_ ಸ್ಕೋಡಾ ಎಸ್‌ಯುವಿನ ಮೊದಲ ಮಾಲೀಕನಾದ ಜಿಯಾದ್
ಕಾಸರಗೋಡು: 2025 ರಲ್ಲಿ ಲಾಂಚ್ ಆಗುವ ಸ್ಕೋಡಾ ಯುಎಸ್‌ವಿ(Skoda SUV) ಕಾರಿಗೆ ಕೇರಳ ಮೂಲದ 24 ವರ್ಷದ ಮೊಹಮ್ಮದ್ ಜಿಯಾದ್ ಸೂಚಿಸಿದ ಕೈಲಾಕ್ ಎಂಬ ಹೆಸರನ್ನು ಆಯ್ಕೆ ಮಾಡಲಾಗಿದೆ. ಕೈಲಾಕ್ (Kylaq) ಎಂದರೆ ಸಂಸ್ಕೃತದಲ್ಲಿ ಸ್ಫಟಿಕ ಎಂಬ ಅರ್ಥ ಬರುತ್ತದೆ.
Advertisement
ಸ್ಕೋಡಾ ಕಂಪನಿಯು ತಮ್ಮ ಹೊಸ ಕಾರ್‌ಗೆ ಹೊಸ ಹೆಸರನ್ನು ಸೂಚಿಸುವ ಸಲುವಾಗಿ ಒಂದು ಸ್ಪರ್ಧೆಯನ್ನು ಘೋಷಣೆ ಮಾಡಿತ್ತು. ಒಬ್ಬರಿಗೆ 5 ಹೆಸರನ್ನು ಸೂಚಿಸುವ ಅವಕಾಶ ನೀಡಿತ್ತು. ಇಂಗ್ಲಿಷ್ ನ ‘ಕೆ’ ಅಕ್ಷರದಿಂದ ಪ್ರಾರಂಭಗೊಂಡು ಕ್ಯು ಅಕ್ಷರದಲ್ಲಿ ಕೊನೆಗೊಳ್ಳುವ ಹೆಸರು ಸೂಚಿಸಬೇಕು ಎಂದು ನಿಯಮದಲ್ಲಿತ್ತು. ಅದರಂತೆ ಸಮಾರು 2 ಲಕ್ಷ ಜನ ಕಾರು ಪ್ರೇಮಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕೇರಳ (Kerala) ಮೂಲದ ಜಿಯಾದ್ ಕಳುಹಿಸಿದ ಹೆಸರನ್ನು ಕಂಪನಿಯು ಆಯ್ಕೆ ಮಾಡಿದೆ. ಇದನ್ನೂ ಓದಿ: ಬಲಪಂಥೀಯರೇ ಗಾಂಧಿಯನ್ನ ಕೊಂದು ಹಾಕಿರೋದು: ಸಿಎಂ ಸಿದ್ದರಾಮಯ್
Advertisement
Finally, it is the time for the big winner…
Congratulations to Mr. Mohammed Ziyad from Kerala for winning the all-new #SkodaKylaq. He will be the first owner when it is launched next year. New adventures and new explorations with your family await!#SkodaIndiaNewEra pic.twitter.com/KkOiJJHsIT
— Škoda India (@SkodaIndia) August 21, 2024
Advertisement
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಕೋಡಾ ಕಂಪನಿಯ ಈ ಸ್ಪರ್ಧೆಯ ಜಿಯಾದ್ ಕಾಸರಗೋಡು (Kasaragodu) ವಿಜೇತರಾಗಿದ್ದು ಹೊಸ ಸ್ಕೋಡಾ ಕೈಲಾಕ್ ಕಾರು ಗೆದ್ದಿದ್ದಾರೆ ಎಂದು ಅನೌನ್ಸ್ ಮಾಡಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರು ಈ ಕಾರಿನ ಮೊದಲ ಮಾಲೀಕರು ಎಂದು ಕಂಪನಿಯು ಮೊದಲೇ ಹೇಳಿತ್ತು. ಆದ್ದರಿಂದ ಜಿಯಾದ್ ಈ ಕಾರಿನ ಮೊದಲ ಮಾಲೀಕರಾಗಿದ್ದಾರೆ. ಇದನ್ನೂ ಓದಿ: ಯಶವಂತಪುರ ಫ್ಲೈ ಓವರ್ ಕೆಳಗೆ ಸಿಲುಕಿದ ಬೃಹತ್ ಟ್ರಕ್
Advertisement
ಜಿಯಾದ್ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದು ಕಳೆದ ಎರಡೂವರೆ ವರ್ಷದಿಂದ ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಕುರಾನ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಚರಂಡಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವ
“ನನಗೆ ಕಾರಿನ ಮೇಲೆ ಅಷ್ಟೊಂದು ಕ್ರೇಜ್ ಇಲ್ಲ. ನನ್ನ ಮನೆಯವರನ್ನು ಕರೆದುಕೊಂಡು ಹೋಗುವುದಕ್ಕಾಗಿ ನನಗೆ ಸ್ವಂತ ಕಾರು ಬೇಕು” ಎಂದು ಜಿಯಾದ್ ಹೇಳಿದರು. ಇದನ್ನೂ ಓದಿ: ಭಾರತದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ ಯಶಸ್ವಿ ಉಡಾವಣೆ
ಸ್ಕೋಡಾ ಇಂಡಿಯಾ ಕಂಪನಿಯು ಕ್ವಿಕ್, ಕೈಲಾಕ್, ಕೋಸ್ಮಿಕ್, ಕೈರೋಕ್, ಕಾರಿಕ್, ಕಾರ್ಮಿಕ್, ಕ್ಲಿಕ್, ಮತ್ತು ಕಯಾಕ್ 8 ಹೆಸರುಗಳನ್ನು ಕೊನೆಯ ವಾರದಲ್ಲಿ ವೋಟ್ ಗಾಗಿ ಹೊರ ಹಾಕಿತ್ತು. ಇದರಲ್ಲಿ ಕ್ವಿಕ್, ಕೈಲಾಕ್, ಕೋಸ್ಮಿಕ್, ಕ್ಲಿಕ್, ಮತ್ತು ಕಯಾಕ್ ಎಂಬ 5 ಹೆಸರುಗಳನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಸ್ಕೋಡಾ ಜಿಯಾದ್ ಸೂಚಿಸಿರುವ ‘ಕೈಲಾಕ್’ ಎಂಬ ಹೆಸರನ್ನು ಆಯ್ಕೆ ಮಾಡಿದೆ. ಇದನ್ನೂ ಓದಿ: ಸ್ಥಳ ಮಹಜರು ವೇಳೆ ಪರಾರಿಗೆ ಯತ್ನ – ಅಸ್ಸಾಂ ಹತ್ಯಾಚಾರ ಆರೋಪಿ ಕೊಳಕ್ಕೆ ಬಿದ್ದು ಸಾವು