-22 ಜನರ ವಿರುದ್ಧ ಪ್ರಕರಣ ದಾಖಲು
ರಾಯಚೂರು: ಕಾಮಗಾರಿ ಫಲಕದ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಕೋಮಾ ಸ್ಥಿತಿಯಲ್ಲಿದ್ದಾನೆ. ಈ ಘಟನೆ ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಮಲ್ಲಿನ ಮಡಗು ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಭೀಮಪ್ಪ (45) ಹಾಗೂ ಗಂಭೀರವಾಗಿ ಗಾಯಗೊಂಡಿದ್ದವರನ್ನು ರಮೇಶ್ ಎಂದು ತಿಳಿಯಲಾಗಿದೆ. ಗ್ರಾಮದಲ್ಲಿ ರಸ್ತೆ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ಶೈಕ್ಷಣಿಕ, ಸಂಶೋಧನಾ ಭವನ ಕಟ್ಟಡಗಳ ಶಂಕುಸ್ಥಾಪನೆ – ಗುದ್ದಲಿ ಪೂಜೆ ಮಾಡಿದ ಡಿಕೆಶಿ, ಮುನಿರತ್ನ
ಮಲ್ಲಿನ ಮಡಗು ಗ್ರಾಮದಲ್ಲಿ ರಸ್ತೆ ರಿಪೇರಿ ಕಾಮಗಾರಿ ಮಾಡಿಸುತ್ತಿದ್ದ ಯಂಕೋಬನಿಗೆ ಗ್ರಾಮದ ವಿರೇಶ್ ಕಿರಿಕಿರಿ ಮಾಡುತ್ತಿದ್ದ. ಇದರಿಂದ ಬೇಸತ್ತ ಯಂಕೋಬ ಹಾಗೂ ಭೀಮಪ್ಪ ವಿರೇಶ್‌ನಿಗೆ ವಾರ್ನಿಂಗ್ ಕೊಟ್ಟಿದ್ದರು. ಆದರೆ ಅದೇ ದಿನ ರಾತ್ರಿ ವಿರೇಶ್ ಗುಂಪುಕಟ್ಟಿಕೊಂಡು ಬಂದು ಯಂಕೋಬ ಹಾಗೂ ಭೀಮಪ್ಪನ ಮೇಲೆ ಹಲ್ಲೆಗೆ ಮುಂದಾಗಿದ್ದ. ಗಲಾಟೆಯಲ್ಲಿ ಯಂಕೋಬನಿಗೆ ಗಂಭೀರ ಗಾಯವಾಗಿತ್ತು.
ಈ ವೇಳೆ ಎರಡು ಕಡೆಯವರಿಂದಲೂ ಜನ ಸೇರಿದ್ದು, ಗುಂಪು ಘರ್ಷಣೆಯಾಗಿದೆ. ಗಲಾಟೆಯಲ್ಲಿ ಗಂಭೀರ ಗಾಯಗೊಂಡ ಭೀಮಣ್ಣ ಮಾನ್ವಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಯಂಕೋಬ, ರಮೇಶ್ ಸೇರಿ 9 ಜನರು ಗಾಯಗೊಂಡಿದ್ದು, ಮಾನ್ವಿ ಪೊಲೀಸ್ ಠಾಣೆಯಲ್ಲಿ ವಿರೇಶ್ ಸೇರಿ 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಂಗನಾ ರಣಾವತ್ ಭೇಟಿ