CrimeDistrictsGadagKarnatakaLatestMain Post

ತಂದೆ, ಮಗನ ಮಧ್ಯೆ ಜಗಳ- ಕೊಲೆಯೊಂದಿಗೆ ಅಂತ್ಯ

ಗದಗ: ಕ್ಷುಲ್ಲಕ ಕಾರಣಕ್ಕಾಗಿ ನಡೆದ ತಂದೆ ಮತ್ತು ಮಗನ ಜಗಳದಲ್ಲಿ ತಂದೆಯ ಕೊಲೆಯೊಂದಿಗೆ ಅಂತ್ಯವಾದ ಘಟನೆ ಗದಗದಲ್ಲಿ ನಡೆದಿದೆ.

ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭರಮಪ್ಪ ದೊಡ್ಡಮನಿ (55) ಕೊಲೆಯಾದ ವ್ಯಕ್ತಿ ಹಾಗೂ ಸುರೇಶ್ ದೊಡ್ಡಮನಿ(28) ಆರೋಪಿ. ಕ್ಷುಲ್ಲಕ ಕಾರಣಗಳಿಗಾಗಿ ಸುರೇಶ್ ಕುಟುಂಬಸ್ಥರೊಂದಿಗೆ ಆಗಾಗ ಜಗಳವಾಡುತ್ತಿದ್ದ.

crime

ಶನಿವಾರ ರಾತ್ರಿ ಸಹ ತಂದೆ ಮಗನ ಮಧ್ಯೆ ಕಲಹವಾಗಿದೆ. ಕೆಲಸದ ವಿಚಾರದಲ್ಲಿ ಬೈದು ಬುದ್ಧಿ ಮಾತು ಹೇಳಿದಕ್ಕೆ ಮಗ ಸುರೇಶ್‍ಗೆ ಕೋಪ ಬಂದಿದೆ. ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರಿಂದಾಗಿ ಕೋಪಗೊಂಡ ಮಗ ಮನೆಯಲ್ಲಿದ್ದ ಚೂರಿಯಿಂದ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಆ್ಯಸಿಡ್ ಹಾಕಿ ನಾಪತ್ತೆಯಾಗಿದ್ದ ನಾಗೇಶ್ ವಿದ್ಯಾರ್ಥಿಯಿಂದ ಅರೆಸ್ಟ್!

ತೀವ್ರ ರಕ್ತ ಸ್ರಾವದಿಂದ ಭರಮಪ್ಪ ದೊಡ್ಡಮನಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಸುರೇಶ್ ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧಿಸಿದಂತೆ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪಾಪಿ ಮಗನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 5.93 ಕೋಟಿ ರೂ. ಮೌಲ್ಯದ ವಿದ್ಯುತ್ ಕಳ್ಳತನ ಮಾಡಿದ ತಂದೆ-ಮಗ

Leave a Reply

Your email address will not be published.

Back to top button