ನವದೆಹಲಿ: 2 ಬಾರಿ ಒಲಿಂಪಿಕ್ಸ್ ಪದಕವನ್ನು ಗೆದ್ದು ಹೆಮ್ಮೆಗೆ ಪಾತ್ರವಾದ ಪಿ.ವಿ ಸಿಂಧು ಅವರಿಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್( ಬಿಡಬ್ಲ್ಯುಎಫ್) ವಿಶೇಷ ಗೌರವ ನೀಡಿದೆ.
Advertisement
ಬಿಡಬ್ಲ್ಯುಎಫ್ ಅಥ್ಲೀಟ್ ಕಮಿಷನ್‍ನ ಸದಸ್ಯೆಯನ್ನಾಗಿ ನೇಮಿಸಿದೆ. ಬಿಡಬ್ಲ್ಯುಎಫ್ ಒಟ್ಟು 6 ಮಂದಿಗೆ ಈ ಗೌರವ ಸಲ್ಲಿಸಿದೆ. ಮಾಜಿ ವಿಶ್ವ ಚಾಂಪಿಯನ್, 26 ವರ್ಷದ ಸಿಂಧು ಸೇರಿ ಆರು ಮಂದಿ ಆಯೋಗಕ್ಕೆ ನೇಮಕವಾಗಿದ್ದು, 2025ರವರೆಗೆ ಇವರ ಅಧಿಕಾರಾವಧಿ ಇರಲಿದೆ. 2021-2025ರ ಅವಧಿಗೆ ಅಥ್ಲೀಟ್‍ಗಳ ಆಯೋಗಕ್ಕೆ ಐರಿಸ್ ವಾಂಗ್ (ಅಮೆರಿಕ), ರಾಬಿನ್ ಟೇಬೆಲಿಂಗ್ (ನೆದಲೆರ್ಂಡ್ಸ್), ಗ್ರೇಸಿಯಾ ಪೋಲಿ (ಇಂಡೊನೇಷ್ಯಾ), ಕಿಮ್ ಸೊಯೊಂಗ್ (ಕೊರಿಯಾ), ಪಿ.ವಿ. ಸಿಂಧು (ಭಾರತ), ಜೆಂಗ್ ಸಿ ವೇ (ಚೀನಾ) ಅವರನ್ನು ನೇಮಿಸಲಾಗಿದೆ ಎಂದು ಬಿಡಬ್ಲ್ಯುಎಫ್ ಹೇಳಿದೆ. ಇದನ್ನೂ ಓದಿ: ಹಿಂದಿಯನ್ನು ವಿರೋಧಿಸುವವರು, ಉರ್ದುವನ್ನು ವಿರೋಧಿಸಲ್ಲ ಯಾಕೆ: ಯತ್ನಾಳ್
Advertisement
Advertisement
ಈ ಆರು ಸದಸ್ಯರಲ್ಲಿ ಇಬ್ಬರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಶೀಘ್ರ ಆಯ್ಕೆ ಮಾಡಲಾಗುತ್ತದೆ ಎಂದು ಫೆಡರೇಷನ್ ತಿಳಿಸಿದೆ. 2016ರ ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಈ ವರ್ಷದ ಆರಂಭದಲ್ಲಿ ನಡೆದ ಟೋಕಿಯೊ ಕೂಟದಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪಿ. ವಿ ಸಿಂಧು ಅವರು ಇದು ಹೆಮ್ಮೆಯ ಸಂಗತಿಯಾಗಿದೆ. ಬಿಡಬ್ಲ್ಯುಎಫ್ ಕರ್ತವ್ಯವನ್ನು ನಿಭಾಯಿಸಬಲ್ಲೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