ಕಾರವಾರ: ಪ್ಯಾಂಟ್ ಶರ್ಟ್ ಹಾಗೂ ಬರ್ಮುಡ ಹಾಕಿಕೊಂಡು ಬಂದರೆಂಬ ಕಾರಣಕ್ಕೆ ದೇವರ ದರ್ಶನಕ್ಕೆ ನಿರಾಕರಿಸಿ ಕೈ-ಕೈ ಮಿಲಾಯಿಸುವವರೆಗೆ ಗಲಾಟೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ವೇಳೆ ಗೋಕರ್ಣದ ಮಹಾಬಲೇಶ್ವರ ದೇವರ ಆತ್ಮಲಿಂಗ ದರ್ಶನ ಮಾಡಲು ಮಹಾರಾಷ್ಟ್ರದಿಂದ ಕುಟುಂಬ ಆಗಮಿಸಿದ್ದು, ಈ ವೇಳೆ ದೇವಸ್ಥಾನದ ನಿಯಮದಂತೆ ಪುರುಷರು ಪಂಚೆ ಹಾಗೂ ಮಹಿಳೆಯರು ಸೀರೆ ಧರಿಸಬೇಕಿತ್ತು. ಆದರೆ ದರ್ಶನದ ವೇಳೆ ಈ ಕುಟುಂಬದ ಮಹಿಳೆಯರು ಚೂಡಿದಾರ ಹಾಗೂ ಪ್ಯಾಂಟ್ ಧರಿಸಿದ್ದರು.
Advertisement
Advertisement
ಕುಟುಂಬದವರು ದೇವಸ್ಥಾನಕ್ಕೆ ತೆರೆಳುತ್ತಿದ್ದ ವೇಳೆ ಸೆಕ್ಯೂರಿಟಿ ಗಾರ್ಡ್ ತಡೆದಿದ್ದು ಪುರುಷರು ಪಂಚೆ ಹಾಗೂ ಮಹಿಳೆಯರು ಸೀರೆ ಧರಿಸಿದವರಿಗೆ ಮಾತ್ರ ಪ್ರವೇಶವಿದೆ ಎಂದು ಹೇಳಿದ್ದಾರೆ. ನಿಯಮ ಪಾಲನೆ ಮಾಡದ ಈ ಕುಟುಂಬಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಇದರಿಂದ ಕುಪಿತರಾದ ಈ ಕುಟುಂಬ ದೇವಸ್ಥಾನದ ಕೌಂಟರ್ ಬಳಿ ತೆರಳಿ ಗಲಾಟೆ ಮಾಡಿದ್ದು ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ತಣ್ಣಗಾಗಿಸಿತು.
Advertisement
ನಂತರ ಈ ಕುಟುಂಬ ಪೊಲೀಸ್ ಠಾಣೆಯಲ್ಲಿ ತಪ್ಪೋಪ್ಪಿಗೆ ಪತ್ರ ನೀಡಿ ಆಡಳಿತದ ಬಳಿ ಕ್ಷಮೆ ಕೊರಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv