ದೋಹಾ: ಅರಬ್ಬರ ನಾಡಿನಲ್ಲಿ ಫುಟ್‍ಬಾಲ್ (Football) ಜ್ವರ ಆರಂಭಗೊಂಡಿದೆ. ಚೊಚ್ಚಲ ಬಾರಿಗೆ ಫಿಫಾ ಫುಟ್‍ಬಾಲ್ ವಿಶ್ವಕಪ್ (FIFA World Cup) ಆತಿಥ್ಯಕ್ಕೆ ಗಲ್ಫ್ ರಾಷ್ಟ್ರ ಕತಾರ್ ಸಜ್ಜಾಗಿದೆ. ಹಲವು ವಿಶೇಷತೆಗಳೊಂದಿಗೆ ನಡೆಯಲಿರುವ ಫಿಫಾ ವಿಶ್ವಕಪ್‍ನಲ್ಲಿ ಸ್ಟೇಡಿಯಂನೊಳಗೆ ಬಿಯರ್ (Beer) ಬಾಟಲ್‍ಗಳನ್ನು ತರಲು ನಿಷೇಧ ಹೇರಲಾಗಿದೆ.
Advertisement
ವಿವಾದ (Controversies), ಊಹಾಪೋಹಗಳ ನಡುವೆ ಕತಾರ್ ಅಸಾಧಾರಣ ರೀತಿಯಲ್ಲಿ ಫಿಫಾ ವಿಶ್ವಕಪ್‍ಗಾಗಿ ಸಿದ್ಧತೆ ನಡೆಸಿದೆ. ಫಿಫಾ ವಿಶ್ವಕಪ್-2022 ಅರಬ್ ರಾಷ್ಟ್ರ ಕತಾರ್ (Qatar) ಆತಿಥ್ಯದಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 18 ರವರೆಗೆ ನಡೆಯಲಿದೆ. ಅರಬ್ಬರ ನಾಡಿನಲ್ಲಿ ಇದೇ ಮೊದಲ ಬಾರಿ ಪುಟ್‍ಬಾಲ್ ವಿಶ್ವಕಪ್ ಟೂರ್ನಿ ಆಯೋಜನೆ ಆಗುತ್ತಿರುವುದು ಗಮನಾರ್ಹ. ಈ ಮೂಲಕ ಕತಾರ್ ಪ್ರತಿಷ್ಠಿತ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವ ಏಷ್ಯದ 3ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಫಿಫಾ ವಿಶ್ವಕಪ್ ಆತಿಥ್ಯ ವಹಿಸುತ್ತಿರುವ ಅತ್ಯಂತ ಪುಟ್ಟ ರಾಷ್ಟ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
Advertisement
Advertisement
ಇದೀಗ ಸಿದ್ಧತೆಗಳೆಲ್ಲ ಮುಗಿದು ಅಭ್ಯಾಸ ಪಂದ್ಯಗಳು ಕೂಡ ನಡೆಯುತ್ತಿದೆ. ಈ ನಡುವೆ ಕತಾರ್‌ನಲ್ಲಿ ಫುಟ್‍ಬಾಲ್ ವಿಶ್ವಕಪ್ ವೇಳೆ 8 ಕ್ರೀಡಾಂಗಣದಲ್ಲಿ ಬಿಯರ್ ಸೇಲ್ ಮಾಡದಂತೆ ನಿಷೇಧ ಹೇರಲಾಗಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ಬಿಯರ್ ಕಂಪನಿ ಬಡ್‍ವೈಸರ್ ಜೊತೆ ಪ್ರಯೋಜಕತ್ವಕ್ಕೆ ಸಹಿ ಹಾಕಲಾಗಿತ್ತು. ಇದೀಗ ಟೂರ್ನಿ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವಂತೆ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ವೇಳೆ ಸೆಕ್ಸ್ ಮಾಡಿದ್ರೆ 7 ವರ್ಷ ಜೈಲು!
Advertisement
ಫುಟ್‍ಬಾಲ್ ಎಂದರೆ ಭಾವೋದ್ವೇಗದ ಆಟದ ನಡುವೆ ಗ್ಲಾಮರ್ ಟಚ್ ಕೂಡ ಹೆಚ್ಚಾಗಿರುತ್ತದೆ. ಇಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ಆಟದೊಂದಿಗೆ ರಂಗೀನಾಟಗಳು ಕೂಡ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕತಾರ್‌ನಲ್ಲಿ ಈ ಎಲ್ಲಾ ವೈಭೋಗಗಳಿಗೆ ಬ್ರೇಕ್ ಬಿದ್ದಿದೆ.
