ಮಂಡ್ಯ: ಮಂತ್ರಿ ಸ್ಥಾನ ಸ್ವೀಕಾರ ಮಾಡಿದಾಗಿನಿಂದ ಕೃಷಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಒಂದಲ್ಲ ಒಂದು ವಿಚಾರಕ್ಕೆ ರಾಜಕೀಯ ಪಡಸಾಲೆಯಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಬಿಜೆಪಿ (BJP) ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪೇಸಿಎಂ ಅಭಿಯಾನ ಮಾಡಿ ದೊಡ್ಡ ಮಟ್ಟದ ಏಟನ್ನು ನೀಡಿತ್ತು. ಇದೀಗ ಚಲುವರಾಯಸ್ವಾಮಿಯ ಮೂಲಕ ಕಾಂಗ್ರೆಸ್‍ಗೆ ಪೆಟ್ಟು ಕೊಡಲು ಬಿಜೆಪಿ ಅಂತಹದ್ದೇ ಒಂದು ಅಭಿಯಾನಕ್ಕೆ ಮುಂದಾಗಿದೆ.
ನಾಗಮಂಗಲ ಶಾಸಕ ಹಾಗೂ ಕೃಷಿ ಸಚಿವ ಸಿ.ಎಸ್.ಚಲುವರಾಯಸ್ವಾಮಿ ವಿರುದ್ಧ ಕೇಳಿಬಂದಿದ್ದ ಲಂಚ ಆರೋಪ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ (Congress) ಪೇಸಿಎಂ ಅಭಿಯಾನ ಮಾಡಿ ದೊಡ್ಡ ಮಟ್ಟದ ಏಟನ್ನು ನೀಡಿತ್ತು. ಇದೀಗ ಚಲುವರಾಯಸ್ವಾಮಿಯ ಮೂಲಕ ಕಾಂಗ್ರೆಸ್‍ಗೆ ಪೆಟ್ಟು ಕೊಡಲು ಬಿಜೆಪಿ ಪೇಸಿಎಸ್ ಅಭಿಯಾನಕ್ಕೆ ಮುಂದಾಗಿದೆ.
ಕಂಡಕ್ಟರ್ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಕ್ಲೀನ್‍ಚಿಟ್ ಬೆನ್ನಲ್ಲೇ ಕೃಷಿ ಇಲಾಖೆಯ ಲಂಚಕ್ಕೆ ಒತ್ತಡ ಹಾಕಿರುವ ಆರೋಪ ಚಲುವರಾಯಸ್ವಾಮಿ ಬೆನ್ನಿಗೆ ಬಿದ್ದಿದೆ. ಕಳೆದ ತಿಂಗಳು ಕಂಡಕ್ಟರ್ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದ ಸಿಐಡಿ ತನಿಖೆಯನ್ನು ಚಲುವರಾಯಸ್ವಾಮಿ ಎದುರಿಸಿದ್ದರು. ಆ ಪ್ರಕರಣದಲ್ಲಿ ಚಲುವರಾಯಸ್ವಾಮಿಗೆ ಕ್ಲೀನ್‍ಚೀಟ್ ಸಿಕ್ಕಿತ್ತು. ಈ ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿಗಳ ಬಳಿ ಲಂಚ ಬೇಡಿಕೆ ಆರೋಪದಡಿ ಸಿಐಡಿ ತನಿಖೆಯನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಯುವತಿ ಮದ್ವೆಗೆ ಒಪ್ಪಿಲ್ಲ ಅಂತ 850 ಅಡಿಕೆ ಗಿಡ ನಾಶ ಮಾಡಿದ ಕಿರಾತಕ
ಇನ್ನೊಂದೆಡೆ ಬಿಜೆಪಿ ಪೇಸಿಎಸ್ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡ್ತಾ ಇದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪೇಸಿಎಂ ಎಂಬ ಅಭಿಯಾನ ಮಾಡಿ ಬಿಜೆಪಿಗೆ ತೀವ್ರ ಮುಜುಗರ ತಂದಿತ್ತು. ಇದ್ದನ್ನೇ ಇದೀಗ ಅಸ್ತ್ರವನ್ನು ಮಾಡಿಕೊಂಡಿರುವ ಬಿಜೆಪಿ, ಸಾಮಾಜಿಕ ಜಾಲ ತಾಣದಲ್ಲಿ ಕ್ಯೂಆರ್ ಕೋಡ್ ಬಳಕೆ ಮಾಡಿಕೊಂಡು ಪೇಸಿಎಸ್ ಎಂದು ಮಾಡಿ 6 ರಿಂದ 8 ಲಕ್ಷ ರೂಪಾಯಿಯನ್ನು ಇಲ್ಲಿ ಪಡೆಯಲಾಗುತ್ತದೆ ಎಂದು ಹಾಕಲಾಗಿದೆ. ಜೊತೆಗೆ ಟ್ಯಾಗ್‍ಲೈನ್‍ನಲ್ಲಿ ಸ್ಕ್ಯಾನ್ ಮಾಡಿ ಚಲುವರಾಯಸ್ವಾಮಿಯ ಭ್ರಷ್ಟಾಚಾರ ಹೊರ ಬರುತ್ತೆ ನೋಡಿ ಎಂದು ಹಾಕಿದ್ದಾರೆ. ಈ ಪೇಸಿಎಸ್ ಮೂಲಕ ಕೃಷಿ ಇಲಾಖೆಯ ಟ್ರಾನ್ಸ್ ಫರ್ ಗೆ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದ ಪ್ರಕರಣದ ಸಂಬಂಧ ಸಚಿವ ಚಲುವರಾಯಸ್ವಾಮಿ ರಾಜಭವನಕ್ಕೆ ಭೇಟಿ ಕೊಟ್ಟು ರಾಜ್ಯಪಾಲರಿಗೆ ಸಮಜಾಯಿಷಿ ನೀಡಿದ್ದಾರೆ. ನಕಲಿ ಪತ್ರದ ವಿರುದ್ಧ ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ. ಮಂಡ್ಯದಲ್ಲಿ ಆರು ಸ್ಥಾನ ಗೆದ್ದಿರೋದಕ್ಕೆ ಸಹಿಸ್ತಿಲ್ಲ. ಪತ್ರದಲ್ಲಿ ಕುಮಾರಸ್ವಾಮಿ ನಮ್ಮ ನಾಯಕರು ಅಂತಾ ಮೆನ್ಷನ್ ಮಾಡಿದ್ದಾರೆ. ಜನತಾದಳದವರೇ ಇದನ್ನ ಕ್ರಿಯೇಟ್ ಮಾಡಿದ್ದಾರೆ ಅಂತ ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಸದ್ಯ ರಾಜ್ಯ ರಾಜಕಾರಣದಲ್ಲಿ ಪೇಸಿಎಸ್ ಭಾರೀ ಸದ್ದು ಮಾಡ್ತಿದೆ. ಸರ್ಕಾರ ವರ್ಸಸ್ ವಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ.
Web Stories