ಹುಬ್ಬಳ್ಳಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ (NIMA) ಸಂಸ್ಥೆಯ ಹಿರಿಯ ಸದಸ್ಯರಾದ ಡಾ.ಗುರುನಾಥ ಕಂಠಿಯವರು ಏಪ್ರಿಲ್ 4ರಂದು ಹುಬ್ಬಳ್ಳಿಯ ಕ್ವಾರಂಟೈನ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಕ್ವಾರಂಟೈನ್ ಸೇವೆ ಸಲ್ಲಿಸಿದ ಧಾರವಾಡ ಜಿಲ್ಲೆಯ ಪ್ರಪ್ರಥಮ NIMA ವೈದ್ಯಕೀಯ ಸಂಸ್ಥೆಯ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಯುರ್ವೇದ ವೈದ್ಯರುಗಳಾದ ಡಾ.ಗುರುನಾಥ ಕಂಠಿ, ಡಾ.ಎನ್.ಎನ್.ಭರದ್ವಾಡ ಮತ್ತು ಡಾ.ಎಂ.ಸಿ.ಪಾಟೀಲ್ ಇವರು ಮಾರ್ಚ್ 9 ರಂದು ಕೊವಿಡ್-19 ಸೇವೆಗಾಗಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‍ವೊಂದರ ಕ್ವಾರಂಟೈನ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ‘ಕ್ವಾರಂಟೈನ್ ಸೇವೆ ಸಲ್ಲಿಸಿದ ಧಾರವಾಡ ಜಿಲ್ಲೆಯ ಪ್ರಪ್ರಥಮ NIMA ವೈದ್ಯಕೀಯ ಸಂಸ್ಥೆಯ ತಂಡವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
Advertisement
ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ ಸಂಸ್ಥೆಗೂ ಮತ್ತು ವೈದ್ಯರಿಗೂ ಇವರಿಂದ ಇಡೀ ಆಯುಷ್ ಕ್ಷೇತ್ರಕ್ಕೆ ಗೌರವ, ಹೆಮ್ಮೆಯನ್ನು ತಂದಿದ್ದಾರೆ. ಈ ತಂಡವಲ್ಲದೇ NIMA ಸಂಸ್ಥೆಯ ಅನೇಕ ವೈದ್ಯರು ಕೊವಿಡ್-19 ತಡೆಗಟ್ಟುವ ಸೇವೆಗಾಗಿ ಸನ್ನದ್ಧರಾಗಿದ್ದಾರೆ.
Advertisement
NIMA ಜಿಲ್ಲಾ ಅಧ್ಯಕ್ಷರಾದ ಡಾ.ಪಾಟೀಲ್ ಮತ್ತು ಜಿಲ್ಲಾ ಕಾರ್ಯದರ್ಶಿ ಡಾ.ತ್ಯಾಗರಾಜ್ ಇನ್ನಿತರ ಪದಾಧಿಕಾರಿಗಳ ಪ್ರೇರಣೆ, ಪ್ರೋತ್ಸಾಹ ಹಾಗೂ ಪರಿಶ್ರಮದಿಂದಾಗಿ ಆಯುಷ್ ಕ್ಷೇತ್ರ ಮತ್ತು NIMA ಸಂಸ್ಥೆಗಳ ಘನತೆಯನ್ನು ಹೆಚ್ಚಿಸಿದ್ದಾರೆ. ಜೊತೆಗೆ ಆಯುಷ್ ವೈದ್ಯರಿಗೆಲ್ಲಾ ಸ್ಪೂರ್ತಿ ತುಂಬಿದ್ದಾರೆ.
Advertisement
ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಕ್ಕೆ ಜಿಲ್ಲೆಯ ಆಯುಷ್ ಖಾಸಗಿ ವೈದ್ಯರ ಸೇವೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಆಯುಷ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.