ಚಳಿಗಾಲದಲ್ಲಿ ಫುಟ್‍ಬಾಲ್ ಬಿಸಿ:
ಈ ಹಿಂದೆ ಹೆಚ್ಚಿನ ಪಿಫಾ ವಿಶ್ವಕಪ್‍ಗಳನ್ನು ಮೇನಿಂದ ಜುಲೈವರೆಗೆ ನಿಗದಿಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಫಿಫಾ ವಿಶ್ವಕಪ್ ನವೆಂಬರ್ ಹಾಗೂ ಡಿಸೆಂಬರ್‍ನಲ್ಲಿ ನಡೆಯುತ್ತಿದೆ. ಈ ಹಿಂದೆ ಮೇ ಮತ್ತು ಜುಲೈನಲ್ಲಿ ನಡೆಸಲು ತೀರ್ಮಾನಿಸಿದಾಗ ಕತಾರ್‌ನಲ್ಲಿ ಬಿಸಿಲು ಹೆಚ್ಚಾಗಿತ್ತು ಹಾಗಾಗಿ ಮುಂದೂಡಲಾಗಿತ್ತು. ಇದೀಗ ಚಳಿಗಾಲದಲ್ಲಿ ನಡೆಯುತ್ತಿದೆ. ಚಳಿಗಾಲದಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ ಇದಾಗಿದೆ. ಅಲ್ಲದೇ ಕತಾರ್ ಫುಟ್‍ಬಾಲ್ ವಿಶ್ವಕಪ್ ಅತ್ಯಂತ ದುಬಾರಿ ವಿಶ್ವಕಪ್ ಎಂಬ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಫಿಫಾ ವಿಶ್ವಕಪ್‍ನಲ್ಲಿ ಕತಾರ್ ತಂಡ ಈವರೆಗೆ ಭಾಗವಹಿಸದಿದ್ದರೂ, ವಿಶ್ವಕಪ್ ಆಯೋಜನೆ ಕಾರಣದಿಂದಾಗಿ ಅತಿಥೇಯ ರಾಷ್ಟ್ರ ಆಡಲು ಅರ್ಹತೆ ಪಡೆದಿದೆ.
32 ತಂಡಗಳ ಹೋರಾಟ:
ಕತಾರ್ ವಿಶ್ವಕಪ್ ಆಡಲು ಈ ಬಾರಿ ಒಟ್ಟು 32 ತಂಡಗಳು ಅರ್ಹತೆ ಪಡೆದಿವೆ. ತಲಾ 4 ತಂಡಗಳಿರುವ 8 ಗುಂಪುಗಳನ್ನು ರಚಿಸಲಾಗಿದೆ. 32 ತಂಡಗಳು 64 ಪಂದ್ಯಗಳಲ್ಲಿ ಸ್ಪರ್ಧಿಸಲಿವೆ. ಗುಂಪು ಹಂತವು ನವೆಂಬರ್ 20 ರಿಂದ ಡಿಸೆಂಬರ್ 2ರವರೆಗೆ ನಡೆಯಲಿದೆ ನಾಕೌಟ್ ಹಂತವು ಡಿಸೆಂಬರ್ 3ರಿಂದ 18ರವರೆಗೆ ನಡೆಯಲಿದೆ. ನ.20 ರಂದು ಆತಿಥೇಯ ಕತಾರ್ ತಂಡ ಈಕ್ವೆಡಾರ್ ತಂಡವನ್ನು ಎದುರಿಸುವ ಮೂಲಕ ಫಿಫಾ ವಿಶ್ವಕಪ್‍ಗೆ ಚಾಲನೆ ಸಿಗಲಿದೆ. ಇದನ್ನೂ ಓದಿ: ಮೆಸ್ಸಿ ಈಗ ಬೈಜೂಸ್ ಜಾಗತಿಕ ರಾಯಭಾರಿ
8 ಸ್ಟೇಡಿಯಂನಲ್ಲೂ ನಾಕೌಟ್ ಪಂದ್ಯ:
ಕತಾರ್‌ನ 5 ನಗರಗಳು ವಿಶ್ವಕಪ್ ಸೆಣಸಾಟಕ್ಕೆ ಸಾಕ್ಷಿಯಾಗಲಿವೆ. ವಿಶೇಷ ಎಂದರೆ ಎಲ್ಲಾ 8 ಕ್ರೀಡಾಂಗಣಗಳಲ್ಲೂ ನಾಕೌಟ್ ಪಂದ್ಯಗಳೂ ನಡೆಯಲಿವೆ. 8 ಸ್ಟೇಡಿಯಂಗಳು 64 ಪಂದ್ಯಗಳಿಗೆ ವೇದಿಕೆಯಾಗಲಿವೆ. ಇಲ್ಲಿನ ದೋಹದ ಸ್ಟೇಡಿಯಂ ಒಂದನ್ನು ಕ್ರೀಡಾಂಗಣಗಳ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಹೊತ್ತು ತಂದ ಹಡಗುಗಳ ಕಂಟೇನರ್‌ಗಳನ್ನೇ ಬಳಸಿ ಕ್ರೀಡಾಂಗಣವೊಂದನ್ನು ಕಟ್ಟಲಾಗಿದೆ.
