ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್

Public TV
2 Min Read
PUTIN

ಮಾಸ್ಕೋ: ಆರ್ಥಿಕ ನಿರ್ಬಂಧ ಹೇರಿದ ನ್ಯಾಟೋ ರಾಷ್ಟ್ರಗಳಿಗೆ ಈಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತೈಲ ಶಾಕ್ ನೀಡಿದ್ದಾರೆ.

ಉಕ್ರೇನ್ ಮೇಲೆ ಸಮರ ಸಾರಿದ ಬಳಿಕ ಡಾಲರ್ ಮುಂದೆ ದಿನೇ ದಿನೇ ರಷ್ಯದ ಕರೆನ್ಸಿ ರುಬೆಲ್ ಮೌಲ್ಯ ಕಡಿಮೆಯಾಗುತ್ತಿದೆ. ಇದನ್ನು ಸರಿ ಮಾಡಲು ಪುಟಿನ್ ತನ್ನ ವಿರೋಧಿ ರಾಷ್ಟ್ರಗಳು ರುಬೆಲ್ ಮೂಲಕವೇ ತೈಲ ಖರೀದಿ ಮಾಡಬೇಕು ಎಂದು ಆದೇಶ ಪ್ರಕಟಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

OIL 2

ಉಕ್ರೇನ್ ಮೇಲೆ ಯುದ್ಧದಿಂದಾಗಿ ಹಲವು ದೇಶಗಳು ರಷ್ಯಾದ ಕಚ್ಚಾತೈಲದ ಮೇಲೆ ನಿರ್ಬಂಧ ಹೇರಿದೆ. ಯುರೋಪಿಯನ್ ಕಮಿಷನ್ ಸಹ ಈ ವರ್ಷ ರಷ್ಯಾದ ಅನಿಲದ ಮೇಲಿನ ಯುರೋಪಿಯನ್ ಅವಲಂಬನೆ 2/3 ರಷ್ಟು ಕಡಿತಗೊಳಿಸಲು ಯೋಜಿಸಿದ್ದು, 2030ರ ವೇಳೆಗೆ ರಷ್ಯಾದ ಮೇಲಿನ ಅವಲಂಬನೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಚಿಂತನೆ ನಡೆಸಿವೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

ಈ ನಡುವೆಯೂ ಹಲವು ಯುರೋಪಿಯನ್ ದೇಶಗಳು ರಷ್ಯಾದ ತೈಲದ ಮೇಲೆ ಅವಲಂಬಿತವಾಗಿದೆ. ಜರ್ಮನಿಯ ಅನೇಕ ಕಂಪನಿಗಳು ರಷ್ಯಾದದಿಂದ ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡುತ್ತಿವೆ. ಹೀಗಾಗಿ ಈಗ ತನ್ನ ವಿರುದ್ಧ ನಿರ್ಬಂಧ ಹೇರಿದ್ದಕ್ಕೆ ಪ್ರತಿಯಾಗಿ ರಷ್ಯಾ ತನ್ನ ಸ್ನೇಹಿಯಲ್ಲದ ರಾಷ್ಟ್ರಗಳು ರುಬೆಲ್ ಮೂಲಕವೇ ತೈಲ ಖರೀದಿಸಬೇಕಿದೆ ಎಂಬ ಷರತ್ತನ್ನು ವಿಧಿಸಿದೆ.

crude oil

ಯುರೋಪಿಯನ್ ದೇಶಗಳ ಬಳಕೆಯ ಒಟ್ಟು ಅನಿಲಯದಲ್ಲಿ ಶೇ.40 ರಷ್ಟು ಅನಿಲವನ್ನು ರಷ್ಯಾ ಒಳಗೊಂಡಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಬ್ಯಾರಲ್‍ಗೆ 100 ಡಾಲರ್ (ಸುಮಾರು 7,594.67 ರೂ.) ಇದ್ದ ಕಚ್ಚಾತೈಲ 140 ಡಾಲರ್‍ಗೆ (ಸುಮಾರು 10,632.53 ರೂ.) ತಲುಪಿದೆ. ಅಲ್ಲದೆ, ಕೆಲವು ಯುರೋಪಿಯನ್ ದೇಶಗಳು ಅನಿಲ ಬೆಲೆಯನ್ನು ಬುಧವಾರ ಶೇ.30ರಚ್ಚು ಹೆಚ್ಚಿಸಿದೆ. ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ತೈಲ ಕಂಪನಿಗಳು ಅಂದಾಜಿಸಿವೆ. ಹಾಗಾಗಿ ಎದುರಾಳಿ ದೇಶಗಳನ್ನು ಬಗ್ಗು ಬಡಿಯಲು ಪುಟಿನ್  ಷರತ್ತನ್ನು ವಿಧಿಸಿದ್ದಾರೆ.

india usa crude oil storage 4

ವಿರೋಧಿ ರಾಷ್ಟ್ರಗಳು ರಷ್ಯಾ ದೇಶಗಳಿಂದ ಅನಿಲ ಖರೀದಿಯನ್ನು ರುಬೆಲ್ ಮೂಲಕವೇ ಖರೀದಿಸಬೇಕು. ನಮ್ಮ ಅನಿಲ ಬೇಕಾದರೆ, ನಮ್ಮ ದೇಶದ ಕರೆನ್ಸಿಯಲ್ಲೇ ವಹಿವಾಟು ನಡೆಸಬೇಕು. ರಷ್ಯಾವು ಹಿಂದೆ ತೀರ್ಮಾನಿಸಿದ ಒಪ್ಪಂದಗಳಂತೆ ನಿಗದಿತ ಬೆಲೆಗಳಿಗೆ ಅನುಗುಣವಾಗಿ ಕಚ್ಚಾತೈಲ ಪೂರೈಕೆ ಮಾಡುವುದನ್ನು ಮುಂದುವರಿಸುತ್ತದೆ. ಆದರೆ, ನಮ್ಮ ಕರೆನ್ಸಿಯಲ್ಲೇ ಅವರು ವ್ಯವಹರಿಸಬೇಕು ಎಂದು ಪುಟಿನ್ ಷರತ್ತು ವಿಧಿಸಿದ್ದಾರೆ.

ಯುದ್ಧ ಆರಭದ ಬಳಿಕ ಒಂದು ಡಾಲರ್ ರುಬೆಲ್ ಮೌಲ್ಯ 100ರ ಗಡಿ ದಾಟಿತ್ತು. ಪುಟಿನ್ ನಿರ್ಧಾರದ ಬಳಿಕ ರುಬೆಲ್ ಬಲವಾಗಿದ್ದು ಒಂದು ಡಾಲರ್ ರುಬೆಲ್ ಮೌಲ್ಯ 98 ವಿನಿಮಯವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *