ಕತಾರ್: `ನೀವು ತುಂಬಾ ದಪ್ಪಗಿದ್ದೀರಾ (ಯುವರ್ ಟೂ ಫ್ಯಾಟ್)’ ಎಂದು ಸ್ಥೂಲಕಾಯದ ಮಹಿಳೆಯೊಬ್ಬರಿಗೆ (Brazil Women) ಬೋರ್ಡಿಂಗ್ ನೀಡಲು ನಿರಾಕರಿಸಿದ ಕತಾರ್ ಏರ್‌ವೇಸ್‌ಗೆ (Qatar Airways) 3 ಲಕ್ಷ ರೂ. ದಂಡ ವಿಧಿಸಿದ ಘಟನೆ ನಡೆದಿದೆ.
View this post on Instagram
Advertisement
ಬೈರುತ್‌ನಿಂದ ದೋಹಾಗೆ ಹೊರಟಿದ್ದ 38 ವರ್ಷದ ಮಹಿಳೆಯೊಬ್ಬರು ತನ್ನನ್ನು ವಿಮಾನ ಹತ್ತಲು ಬಿಡದೆ ಸ್ಥೂಲಕಾಯವಿದ್ದ ಕಾರಣಕ್ಕೆ ಅಪಮಾನ ಎಸಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ವಿರುದ್ಧ ಸಂತ್ರಸ್ತೆ ಜುಲಿಯಾನಾ ನೆಹ್ಮಿ ನ್ಯಾಯಾಲಯದ (Brazil court) ಮೊರೆ ಹೋಗಿದ್ದರು. ಇದನ್ನೂ ಓದಿ: ಮದ್ಯ ಪ್ರಿಯರಿಗೆ 1 ಲಕ್ಷದ ಇನ್ಷೂರೆನ್ಸ್ ಸೌಲಭ್ಯ ಕಲ್ಪಿಸಿ – ಸರ್ಕಾರಕ್ಕೆ ಮದ್ಯಪಾನ ಪ್ರಿಯರ ಹೋರಾಟ ಸಂಘದ ಬೇಡಿಕೆಗಳೇನು?
Advertisement
Advertisement
ಸಂತ್ರಸ್ತ ಮಹಿಳೆ ಜೂಲಿಯಾನ ತನ್ನ ಕುಟುಂಬದೊಂದಿಗೆ ಲೆಬನಾನ್‌ನಲ್ಲಿ ಪ್ರವಾಸಕ್ಕೆ ಬಂದಿದ್ದಳು. ಏರ್ ಫ್ರಾನ್ಸ್ ಮೂಲಕ ವಿದೇಶಕ್ಕೆ ಬಂದಿದ್ದಳು. ಪುನಃ ಬ್ರೆಜಿಲ್‌ಗೆ ಹಿಂದಿರುಗಲು ಮುಂದಾದಾಗ ಕತಾರ್ ಏರ್‌ವೇಸ್ ಸಿಬ್ಬಂದಿ, ʻನೀವು ತುಂಬಾ ದಪ್ಪಗಿದ್ದೀರಾʼ ಎಂದು ತಡೆದಿದ್ದಾರೆ. ಅಲ್ಲದೇ ತಾನು ಟಿಕೆಟ್‌ಗಾಗಿ ಪಾವತಿಸಿದ್ದ 1 ಸಾವಿರ ಡಾಲರ್ (82 ಸಾವಿರ ರೂಪಾಯಿ) ಹಣವನ್ನೂ ಮರುಪಾವತಿಸಲು ನಿರಾಕರಿಸಿದೆ. ಬದಲಿಗೆ 3 ಸಾವಿರ ಡಾಲರ್ (2.47 ಲಕ್ಷ ರೂ.) ನೀಡಿ ಬಿಸಿನೆಸ್ ಟಿಕೆಟ್ ಖರೀದಿಸುವಂತೆ ಕೇಳಿಕೊಂಡಿದೆ. ದೊಡ್ಡ ಹಾಸನಗಳಿಗೆ ಹೊಂದಿಕೊಳ್ಳಬಹುದು ಎಂದು ಹೇಳಿತು.
Advertisement
ಇದರಿಂದ ಅಸಮಾಧಾನಗೊಂಡ ಜುಲಿಯಾನಾ, ವಿಮಾನದ ಸಿಬ್ಬಂದಿಯ ವರ್ತನೆಯಿಂದ ಮಾನಸಿಕ ಯಾತನೆಗೆ ಒಳಗಾಗಿದ್ದೇನೆ. ಸಂಸ್ಥೆ ನನ್ನ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಜುಲಿಯಾನಾಳ ದೂರನ್ನು ಪರಿಗಣಿಸಿದ ಬ್ರೆಜಿಲ್ ಕೋರ್ಟ್ ನ್ಯಾಯಮೂರ್ತಿ ರೆನಾಟ ಮಾರ್ಟಿನ್ಸ್ ಡಿ ಕರ್ವಾಲ್ಹೊ, ವಾರಕ್ಕೊಂದು ಅಥವಾ ಎರಡರಂತೆ ಮಾನಸಿಕ ಪುನಶ್ಚೇತನ ಚಿಕಿತ್ಸೆಯನ್ನು ಕೊಡಿಸುವಂತೆ ವಿಮಾನಯಾನ ಸಂಸ್ಥೆಗೆ ಆದೇಶಿಸಿದೆ.
ಪ್ರಸ್ತುತ ಮಹಿಳೆ ಪಡೆಯುತ್ತಿದ್ದ ಚಿಕಿತ್ಸೆ ದುಬಾರಿಯಾಗಿದೆ. ಪ್ರತಿ ಚಿಕಿತ್ಸೆಗೆ 400 ರಿಯಾಸ್ (6,389 ರೂ.) ತಗುಲುತ್ತದೆ. ಹಾಗೆಯೇ ಒಂದು ವರ್ಷದಲ್ಲಿ 19,200 ರಿಯಾಸ್ (3.07 ಲಕ್ಷ) ವೆಚ್ಚ ತಗುಲಲಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಭಾಗಿ