ಉಡುಪಿ: ಶ್ರೀಕೃಷ್ಣ ಮಠದ (Krishna Mutt) ಪೂಜಾಧಿಕಾರ ಕೃಷ್ಣಾಪುರ ಮಠದಿಂದ ಪುತ್ತಿಗೆ ಮಠಕ್ಕೆ (Puttige Mutt) ಹಸ್ತಾಂತರ ಆಗಿದೆ. ಪರ್ಯಾಯ ಮೆರವಣಿಗೆ ಅದ್ದೂರಿಯಾಗಿ ಉಡುಪಿಯ ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ನೂರಕ್ಕೂ ಹೆಚ್ಚು ಭಜನಾ ತಂಡ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾದವು. ಜೋಡುಕಟ್ಟೆಯಿಂದ ನಡೆದ ಪರ್ಯಾಯ ಮೆರವಣಿಗೆ ಸುಮಾರು 3 ಗಂಟೆಗಳ ಕಾಲ ನಡೆಯಿತು. ಉಡುಪಿಯ ಅಷ್ಟಮಠಾಧೀಶರ ಪೈಕಿ ಏಳು ಮಠಗಳು ಪರ್ಯಾಯ ಮೆರವಣಿಗೆಗೆ ಗೈರಾಗಿದ್ದರು. ವಿದೇಶ ಪ್ರಯಾಣ ಮಾಡಿರುವ ಕಾರಣ ನಿಯಮ ಮೀರಿದ್ದಕ್ಕೆ ಉಳಿದ ಮಠಗಳು ಈ ನಿರ್ಧಾರ ಮಾಡಿದವು. ಇದನ್ನೂ ಓದಿ: ಜ.19ರಂದು ಬೆಂಗಳೂರಿಗೆ ಮೋದಿ – ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧ
Advertisement
Advertisement
ಪುತ್ತಿಗೆ ಸುಗುಣೇಂದ್ರ ತೀರ್ಥಶ್ರೀಪಾದರು, ಸುಶ್ರೀಂದ್ರ ತೀರ್ಥ ಸ್ವಾಮೀಜಿ ವಾಹನದ ಮೇಲಿರಿಸಿದ ಪಲ್ಲಕ್ಕಿಯಲ್ಲಿ ಏರಿ ಮಠಕ್ಕೆ ಸಾಂಪ್ರದಾಯಿಕವಾಗಿ ಬಂದು ಅಧಿಕಾರ ಸ್ವೀಕರಿಸಿದರು.
Advertisement
Advertisement
ಪರ್ಯಾಯ ಅಧಿಕಾರ ಹಸ್ತಾಂತರ ಮಾಡಿದ ಅದಮಾರು ಸ್ವಾಮೀಜಿ
ಪುತ್ತಿಗೆ ಶ್ರೀಗಳ ಚತುರ್ಥ ಪರ್ಯಾಯ ಉಡುಪಿಯಲ್ಲಿ ಆರಂಭವಾಗಿದೆ. ಕೃಷ್ಣಪೂಜೆಯ ಅಧಿಕಾರ ಹಸ್ತಾಂತರ ಕೃಷ್ಣ ಪೂಜೆ ಮುಗಿಸಿದ ಕೃಷ್ಣಾಪುರ ಸ್ವಾಮೀಜಿ ಮಾಡಬೇಕಿತ್ತು. ಪುತ್ತಿಗೆ ಸ್ವಾಮೀಜಿ ಸಾಗರೋಲ್ಲಂಘನ ಮಾಡಿರುವುದರಿಂದ ಕೃಷ್ಣಾಪುರ ಶ್ರೀಗಳ ಅನುಪಸ್ಥಿತಿಯ ನಡುವೆಯೂ ಅದಮಾರು ಶ್ರೀ ಗಳಿಂದ ಅಧಿಕಾರ ಹಸ್ತಾಂತರ ನಡೆಯಿತು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ನೀಡಿದ್ದ SC ಒಳಮೀಸಲಾತಿಯನ್ನ ಪುನರ್ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್
ಅದಮಾರು ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡಿಸಿದರು. ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಧಾರ್ಮಿಕ ವಿಧಿ ನಿರ್ವಹಣೆ ಮಾಡಿದರು. ಅಕ್ಷಯ ಪಾತ್ರೆ ಹಾಗೂ ಅನ್ನದ ಸೆಟ್ಟುಗ ಹಸ್ತಾಂತರ ಮಾಡಿದರು. ಪೂಜಾಧಿಕಾರ ಹಸ್ತಾಂತರದ ನಂತರ ಅರಳು ಗದ್ದುಗೆಯಲ್ಲಿ ಖಾಸಗಿ ದರ್ಬಾರ್ ನಡೆಯಿತು.