ಬೆಂಗಳೂರು: ಏರೋ ಇಂಡಿಯಾ 2019 ಪ್ರಯುಕ್ತ ಇಂದು ಶನಿವಾರ ನಡೆದ ಪ್ರದರ್ಶನದಲ್ಲಿ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಅವರು ತೇಜಸ್ ನಲ್ಲಿ ಹಾರಾಟ ನಡೆಸಿದರು. ಈ ಮೂಲಕ ಮೇಡ್ ಇನ್ ಇಂಡಿಯಾ ಯೋಜನೆ ಮೂಲಕ ನಿರ್ಮಿಸಲಾಗಿದ್ದ ತೇಜಸ್ ವಿಮಾನಕ್ಕೆ ಮಹಿಳಾ ಕೋ ಪೈಲಟ್ ಎಂಬ ಹೆಗ್ಗಳಿಕೆ ಪಡೆದರು.
ಸುಮಾರು 25 ನಿಮಿಷ ಆಗಸದಲ್ಲಿ ವಿಮಾನದಲ್ಲಿ ಸುತ್ತಾಡಿದ ಸಿಂಧು ರೋಮಾಂಚನಗೊಂಡಿದ್ದರು. ವಿಮಾನ ಹಾರಾಟ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಂಧು, ತೇಜಸ್ ನಿಜವಾದ ಹೀರೋ ಆಗಿದ್ದು, ಹಾರಾಟ ನಡೆಸಲು ನನಗೆ ಅವಕಾಶ ಲಭಿಸಿದ್ದು ಸೌಭಾಗ್ಯ ಎಂದು ಹೇಳಿದ್ದಾರೆ.
Indian badminton star @Pvsindhu1 became first woman to fly DRDO developed Light Combat Aircraft (LCA) Tejas @AeroIndiashow 2019. Today DRDO is celebrating Women Achievers in Aerospace. @DefenceMinIndia @PIB_India @SpokespersonMoD #AeroIndiaWomenDay #AeroIndia2019 pic.twitter.com/AzTwy4YBy8
— DRDO (@DRDO_India) February 23, 2019
ಕ್ರೀಡಾಪಟುಗಳಲ್ಲಿ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದ ಗೌರಕ್ಕೆ ಸಿಂಧು ಪಾತ್ರರಾಗಿದ್ದು, ಇದಕ್ಕೆ ಅವಕಾಶ ನೀಡಿದ ಡಿಆರ್‍ಡಿಒ ಗೆ ಋಣಿಯಾಗಿದ್ದೇನೆ ಎಂದು ಸಿಂಧು ಹೇಳಿದ್ದಾರೆ. ವಿಂಗ್ ಕಮಾಂಡರ್ ಸಿದ್ದಾರ್ಥ್ ಅವರೊಂದಿಗೆ ಸಿಂಧು ವಿಮಾನ ಹಾರಾಟ ನಡೆಸಿದ್ದರು.
ಮೇಡ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ರಾಜ್ಯ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ತೇಜಸ್ ವಿಮಾನವನ್ನು ನಿರ್ಮಿಸಿದೆ. ತೇಜಸ್ ಮಲ್ಟಿರೋಲ್ ಲೈಟ್ ಫೈಟರ್ ಜೇಟ್ ಆಗಿದ್ದು, ಪ್ರಥಮ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಎಂಬ ಹೆಗ್ಗಳಿಕೆಯನ್ನು ತೇಜಸ್ ಪಡೆದಿದೆ. ಏರ್ ಶೋ ಭಾಗವಾಗಿ ಭಾರತ ಭೂಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಕೂಡ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದ್ದರು.
@Pvsindhu1 also met the other women @IAF_MCC officers. The women achievers together 🙂 pic.twitter.com/7qe0oInCzz
— Mayank ???????? (@scribesoldier) February 23, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv