ಮಾಸ್ಕೋ: ರಷ್ಯಾದ ಸೇನೆ ಪ್ರಮುಖ ಉಕ್ರೇನಿಯನ್ ನಗರವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಎಲ್ಲ ಉಕ್ರೇನಿಯನ್ನರಿಗೆ ರಷ್ಯಾದ ಪೌರತ್ವವನ್ನು ಪಡೆಯುವ ವೇಗದ ವಿಧಾನವನ್ನು ವಿಸ್ತರಿಸಿದರು.
ಈ ಯೋಜನೆಯೂ ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ ಮೇಲೆ ಮಾಸ್ಕೋದ ಪ್ರಭಾವವನ್ನು ಬಲಪಡಿಸುವ ಮತ್ತೊಂದು ಪ್ರಯತ್ನವಾಗಿದೆ. ಇಲ್ಲಿವರೆಗೂ ಉಕ್ರೇನ್‍ನ ಪ್ರತ್ಯೇಕತಾವಾದಿ ಪೂರ್ವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶದ ನಿವಾಸಿಗಳು, ಹಾಗೆಯೇ ದಕ್ಷಿಣದ ಝಪೊರಿಝಿಯಾ ಮತ್ತು ಖೆರ್ಸನ್ ಪ್ರದೇಶದ ನಿವಾಸಿಗಳು ಮತ್ತು ಈಗ ರಷ್ಯಾದ ನಿಯಂತ್ರಣದಲ್ಲಿರುವ ಹೆಚ್ಚಿನ ಭಾಗದ ಜನರು ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹಿನ್ನೆಲೆ ಪುಟಿನ್ ಅವರು ಇದರ ವಿಧಾನವನ್ನು ವೇಗವಾಗಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ – ಮಳೆ ದೇವನಿಗೆ ಸ್ಥಳೀಯರಿಂದ ವಿಶೇಷ ಪೂಜೆ
Advertisement
Advertisement
ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕ್ಲುಬಾ ಅವರು ಪಾಸ್‍ಪೋರ್ಟ್ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದು ಉಕ್ರೇನ್‍ನಲ್ಲಿರುವ ನಿವಾಸಿಗಳಿಗೂ ಅನ್ವಯಿಸುತ್ತದೆ.
Advertisement
ನಮ್ಮ ರಾಜ್ಯದ ಆಕ್ರಮಿತ ಪ್ರದೇಶಗಳ ನಿವಾಸಿಗಳ ಕುತ್ತಿಗೆಗೆ ಕುಣಿಕೆಯನ್ನು ಬಿಗಿಗೊಳಿಸಲು ಪಾಸ್‍ಪೋರ್ಟ್‍ಗಳನ್ನು ನೀಡಲು ರಷ್ಯಾ ಸರಳೀಕೃತ ವಿಧಾನವನ್ನು ಬಳಸುತ್ತಿದೆ. ಆಕ್ರಮಿತ ಆಡಳಿತಗಳು ಮತ್ತು ರಷ್ಯಾದ ಆಕ್ರಮಣಕಾರಿ ಸೈನ್ಯದ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಈ ಮೂಲಕ ಒತ್ತಾಯಿಸುತ್ತಿದೆ ಎಂದು ಉಕ್ರೇನ್‍ನ ವಿದೇಶಿ ಸಚಿವಾಲಯ ಹೇಳಿಕೆಯಲ್ಲಿ ಸೇರಿಸಿದೆ.
Advertisement
2019 ರ ನಡುವೆ, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ದ 7,20,000 ಜನರಲ್ಲಿ ಸುಮಾರು 18% ಜನರು ರಷ್ಯಾದ ಪಾಸ್‍ಪೋರ್ಟ್‍ಗಳನ್ನು ಸ್ವೀಕರಿಸಿದ್ದಾರೆ. ಇದನ್ನೂ ಓದಿ: ʼಬೆಲ್ಲದ ದೋಸೆʼ ಮಾಡುವ ಸೂಪರ್ ವಿಧಾನ