– ಸೀಟ್ ಬ್ಲಾಕ್ ದಂಧೆ ತಡೆಗೆ ಕೆಇಎಯಿಂದ ಹದ್ದಿನ ಕಣ್ಣು
ಬೆಂಗಳೂರು: ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ (CET Exam) ಕ್ಯೂಆರ್ ಕೋಡ್ (QR Code) ಕಣ್ಗಾವಲಿನ ಮೂಲಕ ಕೆಇಎ (KEA) ಹದ್ದಿನ ಕಣ್ಣು ಇಟ್ಟಿತ್ತು. ಇದೀಗ ಅದನ್ನೇ ಮುಂದುವರಿಸಿಕೊಂಡು, ಕಾಲೇಜು ಅಡ್ಮಿಷನ್ ಪ್ರಕ್ರಿಯೆಯಲ್ಲಿಯೂ ಕ್ಯೂಆರ್ ಕೋಡ್ ಬಳಸಲು ಮುಂದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಇದೀಗ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ಅಡ್ಮಿಷನ್ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಸೀಟ್ ಬ್ಲಾಕ್ ದಂಧೆ ತಡೆಯೋದಕ್ಕೆ ಕೆಇಎ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಇದಕ್ಕೂ ಮುನ್ನ ಏ.15,16 ಹಾಗೂ 17ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಕೆಇಎ ಕ್ಯೂಆರ್ ಕೋಡ್ ತಂತ್ರಜ್ಞಾನ ಬಳಸಿ, ಯಶಸ್ವಿಯಾಗಿತ್ತು.ಇದನ್ನೂ ಓದಿ: ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್ ಗಾಯಬ್ ಪೋಸ್ಟರ್ ಡಿಲೀಟ್ – ಇಲ್ಲಿದೆ ಇನ್‌ಸೈಡ್ ಸ್ಟೋರಿ
ಹಂಚಿಕೆಯಾಗುವ ವೃತ್ತಿಪರ ಕೋರ್ಸ್‌ಗಳಲ್ಲಿ ಒಂದೇ ಒಂದು ಸೀಟು ಅಕ್ರಮ ಆಗದಂತೆ ನೋಡಿಕೊಳ್ಳಲು ಕೆಇಎ ಈ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಕಾಲೇಜ್ ಅಡ್ಮಿಷನ್‌ಗೆ ಕ್ಯೂಆರ್ ಕೋಡ್ ಹೇಗೆ ಬಳಸಲಾಗುತ್ತೆ?
> ಕೆಇಎಯಿಂದ ಹಂಚಿಕೆ ಆಗುವ ಪ್ರತಿ ಸೀಟುಗಳನ್ನ ಮಾನಿಟರ್ ಮಾಡಲಾಗುತ್ತದೆ.
> ಕೆಇಎಯಿಂದ ವಿದ್ಯಾರ್ಥಿಗೆ ಸೀಟ್ ಅಲಾಟ್ ಆದ ಮೇಲೆ ಅದಕ್ಕೆ ದಾಖಲಾತಿಯನ್ನು ಕೆಇಎ ಕೊಡುತ್ತದೆ.
> ದಾಖಲಾತಿ ಪ್ರತಿ ತೆಗೆದುಕೊಂಡ ವಿದ್ಯಾರ್ಥಿ, ಹಂಚಿಕೆ ಆಗಿರುವ ಕಾಲೇಜಿಗೆ ಹೋಗಿ ಅಡ್ಮಿಷನ್ ಮಾಡಿಕೊಳ್ಳಬೇಕು.
> ಅಡ್ಮಿಷನ್ ಸಮಯದಲ್ಲಿ ಕಾಲೇಜಿಗೆ ಕೆಇಎ ಒಂದು ಆ್ಯಪ್ ಕೊಟ್ಟಿರುತ್ತದೆ. ಆ ಆ್ಯಪ್‌ನಿಂದ ವಿದ್ಯಾರ್ಥಿಯನ್ನು ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ.
> ಸ್ಕ್ಯಾನ್ ಮಾಡಿದ ಕೂಡಲೇ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಕೆಇಎಗೆ ತಲುಪುತ್ತದೆ.
> ಸೀಟು ಹಂಚಿಕೆ ಆಗಿದ್ದು ನಿಜವಾದ ವಿದ್ಯಾರ್ಥಿನಾ? ಪರೀಕ್ಷೆ ಬರೆದಿದ್ದು ಅದೇ ವಿದ್ಯಾರ್ಥಿನಾ? ದಾಖಲಾತಿ ಆಗುತ್ತಿರುವುದು ಅದೇ ವಿದ್ಯಾರ್ಥಿನಾ ಎಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ದೃಢವಾಗಲಿದೆ.
> ಈ ಮೂಲಕ ಅಕ್ರಮ ತಡೆಗೆ ಕೆಇಎ ಪ್ಲ್ಯಾನ್ ಮಾಡಿದೆ.ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಿಸಿಲಿನ ತಾಪ ಹೆಚ್ಚಳ – ಕೆರೆಯಲ್ಲಿ ಕೋತಿಗಳ ನೀರಾಟ