ಬಾಸೆಲ್: ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಥಾಯ್ಲೆಂಡ್‍ನ ಬುಸಾನನ್ ಒಂಗ್‍ಬಮ್ರುಂಗ್‍ಫಾನ್ ವಿರುದ್ಧ ಫೈನಲ್ ಪಂದ್ಯ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
Advertisement
ತೀವ್ರ ಕುತೂಹಲ ಮೂಡಿಸಿದ್ದ ಫೈನಲ್ ಪಂದ್ಯದಲ್ಲಿ ಬುಸಾನನ್ ಒಂಗ್‍ಬಮ್ರುಂಗ್‍ಫಾನ್ ವಿರುದ್ಧ ಸಿಂಧು 21-16, 21-8 ನೇರ ಸೆಟ್‌ನಿಂದ ಫೈನಲ್ ಪಂದ್ಯವನ್ನು ಗೆದ್ದು ಬೀಗಿದರು. ಇದನ್ನೂ ಓದಿ: ಕೊನೆಯ ಓವರ್ ಥ್ರಿಲ್ಲರ್ – ಆ ಒಂದು ‘ನೋ ಬಾಲ್’ನಿಂದ ಭಾರತ ತಂಡ ಮನೆಗೆ
Advertisement
ಪಂದ್ಯ 49 ನಿಮಿಷಗಳ ವರೆಗೆ ಸಾಗಿತ್ತು. ಈ ಮೊದಲು ಬುಸಾನನ್ ಮತ್ತು ಸಿಂಧು 16 ಬಾರಿ ಮುಖಾಮುಖಿಯಾಗಿದ್ದರು. ಇದರಲ್ಲಿ ಸಿಂಧು 16 ಬಾರಿ ಜಯ ಗಳಿಸಿದ್ದರೆ, ಬುಸಾನನ್ ಒಂದು ಬಾರಿ ಮೇಲುಗೈ ಸಾಧಿಸಿದ್ದರು. ಇದೀಗ ಸ್ವಿಸ್ ಓಪನ್ ಫೈನಲ್‍ನಲ್ಲೂ ಸಿಂಧು, ಬುಸಾನನ್ ವಿರುದ್ಧ ಮೇಲುಗೈ ಸಾಧಿಸಿ ಪ್ರಶಸ್ತಿ ಜಯಿಸಿದ್ದಾರೆ. ಇದು ಸಿಂಧುಗೆ ಸ್ವಿಸ್ ಓಪನ್‍ನಲ್ಲಿ ಸತತ 2ನೇ ಫೈನಲ್ ಆಗಿತ್ತು. ಕಳೆದ ಬಾರಿ ಅವರು ಫೈನಲ್‍ನಲ್ಲಿ ಸ್ಪೇನ್‍ನ ಕ್ಯಾರೊಲಿನಾ ಮರೀನ್ ವಿರುದ್ಧ ಸೋತಿದ್ದರು. ಇದನ್ನೂ ಓದಿ: 2023 ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ
Advertisement
All hail the champion! ????
2️⃣nd super 300 title for @Pvsindhu1 this year ????#SwissOpen2022#IndiaontheRise#Badminton pic.twitter.com/EpCqmr0JeS
— BAI Media (@BAI_Media) March 27, 2022
Advertisement
ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ನ ರೋಚಕ ಸೆಮಿಫೈನಲ್‍ನಲ್ಲಿ ಸಿಂಧು, ಥಾಯ್ಲೆಂಡ್‍ನ ಸುಪನಿದಾ ಕಟೆಥೊಂಗ್ ವಿರುದ್ಧ 21-18, 15-21, 21-19 ಗೇಮ್‍ಗಳಲ್ಲಿ ಗೆಲುವು ಸಾಧಿಸಿದರು.