ಲಕ್ನೋ: ಲೈವ್ ಶೋ ಮಾಡುತ್ತಿದ್ದ ಸಂದರ್ಭದಲ್ಲಿ ಹೆಬ್ಬಾವೊಂದು ಹಾವಾಡಿಗನ ಕುತ್ತಿಗೆಯನ್ನು ಬಿಗಿಯಾಗಿ ಸುತ್ತಿಕೊಂಡಿದ್ದು, ಘಟನೆಯಿಂದ ಆತ ಅಪಾಯದಿಂದ ಪಾರಾದ ಭಯಾನಕ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಮಾರ್ಚ್ 20ರಂದು ಮೌ ಎಂಬಲ್ಲಿ ನಡೆದಿದೆ. ಹಾವಾಡಿಗ ಹೆಬ್ಬಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕರಿಗೆ ಮನರಂಜನೆ ನೀಡುತ್ತಿದ್ದನು.
ಹೆಬ್ಬಾವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಜನ ಅಚ್ಚರಿ ಪಡುವ ರೀತಿಯಲ್ಲಿ ಸೋ ಮಾಡುತ್ತಿದ್ದನು. ಇದೇ ವೇಳೆ ಹಾವು ಇದ್ದಕ್ಕಿದ್ದಂತೆಯೇ ಆತನ ಕುತ್ತಿಗೆಯನ್ನು ಸುತ್ತಿಕೊಂಡಿದೆ. ಬಿಗಿಯಾಗಿ ಉಸಿರುಗಟ್ಟುವ ರೀತಿಯಲ್ಲಿ ಸುತ್ತಿಕೊಳ್ಳುತ್ತಿರುವುದು ಅರಿವಾದಾಗ ಹಾವಾಡಿದ ಅದನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದ್ರೆ ಹಾವು ಮತ್ತಷ್ಟು ಬಿಗಿಯಾಗಿ ಸುತ್ತಿಕೊಂಡಿದ್ದರಿಂದ ಬಿಡಿಸಿಕೊಳ್ಳುವಲ್ಲಿ ವಿಫಲವಾಗಿ, ಸುಸ್ತಾಗಿ ಸಾರ್ವಜನಿಕರ ಎದುರೇ ಕುಸಿದು ಬಿದ್ದಿದ್ದಾನೆ.
ಮೊದಲು ಇವನೇನೋ ನಾಟಕವಾಡುತ್ತಿದ್ದಾನೆ ಅಂತ ಭಾವಿಸಿದ ಸಾರ್ವಜನಿಕರಲ್ಲಿ ಓರ್ವ ಹಾವಾಡಿಗನ ಕಷ್ಟವನ್ನು ಅರಿತು ಕೂಡಲೇ ಆತನ ಸಹಾಯಕ್ಕೆ ಧಾವಿಸಿದ್ದಾನೆ. ಹೆಬ್ಬಾವಿನಿಂದ ಹಾವಾಡಿಗನ್ನು ಬಿಡಿಸಿದ ಮೂವರು ಕೂಡಲೇ ಆತನನ್ನು ನಂತರ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಯ ಬಳಿಕ ಅಲ್ಲಿನ ವೈದ್ಯರು ಯುನಿಟ್ ಸ್ಪೆಷಲಿಸ್ಟ್ ಬಳಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಸದ್ಯ ಹಾವಾಡಿಗ ಚೇತರಿಸಿಕೊಂಡಿದ್ದಾನೋ ಅಥವಾ ಇಲ್ಲವೋ ಎಂಬುದಾಗಿ ತಿಳಿದುಬಂದಿಲ್ಲ ಮಾಧ್ಯಮಗಳು ವರದಿ ಮಾಡಿವೆ.
https://www.youtube.com/watch?v=W7c7uwrel0k