ಮಾಸ್ಕೋ: 2ನೇ ವಿಶ್ವ ಮಹಾಯುದ್ಧದ ನಂತರ ಅತಿಹೆಚ್ಚು ಸಾವು-ನೋವು ಕಂಡ ರಷ್ಯಾ-ಉಕ್ರೇನ್ ಯುದ್ಧ (Russia Ukraine War) ಬರೋಬ್ಬರಿ 1,000 ದಿನಗಳನ್ನು ಪೂರೈಸಿದೆ. ಈ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೊಸ ಪರಮಾಣು ನೀತಿಯನ್ನು ಅನುಮೋದಿಸಿದ್ದಾರೆ. ಈ ಮೂಲಕ ಉಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಎಚ್ಚರಿಕೆ ನೀಡಿದ್ದಾರೆ.
Advertisement
2022ರ ಫ್ರೆಬ್ರವರಿ 24ರಂದು ಶುರುವಾದ ಯುದ್ಧ 1,000 ದಿನಗಳನ್ನು ಪೂರೈಸುತ್ತಿದ್ದಂತೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಪುಟಿನ್ ಒಪ್ಪಿಗೆ ನೀಡಿದ್ದಾರೆ. ಮಂಗಳವಾರ ಪರಿಷ್ಕೃತ ಪರಮಾಣು ಸಿದ್ಧಾಂತಕ್ಕೆ (Nuclear Deterrent Policy) ಸಹಿ ಹಾಕಿದ್ದು, ಪರಮಾಣು ಶಕ್ತಿ ಬೆಂಬಲಿತವಾಗಿರುವ ಯಾವುದೇ ರಾಷ್ಟ್ರವು ರಷ್ಯಾದ ಮೇಲೆ ನಡೆಸುವ ಸಾಂಪ್ರದಾಯಿಕ ದಾಳಿಯನ್ನು ಜಂಟಿ ದಾಳಿ ಎಂದು ಪರಿಗಣಿಸುವುದಾಗಿ ಘೋಷಿಸಿದ್ದಾರೆ.
Advertisement
Advertisement
ರಷ್ಯಾದ ಮೇಲೆ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಅಮೆರಿಕ ಉಕ್ರೇನ್‌ಗೆ ಒಪ್ಪಿಗೆ ನೀಡಿದ ಒಂದು ದಿನದ ನಂತರ ಪುಟಿನ್ ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?
Advertisement
ಅನಿವಾರ್ಯತೆ ಬಂದ್ರೆ ಯೋಚಿಸಲ್ಲ:
ಇದೇ ವೇಳೆ ಕ್ರೆಮ್ಲಿನ್ (Kremlin) ಉಕ್ರೇನ್ ಅನ್ನು ಸೋಲಿಸಲು ಪ್ರತಿಜ್ಞೆ ಮಾಡಿದೆ. ಕೈವ್‌ಗೆ ಪಾಶ್ಚಿಮಾತ್ಯ ದೇಶಗಳ ಬೆಂಬಲದಿಂದ ಸಂಘರ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ದಾಳಿ ಮುಂದುವರಿಯುತ್ತದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಎಚ್ಚರಿಸಿದ್ದಾರೆ.
ಅಲ್ಲದೇ ರಷ್ಯಾ ಯಾವಾಗಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಕೊನೆಯ ಅಸ್ತ್ರವಾಗಿ ಬಳಕೆ ಮಾಡಲು ನಿರ್ಧರಿಸಿದೆ. ಅನಿವಾರ್ಯ ಅನ್ನಿಸಿದ್ರೆ ಬಳಸಲು ಹಿಂದೆ ಮುಂದೆ ಯೋಚಿಸಲ್ಲ ಎಂದು ಪೆಸ್ಕೋವ್ ಹೇಳಿದ್ದಾರೆ. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ
ಅಮೆರಿಕ ಉಕ್ರೇನ್‌ಗೆ ಹೇಳಿದ್ದೇನು?
ರಷ್ಯಾ-ಉಕ್ರೇನ್ (Russia- Ukraine) ಯುದ್ಧ ನಿಲ್ಲಿಸುತ್ತೇನೆಂದು ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದರ ಹೊರತಾಗಿಯೂ ಇನ್ನೆರಡು ತಿಂಗಳು ಅಧಿಕಾರದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ರಷ್ಯಾ ವಿರುದ್ಧ ಯುದ್ಧ ಮಾಡುವಂತೆ ಉಕ್ರೇನ್‌ಗೆ ಅನುಮತಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್ – ಭಾರತದಲ್ಲಿ ಏನಾಗ್ತಿದೆ?
ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ಕ್ಷಿಪಣಿ ದಾಳಿ ನಡೆಸಲು ಯೋಜಿಸಿದೆ ಎಂದು ವರದಿಯಾಗಿದೆ. ಉತ್ತರ ಕೊರಿಯಾದ ಪಡೆಗಳನ್ನು ರಷ್ಯಾ ನಿಯೋಜಿಸಿದ ಬೆನ್ನಲ್ಲೇ ಈ ಮಹತ್ವದ ವಿದ್ಯಮಾನ ನಡೆದಿದೆ. 190 ಮೈಲುಗಳವರೆಗೆ (306 ಕಿಮೀ) ವ್ಯಾಪ್ತಿಯನ್ನು ಹೊಂದಿರುವ ಎಟಿಎಸಿಎಂಎಸ್ ರಾಕೆಟ್‌ಗಳನ್ನು ಬಳಸಿಕೊಂಡು ಮೊದಲ ದಾಳಿಯನ್ನು ಉಕ್ರೇನ್ ನಡೆಸುವ ಸಾಧ್ಯತೆಯಿದೆ. ಇದಕ್ಕೆ ಜೋ ಬೈಡನ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿತ್ತು.
120 ಕ್ಷಿಪಣಿಗಳಿಂದ ದಾಳಿ:
ಉಕ್ರೇನ್‌ನ ಇಂಧನ ಮೂಲಭೂತ ಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಹಾರಿಸಿದೆ. ಇದರಿಂದಾಗಿ ಇಬ್ಬರು ನಾಗರಿಕರು ಮೃತಪಟ್ಟದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಇದನ್ನೂ ಓದಿ: 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?