`ಮಿಸ್ ಇಂಡಿಯಾ ಸೂಪರ್ ಮಾಡೆಲ್’ ಪಟ್ಟ ಮುಡಿಗೇರಿಸಿಕೊಂಡ ಪುಟ್ಟಗೌರಿ

Public TV
1 Min Read
model ranjini 6

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಪೇಜ್ ಗಳ ಫೆವರೇಟ್ ಆಗಿದ್ದ `ಪುಟ್ಟಗೌರಿ’ ಪಾತ್ರಧಾರಿ ರಂಜನಿ ಈಗ `ಮಿಸ್ ಇಂಡಿಯಾ ಸೂಪರ್ ಮಾಡೆಲ್’ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

`ಪುಟ್ಟಗೌರಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಸಾಂಪ್ರದಾಯಸ್ಥ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈಗ ಫ್ಯಾಶನ್ ಲೋಕವನ್ನ ತನ್ನತ್ತ ತಿರುಗಿಸಿಕೊಂಡು ಮಿಂಚಿದ್ದಾರೆ.

ಇತ್ತೀಚೆಗೆ ಸ್ಟಾರ್ ಫಿಲ್ಮ್ ಮೇಕರ್ಸ್ ಸ್ಕೂಲ್ ಆಫ್ ಫ್ಯಾಷನ್ ವತಿಯಿಂದ `ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017′ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ರಂಜನಿ ಭಾಗವಹಿಸಿದ್ದು, ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಈ ವರ್ಷದ ಮಿಸ್ ಇಂಡಿಯಾ ಸೂಪರ್ ಮಾಡೆಲ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

model ranjini 3

ಸ್ಪರ್ಧೆಯಲ್ಲಿ ರಂಜನಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಮೊದಲನೇ ರನ್ನರ್ ಅಪ್ ಆಗಿ ಐಶ್ವರ್ಯ ಮತ್ತು ಎರಡನೇ ರನ್ನರ್ ಅಪ್ ಆಗಿ ಅನಿತಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಶೋನಲ್ಲಿ ಒಟ್ಟು 44 ರೂಪದರ್ಶಿಯರು ಭಾಗವಹಿಸಿದ್ದರು.

ರಂಜನಿ ಧಾರಾವಾಹಿಯ ಜೊತೆ ಸಿನಿಮಾ ಕೂಡ ಮಾಡುತ್ತಿದ್ದಾರೆ. ಇವರ ಮೊದಲ ಸಿನಿಮಾ `ರಾಜಹಂಸ’. ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಜಹಂಸ ಚಿತ್ರದ ನಂತರ ಸೂಫಿ ಎಂಬ ಹೊಸ ಚಿತ್ರಕ್ಕೆ ರಂಜನಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾವನ್ನು ಶಿವು ಜಮಖಂಡಿ ನಿರ್ದೇಶನ ಮಾಡುತ್ತಿದ್ದಾರೆ. `ಜಸ್ಟ್ ಆಕಸ್ಮಿಕ’ ಖ್ಯಾತಿಯ ನಟ ವಿನೋದ್ ಪಾಟೀಲ್ ಈ ಸಿನಿಮಾದ ನಾಯಕರಾಗಿದ್ದು, ರಮೇಶ್ ಅರವಿಂದ್ ಮತ್ತು ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

model ranjini 3 1

model ranjini 4

model ranjini 5

model ranjini 2

model ranjini 4 1

Share This Article
Leave a Comment

Leave a Reply

Your email address will not be published. Required fields are marked *