ಮಂಡ್ಯ: ಸರ್ಕಾರಿ ಶಾಲೆ (Government School) ಅಂದ್ರೆ ಮೂಗು ಮುರಿಯುವ ಕಾಲದಲ್ಲಿ ಇಲ್ಲೊಂದು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸಬೇಕೆಂದು ಪೋಷಕರು ಬೆಳಗ್ಗೆ 5 ಗಂಟೆಯಿಂದ ಟೋಕನ್‍ಗಾಗಿ ಕ್ಯೂ (Queue For Admission) ನಲ್ಲಿ ಕಾದು ಕುಳಿತಿದ್ದಾರೆ.
Advertisement
ಸದ್ಯ ಇಂದಿನಿಂದ ಈ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಗಳ ಬಾಗಿಲು ಬೇಸಿಗೆ ರಜೆಯ ಬಳಿಕ ತೆರೆದಿವೆ. ಹೀಗಾಗಿ ಖಾಸಗಿ ಶಾಲೆಗಳ ಮುಂದೆ ಪೋಷಕರು ಕ್ಯೂ ನಿಲ್ಲೋದು ಸಾಮಾನ್ಯವಾಗುತ್ತಿತ್ತು. ಆದರೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಇದು ಉಲ್ಟಾ ಆಗಿದ್ದು, ಇಲ್ಲಿನ ಪೋಷಕರು ಕರ್ನಾಟಕ ಪಬ್ಲಿಕ್ ಸ್ಕೂಲ್ (Karnataka Public School) ಎಂಬ ಸರ್ಕಾರಿ ಶಾಲೆಯ ಎದುರು ಪೋಷಕರು ಕ್ಯೂ ನಿಂತಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರತಿವರ್ಷ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಫಲಿತಾಂಶ ಬರುತ್ತಿರುವ ಕಾರಣ ಈ ಶಾಲೆಯಲ್ಲಿ ದಾಖಲಾತಿಗೆ ಬೇಡಿಕೆ ಹೆಚ್ಚಾಗಿದೆ.
Advertisement
Advertisement
ದಾಖಲಾತಿಗೆ ಬೇಡಿಕೆ ಇರುವ ಕಾರಣ ಇಲ್ಲಿನ ಶಿಕ್ಷಕರು ದಾಖಲಾತಿಗೆ ಟೋಕನ್ ಪದ್ಧತಿ ಮಾಡಿದ್ದಾರೆ. ಮೊದಲು ಟೋಕನ್ ಪಡೆದವರಿಗೆ ದಾಖಲಾತಿಗೆ ಅವಕಾಶ ಇರುವ ಕಾರಣ ಪೋಷಕರು ತಮ್ಮ ಮಕ್ಕಳ ದಾಖಲಾತಿಗೆ ಇಂದು ಬೆಳಗ್ಗೆ 5 ಗಂಟೆಯಿಂದ ಕ್ಯೂನಿಂತಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 8 ನೇ ತರಗತಿಯಿಂದ 10ನೇ ತರಗತಿಯವರೆಗೆ ಹೈ ಸ್ಕೂಲ್ ಇದ್ದರೆ, ಇದಾದ ನಂತರ ಪದವಿಪೂರ್ವ ಶಿಕ್ಷಣವು ಸಹ ಇಲ್ಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 3-4 ದಿನ ಭಾರೀ ಮಳೆ ಸಾಧ್ಯತೆ