ಬೆಳಗಾವಿ: ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕುತ್ತಾರೆ. ಈಗ ಇವರಿಗೆ ಹಿಜಬ್ ತಗೆಯೋಕಾಗಲ್ಲ ಎಂದು ವಿಜಯ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮೆಡಿಕಲ್ ಕಾಲೇಜಿನಲ್ಲಿ ಹಿಜಬ್ ವಿವಾದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ರೀಲ್ಸ್ ಮಾಡಬೇಕಾದರೆ ಹಿಜಬ್ ಬಗ್ಗೆ ಗೊತ್ತಾಗುವುದಿಲ್ಲವೇ. ಕಾಲೇಜಿನಲ್ಲಿ ಹಿಜಬ್ ಬುರ್ಕಾ ತೆಗೆಯಲು ಪ್ರತ್ಯೇಕ ಕೊಠಡಿ ಕೊಡುತ್ತೇವೆ ಅಂದರೂ ಕೇಳುತ್ತಿಲ್ಲ ಎಂದು ಆರೋಪಿಸಿದರು.
Advertisement
Advertisement
ಇದರ ಜೊತೆಗೆ ಬಿಂದಿ, ಕುಂಕುಮ, ಬಳೆ ತಗೆಯಲು ಕೆಲವೆಡೆ ಹಿಜಬ್ ಧರಿಸಿದವರ ಆಗ್ರಹದ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು, ಅದು ನಮ್ಮ ಸಂಪ್ರದಾಯ ತೆಗೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾಲೇಜಿನಲ್ಲಿ ಹಿಜಬ್ ವಿವಾದ ಹಿನ್ನೆಲೆ ಪ್ರತ್ಯೇಕ ಕೊಠಡಿಯಲ್ಲಿ ಕುಳಿತು ತರಗತಿಗೆ ಹಾಜರಾಗದೇ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಪಸ್ ಮನೆಗೆ ತೆರಳಿದ್ದಾರೆ. ಇದನ್ನೂ ಓದಿ: ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ
Advertisement
ನಗರದ ಸದಾಶಿವ ನಗರದಲ್ಲಿರುವ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಬ್‍ಗೆ ಪಟ್ಟುಹಿಡಿದಿದ್ದರು. ಈ ವೇಳೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಎಸಿ ಕರಿಲಿಂಗನ್ನವರ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರ ಮನವೊಲಿಕೆ ಮಾಡಿದ್ದಾರೆ. ಆದರೆ ಹಿಜಬ್ ಹಾಕಿದ್ದ ವಿದ್ಯಾರ್ಥಿಗಳು ಅವರ ಮಾತಿಗೆ ಕ್ಯಾರೆ ಅನ್ನಲಿಲ್ಲ. ಇದರ ಪರಿಣಾಮ ತರಗತಿಗಳಿಗೆ ಕುಳಿತುಕೊಳ್ಳದೇ ವಿದ್ಯಾರ್ಥಿಗಳು ವಾಪಸ್ ತೆರಳಿದ್ದಾರೆ. ಬಳಿಕ ಮಾತನಾಡಿದ ಹಿಜಬ್ ಧರಿಸಿದ ವಿದ್ಯಾರ್ಥಿನಿ ನಾವು ಹಿಜಾಬ್ ತೆಗೆಯಲ್ಲ ಅಂದಿದ್ದೇವೆ. ಹೀಗಾಗಿ ತರಗತಿಗೆ ಹಾಜರಾಗಲು ಅವಕಾಶ ನೀಡಲಿಲ್ಲ ಎಂದರು.
Advertisement
ನಾವು ಯಾವುದೇ ಕಾರಣಕ್ಕೂ ಹಿಜಬ್ ಹಾಕಿಕೊಳ್ಳದೇ ತರಗತಿಗಳಿಗೆ ಹೋಗುವುದಿಲ್ಲ. ಆದರೆ ಹಿಜಬ್ ಧರಿಸಿದ್ದಕ್ಕೆ ನಮಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿದರು ನಮ್ಮಿಂದ ತೊಂದರೆ ಆಗುತ್ತಿದೆ ಅಂತಾ ಕೆಲ ವಿದ್ಯಾರ್ಥಿನಿಯರು ಹೇಳಿದರು. ಅದು ಹೇಗೆ? ನಾವು ತರಗತಿಗೆ ಹಾಜರಾಗಿಲ್ಲ. ಆದರೆ ಅವರು ತರಗತಿಗೆ ಹಾಜರಾಗಿದ್ದಾರೆ ಎಂದು ವಿದ್ಯಾರ್ಥಿನಿಯರು ಹೇಳಿದರು. ಇದನ್ನೂ ಓದಿ: ರಾಷ್ಟ್ರಧ್ವಜ ಬದಲಿಸುವುದು ಕಾಂಗ್ರೆಸ್ ಅಜೆಂಡಾ, ಸಾಕ್ಷಿ ಇಲ್ಲಿದೆ ನೋಡಿ: ಬಿಜೆಪಿ
ಇದಕ್ಕೆ ಇತರೆ ವಿದ್ಯಾರ್ಥಿಗಳು ಹಿಜಬ್ ಹಾಕಿಕೊಂಡು ಬಂದಿರುವ ವಿದ್ಯಾರ್ಥಿನಿಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇವರಿಂದಾಗಿ ನಮಗೆ ತರಗತಿ ತಗೆದುಕೊಳ್ಳುತ್ತಿಲ್ಲ. ನಮ್ಮ ಶಿಕ್ಷಣ ಹಾಳಾಗುತ್ತಿದೆ. ಅವರಿಗೆ ಶಿಕ್ಷಣ ಮುಖ್ಯವಲ್ಲ. ಅವರಿಂದ ನಮಗೆ ತೊಂದರೆ ಆಗುತ್ತಿದೆ. ಶಿಕ್ಷಣ ಮುಖ್ಯ ಆಗಿದ್ದರೆ ಹಿಜಬ್ ತಗೆದು ಬರುತ್ತಿದ್ದರು. ಅವರಿಂದ ನಮ್ಮ ಶಿಕ್ಷಣ ಹಾಳಾಗುತ್ತಿದೆ ಎಂದು ಗುಡುಗಿದರು.