ರಿಯಾದ್: ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ (Skytrax World Airline) ಸಂಸ್ಥೆ ನಡೆಸಿದ ಗ್ರಾಹಕರ ಆನ್‌ಲೈನ್ ಸಮೀಕ್ಷೆಯಲ್ಲಿ ಸೌದಿ ಅರೇಬಿಯಾದ (Soudi Arabia) ಕತಾರ್ ಏರ್‌ವೇಸ್ (Qatar Airways) ಅತ್ಯುತ್ತಮ ಏರ್‌ಲೈನ್ ಸಂಸ್ಥೆ ಎಂದು ಗುರುತಿಸಿಕೊಂಡಿದ್ದು, ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ ಅವಾರ್ಡ್ಸ್ 2022 ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್, ಜಪಾನೀಸ್ ಮತ್ತು ಚೈನೀಸ್ ಭಾಷೆಗಳಲ್ಲಿ 2021 ಸೆಪ್ಟೆಂಬರ್‌ನಿಂದ 2022 ಆಗಸ್ಟ್ ವರೆಗೆ ನಡೆಸಿದ ವರ್ಲ್ಡ್ ಏರ್‌ಲೈನ್ (World Airline) ಗ್ರಾಹಕರ ಸಮೀಕ್ಷೆಯಲ್ಲಿ ಕತಾರ್‌ಗೆ ಬೆಸ್ಟ್ ಏರ್‌ಲೈನ್ ಸಂಸ್ಥೆ ಎಂಬ ಫಲಿತಾಂಶ ಬಂದಿದೆ.
Advertisement
Advertisement
ಅಂತಿಮ ಸುತ್ತಿನಲ್ಲಿ 350ಕ್ಕೂ ಹೆಚ್ಚು ಏರ್‌ಲೈನ್ ಸಂಸ್ಥೆಗಳನ್ನು ಪಟ್ಟಿ ಮಾಡಲಾಗಿತ್ತು. ಅವುಗಳಲ್ಲಿ ಟಾಪ್-20 ಸಂಸ್ಥೆಗಳನ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಈ ಪೈಕಿ ಕತಾರ್ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಇನ್ನುಳಿದಂತೆ ಸಿಂಗಾಪುರ್ ಏರ್‌ಲೈನ್ಸ್ (Singapore Airlines) ಲಿಮಿಟೆಡ್ ಮತ್ತು ಎಮಿರೇಟ್ಸ್ (Emirates) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಆದರೆ ಕಳೆದ ವರ್ಷದ 6ನೇ ಸ್ಥಾನದಲ್ಲಿದ್ದ ಕ್ಯಾಥೆ ಪೆಸಿಫಿಕ್ ಏರ್‌ಲೈನ್ಸ್ 16ನೇ ಸ್ಥಾನಕ್ಕೆ ಕುಸಿದಿದೆ. ಇದನ್ನೂ ಓದಿ: ರಷ್ಯಾದ ಶಾಲೆಯಲ್ಲಿ ಮನಸ್ಸೋಇಚ್ಛೆ ಗುಂಡು ಹಾರಿಸಿದ ಬಂದೂಕುಧಾರಿ- 5 ಮಕ್ಕಳು ಸೇರಿ 9 ಮಂದಿ ದುರ್ಮರಣ
Advertisement
Advertisement
ಕೋವಿಡ್ ಸಾಂಕ್ರಾಮಿಕದ (Covid-19) ಸಂದರ್ಭದಲ್ಲಿ ಹಾಗೂ ಅದರ ನಂತರ ಸತತವಾಗಿ ಹಾರಾಟ ನಡೆಸಿದ ಕತಾರ್ ವಿಶ್ವದಾದ್ಯಂತ ಸುಮಾರು 30 ಸಂಸ್ಥೆಗಳನ್ನು ಒಳಗೊಂಡಿದೆ. ಜೊತೆಗೆ ಕತಾರ್ ವಿಮಾನಯಾನವನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ ಎಂದು ಸ್ಕೈಟ್ರಾಕ್ಸ್ ಸಿಇಒ ಎಡ್ವರ್ಡ್ ಪ್ಲಾಸ್ಟೆಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ್ದಕ್ಕೆ ತರಗತಿಗೆ ಪ್ರವೇಶ ನಿಷೇಧ – ವ್ಯಾಪಕ ಪ್ರತಿಭಟನೆ ಬಳಿಕ ಶಾಲೆ ಬಿಡಿಸಿದ ಪೋಷಕರು
ಟಾಪ್-20 ಏರ್‌ಲೈನ್ಸ್ ಯಾವುವು?
ಕತಾರ್ ಏರ್‌ವೇಸ್, ಸಿಂಗಾಪುರ್ ಏರ್‌ಲೈನ್ಸ್, ಎಮಿರೇಟ್ಸ್, ನಿಪ್ಪಾನ್ ಏರ್‌ವೇಸ್, ಕ್ವಾಂಟಾಸ್ ಏರ್‌ವೇಸ್, ಜಪಾನ್ ಏರ್‌ಲೈನ್ಸ್, ಟರ್ಕ್ ಹವಾ ಯೊಲ್ಲರಿ (ಟರ್ಕಿಶ್ ಏರ್‌ಲೈನ್ಸ್), ಏರ್ ಫ್ರಾನ್ಸ್, ಕೊರಿಯನ್ ಏರ್, ಸ್ವಿಸ್ ಇಂಟರ್ ನ್ಯಾಷನಲ್ ಏರ್‌ಲೈನ್ಸ್, ಬ್ರಿಟಿಷ್ ಏರ್‌ವೇಸ್, ಇತಿಹಾದ್ ಏರ್‌ವೇಸ್, ಚೀನಾ ಸೌತ್‌ರನ್, ಹೈನಾನ್ ಏರ್‌ಲೈನ್ಸ್, ಲುಫ್ಥಾನ್ಸ, ಕ್ಯಾಥೆ ಪೆಸಿಫಿಕ್, ಕೆಎಲ್‌ಎಂ, ಇವಿಎ ಏರ್, ವರ್ಜಿನ್ ಅಟ್ಲಾಂಟಿಕ್, ವಿಸ್ತಾರಾ ಏರ್‌ಲೈನ್ ಕ್ರಮವಾಗಿ 1 ರಿಂದ 20 ಸ್ಥಾನಗಳಲ್ಲಿವೆ.