ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಬೂಟಾಟಿಕೆಯನ್ನು ಬಯಲು ಮಾಡಿದ್ದಾರೆ. ಅಮೆರಿಕ ಈಗಲೂ ನಮ್ಮಿಂದ ಪರಮಾಣು ಇಂಧನವನ್ನು ಖರೀದಿಸುತ್ತಿರುವಾಗ ಭಾರತ ಯಾಕೆ ಕಚ್ಚಾ ತೈಲ ಖರೀದಿಸಬಾರದು ಎಂದು ರಷ್ಯಾ (Russia) ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಶ್ನಿಸಿದ್ದಾರೆ.
ಭಾರತಕ್ಕೆ ಬರುವ ಮೊದಲೇ ರಷ್ಯಾದಲ್ಲಿ ಭಾರತದ (India) ಮಾಧ್ಯಮಕ್ಕೆ ಪುಟಿನ್ ವಿಶೇಷ ಸಂದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ರಷ್ಯಾದಿಂದ ತೈಲ ಖರೀದಿಸದಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹಾಕುತ್ತಿರುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದನ್ನೂ ಓದಿ: ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ ಮೋದಿ, ಪುಟಿನ್
Recently, Trump remarked that by buying oil from Russia, India is “funding the Russia-Ukraine war.” How would you characterize him?: @AnjanaOmKashyap asks
𝐈 𝐧𝐞𝐯𝐞𝐫 𝐠𝐢𝐯𝐞 𝐜𝐡𝐚𝐫𝐚𝐜𝐭𝐞𝐫 𝐚𝐬𝐬𝐞𝐬𝐬𝐦𝐞𝐧𝐭𝐬 𝐨𝐟 𝐦𝐲 𝐜𝐨𝐥𝐥𝐞𝐚𝐠𝐮𝐞𝐬: #VladimirPutin… pic.twitter.com/pudFEhJnnW
— IndiaToday (@IndiaToday) December 4, 2025
ಅಮೆರಿಕ ತನ್ನ ಪರಮಾಣು ವಿದ್ಯುತ್ ಸ್ಥಾವರಗಳಿಗಾಗಿ ನಮ್ಮಿಂದ ಪರಮಾಣು ಇಂಧನವನ್ನು (Nuclear Fuel) ಖರೀದಿಸುತ್ತಿದೆ. ಅಮೆರಿಕವು ನಮ್ಮ ಇಂಧನವನ್ನು ಖರೀದಿಸುವ ಹಕ್ಕನ್ನು ಹೊಂದಿದ್ದರೆ, ಭಾರತವು ಅದೇ ಸವಲತ್ತು ಏಕೆ ಹೊಂದಿರಬಾರದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನನ್ನ ಸ್ನೇಹಿತ ಪುಟಿನ್‌ರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ: ಮೋದಿ
ಆರಂಭದಲ್ಲಿ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ ಟ್ರಂಪ್ 25% ಸುಂಕವನ್ನು ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನ ಆಮದು ಮಾಡುತ್ತಿರುವುದಕ್ಕೆ ದಂಡವಾಗಿ 50% ಸುಂಕವನ್ನು ಹೇರಿದ್ದಾರೆ.

