ಮಾಸ್ಕೋ: ಉಕ್ರೇನ್ ಡ್ರೋನ್ ದಾಳಿಯೊಂದಕ್ಕೆ (Ukraine Drone Attack) ರಷ್ಯಾದ ಉನ್ನತ ಕಮಾಂಡರ್‌ರೊಬ್ಬರು ಗಾಯಗೊಂಡಿದ್ದಾರೆ. ಆದರೆ ಈ ದಾಳಿಯ ಕೇಂದ್ರ ಬಿಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಆಗಿತ್ತು ಎಂದು ವಾಯು ರಕ್ಷಣಾ ವಿಭಾಗದ ಕಮಾಂಡರ್ ಯೂರಿ ಡ್ಯಾಶ್ಕಿನ್ ಆರೋಪ ಮಾಡಿದ್ದಾರೆ. ಈ ಘಟನೆ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಹೊಸ ತಿರುವು ನೀಡಿದೆ.
ಭಾನುವಾರ ರಾತ್ರಿ ರಷ್ಯಾದ ಗಡಿಯ ಸಮೀಪದಲ್ಲಿ ನಡೆದ ಈ ದಾಳಿಯಲ್ಲಿ ಉಕ್ರೇನ್ ಡ್ರೋನ್‌ಗಳು ರಷ್ಯಾದ ಸೇನಾ ಹೆಲಿಕಾಪ್ಟರ್‌ವೊಂದನ್ನು ಗುರಿಯಾಗಿಸಿವೆ. ಈ ಹೆಲಿಕಾಪ್ಟರ್‌ನಲ್ಲಿ ಪುಟಿನ್ ಆಪ್ತ ಕಮಾಂಡರ್ ಇದ್ದರು ಎಂದು ತಿಳಿದುಬಂದಿದೆ. ದಾಳಿಯಿಂದ ಕಮಾಂಡರ್ ಗಾಯಗೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ರಷ್ಯಾದ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಮೇಲೆ ಸುಳ್ಳು ಆರೋಪ – ಅದಕ್ಕೆ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್: ಹೆಚ್.ಕೆ ಪಾಟೀಲ್
ಈ ದಾಳಿಯನ್ನು ಉಕ್ರೇನ್ ಸೇನೆಯ ವಿಶೇಷ ಡ್ರೋನ್ ತಂಡವು ಯೋಜಿಸಿತ್ತು. ಇದು ರಷ್ಯಾದ ಸೇನಾ ಚಟುವಟಿಕೆಗಳಿಗೆ ತಕ್ಕ ಪ್ರತಿಕ್ರಿಯೆ ಎಂದು ಉಕ್ರೇನ್‌ನ ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ. ರಷ್ಯಾದ ಕ್ರೆಮ್ಲಿನ್ ಈ ದಾಳಿಯನ್ನು ಖಂಡಿಸಿದ್ದು, ಉಕ್ರೇನ್‌ನ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಘಟನೆಯಿಂದ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಇದನ್ನೂ ಓದಿ: ಒಂದು ವಾರದಲ್ಲಿ ದೇಶದಲ್ಲಿ 752 ಮಂದಿಗೆ ಕೊರೊನಾ ಸೋಂಕು – ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ
ಭಾನುವಾರ ಉಕ್ರೇನ್ ವಿರುದ್ಧ ರಷ್ಯಾ ಮಾರಣಾಂತಿಕ ಡ್ರೋನ್ ದಾಳಿ ನಡೆಸಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆರಳಿ ಕೆಂಡವಾಗಿದ್ದಾರೆ. ಯುದ್ಧ ಪೀಡಿತ ಉಭಯ ರಾಷ್ಟ್ರಗಳು ದೊಡ್ಡ ಪ್ರಮಾಣದ ಕೈದಿಗಳ ವಿನಿಮಯ ಪೂರ್ಣಗೊಳಿಸಿದರೂ ರಷ್ಯಾ ಮತ್ತೆ ಡ್ರೋನ್ ದಾಳಿ ನಡೆಸಿ ಹಲವರ ಸಾವಿಗೆ ಕಾರಣವಾಗಿರುವುದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ‘ಕ್ರೇಜಿ’ (ಹುಚ್ಚ) ಎಂದು ಟ್ರಂಪ್ ಕರೆದಿದ್ದಾರೆ. ಭಾನುವಾರ ರಾತ್ರಿ ಉಕ್ರೇನ್ ವಿರುದ್ಧ ರಷ್ಯಾ ಬೃಹತ್ ಡ್ರೋನ್ ದಾಳಿ ನಡೆಸಿದ್ದರಿಂದ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸದ್ಯದಲ್ಲೇ ರಾಜನಾಥ್ ಭೇಟಿ, ಡಿಫೆನ್ಸ್ ಕಾರಿಡಾರ್‌ಗೆ ಪಟ್ಟು: ಎಂಬಿಪಿ
ವ್ಲಾಡಿಮಿರ್ ಪುಟಿನ್ ಅವರೊಂದಿಗೆ ತಾಳ್ಮೆ ಕಳೆದುಕೊಳ್ಳುತ್ತಿರುವುದಾಗಿ ಟ್ರಂಪ್ ಸ್ಪಷ್ಟಪಡಿಸಿದ್ದು, ರಷ್ಯಾದ ನಾಯಕನ ವಿರುದ್ಧ ತೀಕ್ಷ್ಣವಾಗಿ ಟೀಕೆಗಳನ್ನು ಮಾಡಿದ್ದಾರೆ. ಪುಟಿನ್ ಜೊತೆಗೆ ಯಾವಾಗಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ ಅವರಿಗೆ ಏನೋ ಆಗಿದೆ. ಅವರು ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ವಚ್ಛವಾಹಿನಿ ಚಾಲಕಿಯರ ವೇತನ, ಸೌಲಭ್ಯಗಳ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿ: ಪ್ರಿಯಾಂಕ್ ಖರ್ಗೆ