ಮೊಬೈಲ್ ಸ್ಟೇಡಿಯಂ:
ಕತಾರ್ ರಾಜಧಾನಿ ದೋಹಾದಲ್ಲಿ 974 ಕಂಟೇನರ್‌ಗಳನ್ನು ಬಳಸಿ ಕ್ರೀಡಾಂಗಣವೊಂದನ್ನು ನಿರ್ಮಿಸಲಾಗಿದೆ. ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡ ಬಳಿಕ ಈ ಕ್ರೀಡಾಂಗಣವನ್ನು ಬಿಚ್ಚಿ ಬೇರೆಡೆಗೆ ಕೊಂಡೊಯ್ಯಬಹುದು. ಮೊಬೈಲ್ ಕ್ಯಾಂಟೀನ್ ರೀತಿ ಇದು ಮೊಬೈಲ್ ಕ್ರೀಡಾಂಗಣವಾಗಿ ಮಾರ್ಪಟ್ಟಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ಸ್ಟೇಡಿಯಂಗಳಲ್ಲಿ ಬಿಯರ್ ಬ್ಯಾನ್ – ಫ್ಯಾನ್ಸ್‌ಗೆ ಶಾಕ್ ಕೊಟ್ಟ ಕತಾರ್
ಸ್ಟಾರ್ ಆಟಗಾರರ ದಂಡು:
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಒಟ್ಟು ಐದು ಬಾರಿ ಪ್ರಶಸ್ತಿ ಗೆದ್ದಿರುವ ಬ್ರೆಝಿಲ್ ಅತ್ಯಂತ ಯಶಸ್ವಿ ತಂಡವಾಗಿದೆ. ಜರ್ಮನಿ ಹಾಗೂ ಇಟಲಿ ತಲಾ 4 ಬಾರಿ ವಿಶ್ವಕಪ್ ಗೆದ್ದುಕೊಂಡಿವೆ. ಅರ್ಜೆಂಟೀನಾ, ಫ್ರಾನ್ಸ್ ಹಾಗೂ ಉರುಗ್ವೆ ತಲಾ 2 ಬಾರಿ ವಿಶ್ವಕಪ್ ಜಯಿಸಿದ ಇಂಗ್ಲೆಂಡ್ ಹಾಗೂ ಸ್ಪೇನ್ ತಲಾ ಒಂದು ಬಾರಿ ವಿಶ್ವಕಪ್ ಮುಡಿಗೇರಿಸಿ ಕೊಂಡಿವೆ. ಈ ಬಾರಿಯ ವಿಶ್ವಕಪ್ ಯಾರ ಪಾಲಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಈ ನಡುವೆ ಸ್ಟಾರ್ ತಂಡದಲ್ಲಿರುವ ಫುಟ್‍ಬಾಲ್ ದಂತಕಥೆಗಳಾದ ಲಿನೋನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ, ನೇಮರ್ ಅವರತ್ತ ಎಲ್ಲರ ಚಿತ್ತ ನೆಟ್ಟಿದೆ.