ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಪಡೆದು ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಆದರೆ ಪಂದ್ಯದ ವೇಳೆ ಧೋನಿ ರನ್ ಪೂರ್ಣಗೊಳಿಸದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಆಸೀಸ್ ಮಾಜಿ ಆಟಗಾರ, ವಿಕೆಟ್ ಕೀಪರ್ ಗಿಲ್‍ಕ್ರಿಸ್ಟ್ ಘಟನೆಯಲ್ಲಿ ಧೋನಿ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.
ಧೋನಿ ಶಾರ್ಟ್ ರನ್ ಕುರಿತು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಗಿಲ್‍ಕ್ರಿಸ್ಟ್ ಅಭಿಪ್ರಾಯವನ್ನು ಕೇಳಿದ್ದು, ಈ ಟ್ವೀಟ್‍ಗೆ ಗಿಲ್‍ಕ್ರಿಸ್ಟ್ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ನಿಯಮಗಳ ವಿರುದ್ಧ ಏನೂ ಮಾಡಿಲ್ಲ. ಇದು ಸಾಮಾನ್ಯವಾಗಿ ಕಂಡುಬಾರದ ಸಂದರ್ಭ ಎಂದು ಹೇಳಿ ಧನ್ಯವಾದ ತಿಳಿಸಿದ್ದಾರೆ.
@gilly381 regarding the @msdhoni #shortrun that you claim happened in the 45th over. Short Run can only be considered on the 2nd or any subsequent Runs. Once the Batsman have crossed on first Run and the Fielding side decides to not do anything, then that Run will Stand. #AUSvIND
— Darshak Patel (@PatelDaku) January 16, 2019
ಧೋನಿ ಶಾರ್ಟ್ ರನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಗಿಲ್‍ಕ್ರಿಸ್ಟ್ ಅವರನ್ನು ಪ್ರಶ್ನಿಸಿರುವ ದರ್ಶಕ್ ಪಟೇಲ್ ಎಂಬವರು, ಪಂದ್ಯದಲ್ಲಿ ಬ್ಯಾಟ್ಸ್ ಮನ್ 2ನೇ ರನ್ ಅಥವಾ ಅದಕ್ಕಿಂತ ಹೆಚ್ಚಿನ ರನ್ ಪಡೆಯುವ ಸಂದರ್ಭದಲ್ಲಿ ಶಾರ್ಟ್ ರನ್ ಸಂಭವಿಸಿದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಒಮ್ಮೆ ಬ್ಯಾಟ್ಸ್ ಮನ್ ಮೊದಲ ರನ್ ಪೂರ್ಣಗೊಳಿಸಿದ ವೇಳೆ ಬಳಿಕ ಫೀಲ್ಡಿಂಗ್ ತಂಡ ಏನನ್ನು ಮಾಡಬಾರದು ಎಂದು ನಿರ್ಧರಿಸಿದರೆ ಅದು ರನ್ ಆಗುತ್ತದೆ ಅಲ್ಲವೇ? ಇದನ್ನು ಬಗೆಹರಿಸಿ ಎಂದು ಗಿಲ್‍ಕ್ರಿಸ್ಟ್ ಅವರಲ್ಲಿ ಕೇಳಿದ್ದರು.
Thanks for advising. Clearly @msdhoni wasn’t doing anything against the rules. It was just a unique situation not often seen. 👍 https://t.co/fFSehzPQQ8
— Adam Gilchrist (@gilly381) January 17, 2019
ನಡೆದಿದ್ದೇನು?
ಅಡಿಲೇಡ್ ಏಕದಿನ ಪಂದ್ಯದ 45ನೇ ಓವರಿನಲ್ಲಿ ಧೋನಿ ಒಂದು ರನ್ ಪಡೆದು ಮುಂದಿನ ಓವರಿಗೆ ಬ್ಯಾಟಿಂಗ್ ಕಾಯ್ದುಕೊಳ್ಳಲು ನಿರ್ಧರಿಸಿದ್ದರು. ಆದರೆ ಈ ವೇಳೆ ರನ್ ಪೂರ್ಣಗೊಳಿಸದೆ ಕೆಲವೇ ಇಂಚುಗಳ ಅಂತರದಲ್ಲಿ ಮರಳಿ ಹಿಂದಕ್ಕೆ ತೆರಳಿದ್ದರು. ಧೋನಿ ಅವರ ಈ ಎಡವಟ್ಟನ್ನು ಅಂಪೈರ್ ಹಾಗೂ ಎದುರಾಳಿ ತಂಡದ ಆಟಗಾರರು ಕೂಡ ಗಮನಿಸಿರಲಿಲ್ಲ.
ಪಂದ್ಯದ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಹಲವರು, ತಂಡಕ್ಕೆ 18 ಎಸೆತಗಳಲ್ಲಿ 25ರನ್ ಬೇಕಿತ್ತು. ಒಂದೊಮ್ಮೆ ಧೋನಿ ಬ್ಯಾಟಿಂಗ್ ಸ್ಟ್ರೈಕ್ ಪಡೆಯದಿದ್ದರೆ, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
https://twitter.com/ALL_IN_ONE_MAN/status/1085528833183236096
ನಿಯಮ ಏನು ಹೇಳುತ್ತೆ: ಮೆಲ್ಬರ್ನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಕ್ರಿಕೆಟ್ ನಿಯಮವಾಳಿಯ (18.4.1) ಪ್ರಕಾರ ಆಟಗಾರ 2ನೇ ರನ್ ಪಡೆಯುವ ಅಥವಾ ಚೆಂಡು ಬೌಂಡರಿ ಗೆರೆದಾಟಿದೆ ಎಂದು ಭಾವಿಸಿ ರನ್ ಶಾಟ್ ರನ್ ಮಾಡಿದರೆ ಮಾತ್ರ ಅದನ್ನು ಅಂಪೈರ್ ಪರಿಗಣಿಸಬಹುದಾಗಿದೆ. ಆದರೆ ಧೋನಿ ಹಾಗೂ ದಿನೇಶ್ ಕಾರ್ತಿಕ್ ಇಬ್ಬರು 2ನೇ ರನ್ ಪಡೆಯಲು ಯತ್ನಿಸದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv