ಹಾಸನ: ರೈತರ ಪರಿಹಾರ ಹಣ ಪಾವತಿಸದ ಕಾರಣ ಹೊಳೆನರಸೀಪುರದ ಕೋರ್ಟ್ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ.
ನಗರದ ಎನ್.ಆರ್ ವೃತ್ತದ ಬಳಿ ಇರುವ ಲೋಕೋಪಯೋಗಿ ಇಲಾಖೆಯನ್ನು ಜಪ್ತಿ ಮಾಡಲಾಗಿದೆ. ಸ್ವತಃ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನವರ ಇಲಾಖೆಗೆ ಸೇರಿದ ಕಚೇರಿಯಾಗಿದ್ದು, ಕಚೇರಿಯ ಹೊರಗಡೆ ಇಲಾಖೆ ಸಿಬ್ಬಂದಿ ನಿಂತಿದ್ದಾರೆ.
Advertisement
Advertisement
ಹೊಳೆನರಸೀಪುರ ತಾಲೂಕಿನ ಮಂಗಳಪುರ ನಿವಾಸಿ ರಾಮಸ್ವಾಮಿ ಹಾಗೂ ತಿರುಮಲಪುರದ ನಂಜೇಗೌಡ ಎಂಬ ರೈತರು ಶಾಲೆ ನಿರ್ಮಾಣಕ್ಕೆ ಭೂಮಿ ನೀಡಿದ್ದರು. ಮೂರು ವರ್ಷದಿಂದ ಪರಿಹಾರ ನೀಡಿರಲಿಲ್ಲ. ಇದರಿಂದ ಇಬ್ಬರು ರೈತರು ಹೊಳೆನರಸೀಪುರ ಜೆಎಂಎಫ್‍ಎಫ್ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಪ್ತಿ ಮಾಡುವಂತೆ ಆದೇಶಿಸಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.
Advertisement
Advertisement
ಪಿಡಬ್ಲ್ಯೂಡಿ ಇಲಾಖೆ ಶಿಕ್ಷಣ ಇಲಾಖೆ ಸಂಬಂಧ ಪಟ್ಟ ಸುಮಾರು 87 ಲಕ್ಷ ಹಣ ಉಳಿಸಿಕೊಂಡಿತ್ತು. ಸದ್ಯಕ್ಕೆ ಕೋರ್ಟ್ ಆದೇಶದಂತೆ ರೈತರು ವಕೀಲರ ಜೊತೆ ಬಂದು ಸುಮಾರು 20 ಚೇರ್, ಇನ್ನಿತರ ಪೀಠೋಪಕರಣಗಳನ್ನು ಕಚೇರಿಯಿಂದ ಜಪ್ತಿ ಮಾಡಿದ್ದಾರೆ. ಆದರೆ ಪಿಡಬ್ಲ್ಯೂಡಿ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಭೆಗೆಂದು ಬೆಂಗಳೂರಿಗೆ ತೆರಳಿದ್ದಾರೆ. ಸದ್ಯಕ್ಕೆ ಅಲ್ಲಿರುವ ಅಧಿಕಾರಿಗಳು ವಕೀಲರ ಜೊತೆ ಮಾತನಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv