ಯುದ್ಧಭೂಮಿಯಲ್ಲೂ ನಿಲ್ಲದ ಪ್ರೇಮ – ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಿನ್ ಪ್ರೇಯಸಿ ಮತ್ತೆ ಗರ್ಭಿಣಿ

Public TV
2 Min Read
PUTIN WIFE

ಮಾಸ್ಕೋ: ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಅದು ಯಾರಿಗೆ ಯಾವಾಗ ಬೇಕಾದರೂ ಆಗಬಹುದು. ಹಾಗೆಯೇ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ 69 ವರ್ಷದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸತತ ಉಕ್ರೇನ್ ನಡುವಿನ ಯುದ್ಧದ ಬ್ಯೂಸಿಯಲ್ಲೂ ಪ್ರೇಮಕ್ಕೂ ಸೈ ಎಂದಿದ್ದಾರೆ.

putin daughters

ತನ್ನ ಪ್ರೇಯಸಿ ಜಿಮ್‌ಪಟು ಅಲಿನಾ ಕಬೀವಾ ಜೊತೆ ಪ್ರತ್ಯಕ್ಷರಾದ ಪುಟಿನ್ ಆಕೆ ಗರ್ಭಿಣಿಯಾಗಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಜಿಮ್ ಪಟು 3ನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ದೊರೆಗೆ ಈ ಸುದ್ದಿ ಖುಷಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ಗೆ ಕೊರೊನಾ ಪಾಸಿಟಿವ್‌

ಈ ದಂಪತಿ ಈಗಾಗಲೇ 2 ಮಕ್ಕಳನ್ನು ಹೊಂದಿದ್ದಾರೆ. ಮುಂದಿನ ಅಕ್ಟೋಬರ್ ತಿಂಗಳಿಗೆ ಪುಟಿನ್‌ಗೆ 70 ವರ್ಷ ಪೂರ್ಣಗೊಳ್ಳಲಿದೆ. ಕ್ಯಾನ್ಸರ್ ಚಿಕಿತ್ಸೆಯಿಂದ ಬಳಲುತ್ತಿರುವ ಪುಟಿನ್‌ಗೆ ಕೆಲ ದಿನಗಳಲ್ಲೇ ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ನಡುವೆ ಅವರು 3ನೇ ಮಗುವಿಗೆ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

putin

ಯಾರಿದು ಅಲಿನಾ ಕಬೀವಾ? ಅಲಿನಾ ಯಶಸ್ವಿ ಜಿಮ್ ಪಟು. ಈಕೆ 2 ಬಾರಿ ಒಲಿಂಪಿಕ್ಸ್ ಪದಕ, 14 ವಿಶ್ವಚಾಂಪಿಯನ್ ಹಾಗೂ 21 ಬಾರಿ ಯುರೋಪಿಯನ್ ಚಾಂಪಿಯನ್ ಶಿಪ್ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪುಟಿನ್ ಹಾಗೂ ಅಲಿನಾ ಮೊದಲಿನಿಂದಲೂ ಪ್ರೀತಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಪುಟಿನ್ ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದೀಗ 3ನೇ ಮಗುವಿಗೆ ತಂದೆಯಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ವಿಷಯ ಬಹಿರಂಗಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ

putin Alina Kabaeva (1)

1983 ರಲ್ಲಿ ಲ್ಯುಡ್ಮಿಲಾ ಅಲೆಕ್ಸಾಂಡ್ರೊವ್ನಾ ಒಚೆರೆಟ್ನಾಯಾ ಅವರನ್ನು ವಿವಾಹವಾಗಿದ್ದ ಪುಟಿನ್ 30 ವರ್ಷಗಳ ಕಾಲ ಒಟ್ಟಿಗೆ ಸಂಸಾರ ಮಾಡಿ ನಂತರ ಇಬ್ಬರೂ 2014 ರಲ್ಲಿ ವಿಚ್ಛೇದನ ಪಡೆದರು. ಪುಟಿನ್ ಮತ್ತು ಲ್ಯುಡ್ಮಿಲಾ ಅವರಿಗೆ ಮರಿಯಾ ಪುಟಿನ್ ಮತ್ತು ಕಟೆರಿನಾ ಟಿಖೋನೋವಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪುಟಿನ್‌ನಿಂದ ವಿಚ್ಛೇದನ ಪಡೆದ ಲ್ಯುಡ್ಮಿಲಾ ತನಗಿಂತ 21 ವರ್ಷದ ಕಿರಿಯ ಉದ್ಯಮಿಯನ್ನು ವಿವಾಹವಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *