುಬ್ ಮಿನಾರ್ ಒಂದು ಸ್ವತಂತ್ರ ರಚನೆ. ಅದು ತನ್ನ ಸಮೀಪವಿರುವ ಮಸೀದಿಗೆ ಸಂಬಂಧಪಟ್ಟಿಲ್ಲ. ಕುತುಬ್ ಮಿನಾರ್‌ನ ಬಾಗಿಲನ್ನು ಉತ್ತರ ದಿಕ್ಕಿಗೆ ಮುಖ ಮಾಡಿರುವಂತೆ ನಿರ್ಮಿಸಲಾಗಿದೆ. ಇದು ರಾತ್ರಿ ಹೊತ್ತು ಆಕಾಶದಲ್ಲಿ ಧ್ರುವ ನಕ್ಷತ್ರವನ್ನು ನೋಡಲು ಸಹಾಯಕವಾಗಿದೆ ಎಂದು ತಿಳಿಸಿದರು.

Leave a Reply

Your email address will not be published.

Back to top button