ಹುಬ್ಬಳ್ಳಿ: ಇಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ (Quran) ಪಠಣ ಖಂಡಿಸಿ ಧಾರವಾಡದಲ್ಲಿ ಬಿಜೆಪಿ ಶಾಸಕ ಬೆಲ್ಲದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು.
ಧಾರವಾಡ (Dharwad) ಡಿಸಿ ಕಚೇರಿ ಎದುರು ಹೋಮ ಮಾಡಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು. ಸರ್ಕಾರಿ ಕಚೇರಿ ಶುದ್ಧೀಕರಣ ಮಾಡೋದಾಗಿ ರುದ್ರಪಠಣ ಮಾಡಿ ಅರ್ಚಕರ ಮೂಲಕ ಹೋಮ ಮಾಡಿಸಿದ್ರು. ಇದನ್ನೂ ಓದಿ: ಕಟ್ಟಡ ಕಾರ್ಮಿಕರ ಶೆಡ್‌ನಲ್ಲಿ ಅಗ್ನಿ ಅವಘಡ – ಚಿಕಿತ್ಸೆ ಫಲಿಸದೇ ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ
ಮುಲ್ಲಾ ಮೋಕ್ಷ ಹೋಮ ಎಂದು ಪ್ಲೆಕಾರ್ಡ್ ಹಿಡಿದು ಕಿಡಿಕಾರಿದ್ರು. ಕಾಂಗ್ರೆಸ್ ಶಾಸಕರಿಗೆ (Congress MLAs), ಸಚಿವರಿಗೆ ದೇವರು ಒಳ್ಳೆ ಬುದ್ಧಿಕೊಡಲಿ ಎಂದು ಶಾಸಕ ಅರವಿಂದ ಬೆಲ್ಲದ್ (Arvind Bellad) ಮಂಗಳಾರತಿ ನೆರವೇರಿಸಿದ್ರು. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಕ್ಸಸ್ ಬೆನ್ನಲ್ಲೇ ಕಟೀಲು ಅಮ್ಮನ ದರ್ಶನ ಪಡೆದ ವಿಜಯ್ ಕಿರಗಂದೂರು
ಬಳಿಕ ಮಾತನಾಡಿ, ಸರ್ವರನ್ನೂ ಸಮನಾಗಿ ನೋಡುವ ಸಿದ್ಧಾರೂಢ ಮಠದಲ್ಲಿ ಕುರಾನ್ ಪಠಾಣ್ ಮಾಡುವ ಕೆಲಸ ಸಂತೋಷ್ ಲಾಡ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ನಡೆದಿದೆ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಬಾಕ್ಸಾಫೀಸ್‌ನಲ್ಲಿ ಕಾಂತಾರ ಚಾಪ್ಟರ್ 1 ಮಿಂಚಿನ ಓಟ – ಸಿದ್ಧಿವಿನಾಯಕನ ದರ್ಶನ ಪಡೆದ ರಿಷಬ್