ವಾಷಿಂಗ್ಟನ್: ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳನ್ನೊಳಗೊಂಡ ಕ್ವಾಡ್ ಜಾಗತಿಕ ಒಳಿತಿಗಾಗಿ ಸದಾ ಶ್ರಮಿಸುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Advertisement
ಅಮೆರಿಕದಲ್ಲಿ ನಡೆದ ಕ್ವಾಡ್ ಸಭೆಯಲ್ಲಿ ಭಾಗವಹಿಸಿದ ನರೇಂದ್ರ ಮೋದಿ ಅವರು, ಕ್ವಾಡ್, ಜಾಗತಿಕ ಒಳಿತಿಗಾಗಿ ಸದಾ ಶ್ರಮವಹಿಸುತ್ತದೆ. ಇದೊಂದು ಶಕ್ತಿಯಾಗಿ ಕಾರ್ಯನಿರ್ವಹಿಸಲಿದ್ದು, ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿದಂತೆ ನಾಲ್ಕು ದೇಶಗಳ ಸಹಕಾರವು ಇಂಡೋ-ಪೆಸಿಫಿಕ್‍ನಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತ-ಅಮೆರಿಕ ಸಂಬಂಧ ವೃದ್ಧಿಗೆ ಬೀಜ ಬಿತ್ತಲಾಗಿದೆ: ಪ್ರಧಾನಿ ಮೋದಿ
Advertisement
Advertisement
ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಂಡ ಬಳಿಕ ಕ್ವಾಡ್ ಸಭೆಯಲ್ಲಿ ಪಾಲ್ಗೊಂಡ ಮೋದಿ, ಮೊದಲ ಕ್ವಾಡ್ ಸಭೆಯಲ್ಲಿ ಅಮೆರಿಕದ ಅಧ್ಯಕ್ಷರಾದ ಜೋ ಬೈಡೆನ್ ಅವರಿಗೆ ನಾನು ಧನ್ಯವಾದಗಳನ್ನು ಸಮರ್ಪಿಸುತ್ತೇನೆ. 2004ರ ಸುನಾಮಿಯ ನಂತರ ನಾಲ್ಕು ದೇಶಗಳು ಮೊದಲ ಬಾರಿಗೆ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸಹಾಯ ಮಾಡಲು ಒಂದಾದವು. ಇಂದು ಜಗತ್ತು ಕೋವಿಡ್-19ನಿಂದಾಗಿ ಹೋರಾಡುತ್ತಿರುವಾಗ ಮಾನವೀಯತೆಯ ಹಿತದೃಷ್ಟಿಯಿಂದ ಮತ್ತೊಮ್ಮೆ ಕ್ವಾಡ್ ಸದಸ್ಯರೆಲ್ಲ ಒಟ್ಟು ಸೇರಿದ್ದೇವೆ. ನಮ್ಮ ಕ್ವಾಡ್ ಲಸಿಕೆ ಉಪಕ್ರಮವು ಇಂಡೋ-ಪೆಸಿಫಿಕ್ ಪ್ರದೇಶದ ಜನರಿಗೆ ಸಹಾಯ ಮಾಡುತ್ತದೆ ಎಂದರು.
Advertisement
ಕ್ವಾಡ್ ಮೂಲಕ ಸಕಾರಾತ್ಮಕ ಚಿಂತನೆ ಮತ್ತು ಪರಸ್ಪರ ಸಹಕಾರಿಯಾಗುವ ಕೆಲಸಗಳನ್ನು ನಿರ್ವಹಿಸಲು ನಿರ್ಧರಿಸಿದ್ದೇವೆ. ಪೂರೈಕೆ ಸರಪಳಿ ಅಥವಾ ಜಾಗತಿಕ ಭದ್ರತೆ, ಹವಾಮಾನ, ಕೋವಿಡ್ ಪ್ರತಿಕ್ರಿಯೆ ಮತ್ತು ತಂತ್ರಜ್ಞಾನಗಳ ಬಗೆಗಿನ ಕ್ವಾಡ್ ಸದಸ್ಯರೊಂದಿಗಿನ ವಿಶೇಷ ಮಾತುಕತೆ ನನಗೆ ತುಂಬಾ ಸಂತೋಷ ನೀಡಿದೆ. ಕ್ವಾಡ್ ಒಂದು ರೀತಿಯಲ್ಲಿ ಜಾಗತಿಕ ಒಳಿತಿಗಾಗಿ ಪರಸ್ಪರ ಸಹಕಾರಿಯಾಗಿ ಕೆಲಸ ಮಾಡುತ್ತದೆ. ಕ್ವಾಡ್‍ನಲ್ಲಿ ನಮ್ಮ ಸಹಕಾರವು ಇಂಡೋ-ಪೆಸಿಫಿಕ್ ಮತ್ತು ಇಡೀ ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಲು ಸಹಕಾರಿಯಾಗುವುದೆಂದು ನಾನು ಬಲವಾಗಿ ನಂಬಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಮಲಾ ಹ್ಯಾರಿಸ್‍ಗೆ ಅಪರೂಪದ ಗಿಫ್ಟ್ ನೀಡಿದ ಪ್ರಧಾನಿ ಮೋದಿ
After a series of meetings in Washington DC, PM @narendramodi emplanes for New York City. He will be addressing the UNGA session there. pic.twitter.com/V4njbyHOfr
— PMO India (@PMOIndia) September 24, 2021
ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ನಾಯಕರೊಂದಿಗೆ ಕ್ವಾಡ್ ಸಭೆಯಲ್ಲಿ ಭಾಗವಹಿಸಿದ ಮೋದಿ, 5ಜಿ ತಂತ್ರಜ್ಞಾನ, ಹವಾಮಾನ ಬದಲಾವಣೆ, ನಿರ್ಣಾಯಕ ಮೂಲಸೌಕರ್ಯ, ಪೂರೈಕೆ ಸರಪಳಿಗಳು ಮತ್ತು ಪ್ರಾದೇಶಿಕ ಭದ್ರತೆಯಂತಹ ವಿವಿಧ ವಿಷಯಗಳನ್ನು ನಾಯಕರೊಂದಿಗೆ ಹೆಚ್ಚು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜೋ ಬೈಡನ್ ಭೇಟಿ ಮಾಡಿದ ಪ್ರಧಾನಿ ಮೋದಿ