ಬೆಂಗಳೂರು: ಸೋಮವಾರ ನಿಧನರಾದ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆ ಇವತ್ತು ನಡೆಯಲಿದೆ. ರಾತ್ರಿ 10 ಗಂಟೆಗೆ ಕಲ್ಬುರ್ಗಿಯ ಆನಂದ ನಗರದಲ್ಲಿರುವ ಖಲಂದರ್ ಖಾನ್ ಕಬರಸ್ಥಾನದಲ್ಲಿ ಮುಸ್ಲಿಂ ವಿಧಿವಿಧಾನದಂತೆ ದಫನ ಮಾಡಲಾಗುತ್ತದೆ. ಇವತ್ತು ಬೆಳಗ್ಗೆ 7 ರಿಂದ 9 ಗಂಟೆವರೆಗೆ ಖಮರುಲ್ ಇಸ್ಲಾಂರ ಪಾರ್ಥಿವ ಶರೀರವನ್ನು ಸ್ವಗೃಹದಲ್ಲಿ ಇಡಲಾಗುತ್ತದೆ. ನಂತರ ತೆರದ ವಾಹನದಲ್ಲಿ ಕೆಸಿಟಿ ಮೈದಾನದವರೆಗೆ ಮೆರವಣಿಗೆಯಲ್ಲಿ ತರಲಾಗುತ್ತದೆ.
Advertisement
ಮಧ್ಯಾಹ್ನ 1 ಗಂಟೆಯಿಂದ 5 ಗಂಟೆವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದಾದ ಬಳಿಕ ಕೆಸಿಟಿ ಮೈದಾನದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಖಲಂದರ್ ಖಾನ್ ಕಬರಸ್ಥಾನಕ್ಕೆ ತರಲಾಗುತ್ತದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Advertisement
ಇನ್ನು ಖಮರುಲ್ ಇಸ್ಲಾಂ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಕಲಬುರಗಿಗೆ ಸಾಗಿಸಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಕುಟುಂಬದವರು ಸಿಎಂ ಬಳಿ ಅಂಗಾಲಾಚಿದ್ದರು. ಆದರೆ ವಿಶೇಷ ಫ್ಲೈಟ್ ಇಲ್ಲ ಅಂತ ಸರ್ಕಾರ ರಸ್ತೆ ಮಾರ್ಗವಾಗಿಯೇ ಪಾರ್ಥಿವ ಶರೀರವನ್ನು ಕಲಬುರಗಿಗೆ ಸಾಗಿಸಿದೆ. ಖಮರುಲ್ ಪತ್ನಿ ಕೂಡ ಅಂಬುಲೆನ್ಸ್ ನಲ್ಲಿ 700 ಕಿ.ಮೀಟರ್ ಪ್ರಯಾಣ ಮಾಡಿದ್ದಾರೆ. ಹೀಗಾಗಿ ಪ್ರಭಾವಿ ಮುಸ್ಲಿಂ ನಾಯಕರಾಗಿದ್ದ ಖಮರುಲ್ ಇಸ್ಲಾಂರಿಗೆ ಸಿಎಂ ಅಗೌರವ ತೋರಿಸಿದ್ದಾರೆ ಅಂತ ಬೆಂಬಲಿಗರು ಹಾಗೂ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Advertisement
https://www.youtube.com/watch?v=FZhrzJnGyic
Advertisement
https://www.youtube.com/watch?v=RTg2swEv94U