ದೋಹಾ: ಚಿಯರ್ಸ್ ಹೇಳುತ್ತಾ ಥ್ರಿಲ್ ಆಗಿ ಫುಟ್‌ಬಾಲ್ (Football) ಪಂದ್ಯ ವೀಕ್ಷಿಸುವ ಆಸೆ ಹೊಂದಿದ್ದ ಅಭಿಮಾನಿಗಳಿಗೆ ಕತಾರ್ (Qatar 2022) ಅಧಿಕಾರಿಗಳು ಕಹಿ ಸುದ್ದಿ ನೀಡಿದ್ದಾರೆ. ಈ ಬಾರಿ ಫಿಫಾ ವಿಶ್ವಕಪ್ ಫುಟ್‌ಬಾಲ್ (FIFA World Cup 2022) ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ ಸ್ಟೇಡಿಯಂನಲ್ಲಿ ಬಿಯರ್ ನಿಷೇಧಿಸಲಾಗುವುದು. ಆಲ್ಕೋಹಾಲ್‌ಯುಕ್ತವಲ್ಲದ ಪಾನೀಯಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
Advertisement
ಫಿಫಾ ವಿಶ್ವಕಪ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಆಲ್ಕೋಹಾಲ್‌ಯುಕ್ತವಲ್ಲದ ಪಾನೀಯ ಮಾರಾಟ ಮಾಡಬಾರದು ಎಂಬ ನಿರ್ಧಾರಕ್ಕೆ ಕತಾರ್ ಅಧಿಕಾರಿಗಳು ಬಂದಿದ್ದಾರೆ. ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: ಮಳೆಯಲ್ಲಿ ಕೊಚ್ಚಿ ಹೋದ IND vs NZ ಮೊದಲ ಟಿ20 ಪಂದ್ಯ – ಟಾಸ್‍ಗೂ ಅವಕಾಶವಿಲ್ಲ
Advertisement
Advertisement
ಪಂದ್ಯಾವಳಿಯ ಸಮಯದಲ್ಲಿ ಮದ್ಯ ಮಾರಾಟ ವಿಚಾರ ಫಿಫಾ ಮತ್ತು ಆತಿಥೇಯ ರಾಷ್ಟ್ರದ ನಡುವಿನ ಪ್ರಮುಖ ಚರ್ಚೆಯಾಗಿದೆ. ಕತಾರ್‌ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಕುಡಿಯಲು ಅನುಮತಿಯಿಲ್ಲದ ಕಾರಣ ಈವೆಂಟ್‌ನ ಸಮಯದಲ್ಲಿ ಅಭಿಮಾನಿಗಳಿಗೆ ಆಲ್ಕೋಹಾಲ್ ಲಭ್ಯತೆ ವಿಚಾರವಾಗಿ ಕಾಳಜಿ ವಹಿಸಲಾಗಿದೆ.
Advertisement
ಸ್ಟೇಡಿಯಂಗಳಲ್ಲಿ ಬಿಯರ್ ಮಾರಾಟ ಮಾಡದಿರುವ ಹಠಾತ್ ನಿರ್ಧಾರವು ಅಭಿಮಾನಿಗಳಿಗೆ ಮಾತ್ರವಲ್ಲದೆ ಫಿಫಾಗೆ ದೊಡ್ಡ ಆಘಾತವನ್ನು ನೀಡಿದೆ. ಏಕೆಂದರೆ ಫಿಫಾ, ಅಮೆರಿಕನ್ ಬಿಯರ್ ದೈತ್ಯ ಬಡ್ವೈಸರ್ ಜೊತೆಗೆ ಬಹು ಮಿಲಿಯನ್ ಡಾಲರ್ ಪ್ರಚಾರದ ಒಪ್ಪಂದ ಮಾಡಿಕೊಂಡಿದೆ. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