ಕ್ಯಾನ್ಬೆರಾ: ಟಿವಿ ಆ್ಯಂಟೆನಾ ಸುತ್ತಲೂ ಸುತ್ತುವರಿದಿದ್ದ ಬೃಹತ್ ಗಾತ್ರದ ಹೆಬ್ಬಾವೊಂದು ಪಕ್ಷಿಯನ್ನು ನುಂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕ್ಯಾಥಿ ಗಾಲ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ಘಟನೆ ಬುಧವಾರ ಆಸ್ಟ್ರೇಲಿಯಾದಲ್ಲಿ ಕಿಂಗ್ ಸ್ಕ್ಲಿಫ್ ನಲ್ಲಿ ನಡೆದಿದ್ದು, ಕ್ಯಾಥಿ ಗಾಲ್ ತಮ್ಮ ಮನೆಯ ಛಾವಣಿಯ ಮೇಲೆ ನಿಂತು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಹೆಬ್ಬಾವು ಪಕ್ಷಿ ತಿನ್ನುತ್ತಿರುವ ವಿಡಿಯೋವನ್ನು ಕಿಂಗ್ ಸ್ಕ್ಲಿಫ್ ಹ್ಯಾಪನಿಂಗ್ಸ್ ಎಂಬ ಫೇಸ್‍ಬುಕ್ ಗುಂಪಿನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
Advertisement
ನಾನು ಮನೆ ಮೇಲೆ ಹೋಗಿ ನೋಡಿದಾಗ ಹೆಬ್ಬಾವು ನೇತಾಡುತ್ತಿರುವುದನ್ನು ಕಂಡು ಗಾಬರಿಯಾದೆ. ಹೆಬ್ಬಾವು ಆ ಪಕ್ಷಿಯನ್ನು ತಿನ್ನಲು ಒಂದೂವರೆ ಗಂಟೆಯಷ್ಟು ಸಮಯ ತೆಗೆದುಕೊಂಡಿದೆ ಎಂದು ಕ್ಯಾಥಿ ಗಾಲ್ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ವಿಡಿಯೋವನ್ನು ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು, ಅಪಾರ ಜನರು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
Advertisement
ವಿಡಿಯೋದಲ್ಲಿ ಏನಿದೆ?
ಮನೆಯ ಸಮೀಪದ ಟಿವಿ ಆ್ಯಂಟೆನಾದ ಮೇಲೇರಿದ ಬೃಹತ್ ಗಾತ್ರದ ಹೆಬ್ಬಾವು, ಪಕ್ಷಿಯನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡಿದೆ. ಅಲ್ಲದೆ ತಿನ್ನಲು ಪ್ರಯತ್ನ ಪಡುತ್ತಿದೆ. ಈ ವೇಳೆ ಹೆಬ್ಬಾವು ಆ್ಯಂಟೆನಾದಿಂದ ಕೆಳಗೆ ನೇತಾಡಲು ಆರಂಭಿಸುತ್ತಿದೆ. ಹೀಗೆ ಕಷ್ಟಪಟ್ಟು ನೇತಾಡುತ್ತಿದ್ದರೂ ಹೆಬ್ಬಾವು ಮಾತ್ರ ಪಕ್ಷಿಯನ್ನು ಕೆಳಗೆ ಹಾಕದೇ ಹೇಗಾದ್ರೂ ಮಾಡಿ ತಿನ್ನಲೇ ಬೇಕೆಂದು ಹಠಹಿಡಿದಿದೆ. ಪಕ್ಷಿಯ ಕುತ್ತಿಗೆಯನ್ನೇ ಹೆಬ್ಬಾವು ಕಚ್ಚಿದೆ. ಹೀಗಾಗಿ ಪಕ್ಷಿ ಸತ್ತಿದೆ ಎಂದನಿಸುತ್ತಿದೆ.
Advertisement
ಒಟ್ಟಿನಲ್ಲಿ ಈ ಕಡೆ ಕೆಳಗೆ ಬೀಳಲು ಸಾಧ್ಯವಾಗದೆ ಕಚ್ಚಿಕೊಂಡಿರುವ ಪಕ್ಷಿಯನ್ನು ಮೇಲಕ್ಕೆ ಎತ್ತಲೂ ಆಗದೆ ಹೆಬ್ಬಾವು ಪರದಾಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಗಮನಿಸಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv