ಕಾರವಾರ: ಆಹಾರ ಅರಸಿ ಏಳು ಅಡಿ ಉದ್ದದ ಹೆಬ್ಬಾವೊಂದು ದಾಂಡೇಲಿಯ ಮಾರುತಿ ನಗರದ ಮನೆಗೆ ಬಂದಿದ್ದು, ಮನೆಯ ಬಳಿ ಹೆಗ್ಗಣವನ್ನು ನುಂಗಿ ಜನರಲ್ಲಿ ಭಯ ಮೂಡಿಸಿತ್ತು.
ಈ ಕುರಿತು ಮನೆಯ ಮಾಲೀಕರು ಉರಗ ತಜ್ಞ ದಾಂಡೇಲಿಯ ರಜಾಕ್‍ರವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಹೆಗ್ಗಣ ನುಂಗಿದ್ದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟರು. ಈ ವೇಳೆ ಬರೋಬ್ಬರಿ ಎರಡು ಅಡಿ ಉದ್ದದ ಬೃಹತ್ ಹೆಗ್ಗಣವನ್ನು ನುಂಗಿದ್ದ ಹೆಬ್ಬಾವು ಅದನ್ನು ಕಕ್ಕಿದ್ದು ಎಲ್ಲರನ್ನೂ ಭಯಭೀತರನ್ನಾಗಿಸಿತ್ತು.
Advertisement
Advertisement
ದಾಂಡೇಲಿ ಭಾಗದಲ್ಲಿ ಸುತ್ತಮುತ್ತ ಅರಣ್ಯ ಪ್ರದೇಶವಿದ್ದು, ಈ ಭಾಗದಲ್ಲಿ ಹಾವುಗಳ ಉಪಟಳ ಹೆಚ್ಚು. ಕೆಲವೊಮ್ಮೆ ನಗರಕ್ಕೆ ಕಾಡುಪ್ರಾಣಿಗಳು ಆಹಾರ ಅರಸಿ ಬಂದರೆ, ಕೆಲವೊಮ್ಮೆ ಹೆಬ್ಬಾವುಗಳು ನಗರ ಪ್ರದೇಶಕ್ಕೆ ಆಹಾರ ಅರಸಿ ಬರುತ್ತವೆ.
Advertisement
ಹಲವರು ಈ ಹಾವುಗಳನ್ನು ಭಯದಿಂದಲೇ ಕೊಲ್ಲುವ ಪ್ರಕರಣ ಕೂಡ ಹೆಚ್ಚಾಗಿ ನಡೆಯುತ್ತದೆ. ಆದರೆ ಉರಗ ತಜ್ಞ ರಜಾಕ್‍ರವರು ಹೀಗೆ ನಾಡಿಗೆ ಬಂದ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಿದ್ದು, ಸಾವಿರಕ್ಕೂ ಹೆಚ್ಚು ವಿಷಕಾರಿ, ವಿಷ ರಹಿತ ಹಾವುಗಳನ್ನು ಈ ಭಾಗದಲ್ಲಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.