ಮಾಸ್ಕೋ: ಎರಡನೇ ಬಾರಿಗೆ ಅಮೆರಿಕದ ಶ್ವೇತಭವನದ ಗದ್ದುಗೆ ಏರಿದ ಡೊನಾಲ್ಡ್ ಟ್ರಂಪ್‌ಗೆ (Donald Trump) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶುಭಾಶಯ ತಿಳಿಸಿದ್ದಾರೆ.
ಮಂಗಳವಾರದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಟ್ರಂಪ್ ಸೋಲಿಸಿದ ನಂತರ ದಕ್ಷಿಣ ನಗರವಾದ ಸೋಚಿಯಲ್ಲಿ ವಾಲ್ಡೈ ಫೋರಂಗೆ ನೀಡಿದ ಹೇಳಿಕೆಯಲ್ಲಿ, ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಪುಟಿನ್ ಹೇಳಿದ್ದಾರೆ. ಇದನ್ನೂ ಓದಿ: ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್
ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲು ನೀವು ಮುಕ್ತರಾಗಿದ್ದೀರಾ ಎಂಬ ಪ್ರಶ್ನೆಗೆ, ರಷ್ಯಾದ ನಾಯಕ ‘ಹೌದು, ನಾನು ಸಿದ್ಧ’ ಎಂದು ಉತ್ತರಿಸಿದ್ದಾರೆ.
ಬುಧವಾರ ಬೆಳಗ್ಗೆಯಿಂದ ಬಹುಶಃ 70 ವಿಶ್ವ ನಾಯಕರೊಂದಿಗೆ ಮಾತನಾಡಿದ್ದೇನೆ. ಆದರೆ, ಪುಟಿನ್ ಅವರೊಂದಿಗೆ ಮಾತನಾಡಲಿಲ್ಲ. ಅವರು ಹ್ಯಾರಿಸ್ ಗೆಲ್ಲಲು ಬಯಸುತ್ತಾರೆ ಎಂದು ನಗು ಬೀರುತ್ತಾ ಟ್ರಂಪ್ ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಬ್ರೇಕ್ ಹಾಕಲು ಮುಂದಾದ ಟ್ರಂಪ್
ಅಮೆರಿಕದ ತನಿಖಾ ವರದಿಗಾರ ಬಾಬ್ ವುಡ್‌ವರ್ಡ್ ಅವರ ಹೊಸ ಪುಸ್ತಕದಲ್ಲಿ, ಜೋ ಬೈಡೆನ್ ಅವರ ಅಧ್ಯಕ್ಷತೆಯಲ್ಲಿ ಟ್ರಂಪ್ ಮತ್ತು ಪುಟಿನ್ ಏಳು ಬಾರಿ ಮಾತನಾಡಿರಬಹುದು ಎಂದು ಪ್ರತಿಪಾದಿಸಿದ್ದಾರೆ. ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಪ್ರಚಾರವನ್ನು ಹೆಚ್ಚಿಸಲು ಮಾಸ್ಕೋ 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯಪ್ರವೇಶಿಸಿತ್ತು ಎಂಬ ಆರೋಪಗಳೂ ಇವೆ.